ರಾಜಸ್ಥಾನ: ಹನುಮಾನ್ ಘರ್ ಕ್ಷೇತ್ರದಲ್ಲಿ ಗೆಲ್ಲುವವರ್ಯಾರು?
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಹನುಮಾನ್ ಘರ್ ಸಹ ಒಂದು. ಕಾಂಗ್ರೆಸ್ ನ ಭದ್ರಕೋಟೆ ಎಂದು ಕರೆಸಿಕೊಂಡಿದ್ದ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳೂ 4 ಬಾರಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.
ಇಲ್ಲಿ 1957 ರಿಂದ ಇಲ್ಲಿಯವರೆಗೆ ನಡೆದ 13 ವಿಧಾನಸಭೆ ಚುನಾವಣೆಗಳಲ್ಲಿ 6 ರಲ್ಲಿ ಕಾಂಗ್ರೆಸ್, 3 ರಲ್ಲಿ ಬಿಜೆಪಿ ಮತ್ತು 4 ಬಾರಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 387588 ಜನಸಂಖ್ಯೆ ಇದ್ದು, ಶೇ.74 ರಷ್ಟು ಹಿಂದುಗಳಿದ್ದರೆ, ಶೇ.17 ರಷ್ಟು ಸಿಕ್ಖರು, ಶೇ.8 ರಷ್ಟು ಮುಸ್ಲಿಮರಿದ್ದಾರೆ.
ಒಟ್ಟು 52.34 ಪ್ರತಿಶತ ಪುರುಷ ಮತ್ತು ಶೇ.47.66 ರಷ್ಟು ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
2013 ರ ಚುನಾವಣೆಯಲ್ಲಿ ಬಿಜೆಪಿಯ ರಾಮ ಪ್ರತಾಪ್ ಅವರು 88387 ಮತಗಳನ್ನು ಪಡೆದು, ಕಾಂಗ್ರೆಸ್ಸಿನ ವಿನೋದ್ ಕುಮಾರ್ ಅವರನ್ನು ಸೋಲಿಸಿದ್ದರು. ವಿನೋದ್ ಕುಮಾರ್ ಅವರು 57900 ಮತಗಳನ್ನು ಗಳಿಸಿದ್ದರು.
ಚುನಾವಣೆ ಡಿ.7 ರಂದು ನಡೆಯಲಿದ್ದು, ಫಲಿತಾಂಶ ಡಿ.11 ರಂದು ಹೊರಬೀಳಲಿದೆ.













Click it and Unblock the Notifications