Power tariff in Karnataka; ವಿದ್ಯುತ್ ದರ ಎಷ್ಟು ಹೆಚ್ಚಳವಾಗಿದೆ?

ಬೆಂಗಳೂರು, ಏಪ್ರಿಲ್ 04; ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆಯಾಗಿವೆ. ಪ್ರತಿ ಯೂನಿಟ್‌ಗೆ ಸರಾಸರಿ 35 ಪೈಸೆ ದರ ಹೆಚ್ಚಳ ಮಾಡಲಾಗಿದ್ದು, ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಹೊಸ ದರಗಳು ಜಾರಿಗೆ ಬರಲಿವೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹಂಗಾಮಿ ಅಧ್ಯಕ್ಷ ಮಂಜುನಾಥ್ ದರ ಏರಿಕೆಯ ವಿವರಗಳನ್ನು ಪ್ರಕಟಿಸಿದರು. ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೂ ಅನ್ವಯವಾಗುವಂತೆ ಸರಾಸರಿ 35 ಪೈಸೆ ಹೆಚ್ಚಳವಾಗಿದೆ.

Power Tariff Hike In Karnataka Hike List Infographics

ಎಲ್ಲಾ ಎಸ್ಕಾಂಗಳು ಪ್ರತಿ ಯೂನಿಟ್‌ಗೆ ಸರಾಸರಿ 1.85 ರೂ. ಹೆಚ್ಚಳ ಮಾಡಲು ಮನವಿ ಮಾಡಿದ್ದವು. ಕೆಇಆರ್‌ಸಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಜನರ ಅಭಿಪ್ರಾಯ, ಎಸ್ಕಾಂಗಳ ಪ್ರಸ್ತಾವನೆ, ಹಿಂದಿನ ವರ್ಷದ ನಷ್ಟ ಮುಂತಾದವುಗಳನ್ನು ಪರಿಗಣಿಸಿ ಪ್ರತಿ ಯೂನಿಟ್‌ಗೆ 35 ಪೈಸೆ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ.

ಪ್ರತಿ ಯೂನಿಟ್‌ಗೆ 5 ಪೈಸೆಗಳ ಇಂಧನ ಶುಲ್ಕ ಹಾಗೂ ಪ್ರತಿ ಹೆಚ್.ಪಿ/ ಕಿ. ವಾ/ ಕೆ. ವಿ. ಎ.ಗೆ 10 ರಿಂದ 30 ರೂ. ತನಕ ನಿಗದಿತ ಶುಲ್ಕಗಳನ್ನು ಹೆಚ್ಚಳ ಮಾಡಲು ಅನುಮೋದಿಸಲಾಗಿದೆ. ಇದರಿಂದಾಗಿ ಶೇ 4.33ರಷ್ಟು ದರ ಏಕೆಯಾಗಿದೆ ಎಂದು ಕೆಇಆರ್‌ಸಿ ಹೇಳಿದೆ.

ಬೆಸ್ಕಾಂ ಪ್ರತಿ ಯೂನಿಟ್‌ಗೆ 158 ಪೈಸೆ ಏರಿಕೆಗೆ ಮನವಿ ಮಾಡಿತ್ತು, ಈಗ ಶೇ 19.68ರಷ್ಟು ಏರಿಕೆ ಮಾಡಲಾಗಿದೆ. ಮೆಸ್ಕಾಂ 132 ಪೈಸೆ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಈಗ ಶೇ 17.60ಯಷ್ಟು ಏರಿಕೆ ಮಾಡಲಾಗಿದೆ.

ಚೆಸ್ಕಾಂ ಪ್ರತಿ ಯೂನಿಟ್‌ಗೆ 227 ಪೈಸೆ ಏರಿಕೆಗೆ ಬೇಡಿಕೆ ಇಟ್ಟಿತ್ತು, ಈಗ ಶೇ 30.45ರಷ್ಟು ಏರಿಕೆ ಮಾಡಲಾಗಿದೆ. ಹೆಸ್ಕಾಂ ಪ್ರತಿ ಯೂನಿಟ್‌ಗೆ 217 ಪೈಸೆ ಏರಿಕೆಗೆ ಮನವಿ ಮಾಡಿತ್ತು. ಈಗ ಶೇ 29.33ರಷ್ಟು ದರ ಏರಿಕೆಯಾಗಿದೆ. ಜೆಸ್ಕಾಂ ಪ್ರತಿ ಯೂನಿಟ್‌ಗೆ 236 ಪೈಸೆ ಏರಿಕೆಗೆ ಮನವಿ ಮಾಡಿತ್ತು. ಶೇ 30.52 ರಷ್ಟು ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+