Infographics: ನ.10 ರಂದು ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ಬೆಂಗಳೂರು, ನವೆಂಬರ್ 10: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನವೆಂಬರ್ 10 ರಂದು ಬುಧವಾರ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ.

ಕೇಂದ್ರದ ಅಬಕಾರಿ ಸುಂಕ ಕಡಿತ ಮತ್ತು 20ಕ್ಕೂ ಹೆಚ್ಚು ರಾಜ್ಯಗಳು ಕಡಿತಗೊಳಿಸಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮಧ್ಯೆ ದೇಶದಾದ್ಯಂತ ಸತತ 7ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವಾರ ಕೇಂದ್ರ ಸರ್ಕಾರ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.

ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ.ನಷ್ಟು ಕಡಿಮೆ ಮಾಡಿತ್ತು. ಬೆಲೆ ಕಡಿತದ ನಂತರ ಪೆಟ್ರೋಲ್ ಬೆಲೆ ಬಹುತೇಕ ಭಾಗದಲ್ಲಿ ಲೀಟರ್‌ಗೆ ರೂ 100 ರೂ.ಗಿಂತ ಕಡಿಮೆಯಾಗಿದೆ. ಆಡಳಿತಾರೂಢ ಬಿಜೆಪಿ ಸೇರಿದಂತೆ ಕೆಲವು ರಾಜ್ಯಗಳು ಇಂಧನ ದರದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿವೆ.

Petrol Rates Stable On November 10 Across Karnataka

ತೈಲ ಕಂಪನಿಗಳು ಅಳವಡಿಸಿಕೊಂಡ ಬೆಲೆ ಸೂತ್ರದ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್( BPCL ), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ( HPCL)ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಪ್ರಸ್ತುತ ದೇಶದ 4 ಮೆಟ್ರೋ ನಗರಗಳಲ್ಲಿ ಇಂಧನ ದರ ಅತ್ಯಧಿಕವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel Price)ಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಸಂಜೆ 6 ರಿಂದ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಅಬಕಾರಿ ತೆರಿಗೆ, ಡೀಲರ್ ಕಮಿಷನ್ ಮತ್ತು ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.

ವಿದೇಶಿ ವಿನಿಮಯ ದರಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.

ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.97 ರೂ. ಮತ್ತು ಡೀಸೆಲ್‌ನ ಬೆಲೆ ಲೀಟರ್‌ಗೆ 86.67 ರೂ. ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 109.98 ರೂ. ಮತ್ತು 94.14 ರೂ. ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 100.58 ರೂ. ಇದ್ದರೆ ಮತ್ತು ಡೀಸೆಲ್ ಬೆಲೆ 85.01 ರೂ. ಇದೆ.

Petrol Rates Stable On November 10 Across Karnataka

ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ 104.67 ರೂ. ಮತ್ತು 89.79 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 101.40 ರೂ. ಇದ್ದರೆ, ಡೀಸೆಲ್ 91.43 ರೂ. ಇದೆ.

ಹೈದರಾಬಾದ್‌ನಲ್ಲಿ 1 ಲೀಟರ್ ಪೆಟ್ರೋಲ್ 108.20 ರೂ. ಮತ್ತು 1 ಲೀಟರ್ ಡೀಸೆಲ್‌ಗೆ 94.62 ರೂ. ಇದೆ. ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚವನ್ನು ಅವಲಂಬಿಸಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ದೇಶದ ಜನರಿಗೆ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿರುವುದರಿಂದ ತುಸು ನೆಮ್ಮದಿ ಸಿಕ್ಕಂತಾಗಿದೆ.

ವಿವಿಧ ಜಿಲ್ಲೆಗಳ ಪೆಟ್ರೋಲ್ ದರ

ಬಾಗಲಕೋಟೆ - 101.28 ರೂ.
ಬೆಂಗಳೂರು - 100.58 ರೂ.
ಬೆಂಗಳೂರು ಗ್ರಾಮಾಂತರ -100.65
ಬೆಳಗಾವಿ - 100.37 ರೂ.
ಬಳ್ಳಾರಿ - 102.44 ರೂ.
ಬೀದರ್ - 101.78
ವಿಜಯಪುರ-100.36 ರೂ.
ಚಾಮರಾಜನಗರ - 100.66 ರೂ.
ಚಿಕ್ಕಬಳ್ಳಾಪುರ - 101.88 ರೂ.
ಚಿಕ್ಕಮಗಳೂರು - 102.31ರೂ.
ಚಿತ್ರದುರ್ಗ - 101.88 ರೂ.
ದಕ್ಷಿಣ ಕನ್ನಡ - 100.06
ದಾವಣಗೆರೆ - 102.75 ರೂ.
ಧಾರವಾಡ - 100.55 ರೂ.
ಗದಗ - 100.87 ರೂ.
ಕಲಬುರಗಿ - 101.18 ರೂ.
ಹಾಸನ - 100.63 ರೂ.
ಹಾವೇರಿ - 101.58 ರೂ.
ಕೊಡಗು - 101.86 ರೂ.
ಕೋಲಾರ - 100.51 ರೂ.
ಕೊಪ್ಪಳ- 101.50 ರೂ.
ಮಂಡ್ಯ - 100.46 ರೂ.
ಮೈಸೂರು - 100.08 ರೂ.
ರಾಯಚೂರು - 101ರೂ.
ರಾಮನಗರ - 100.93 ರೂ.
ಶಿವಮೊಗ್ಗ - 102.11 ರೂ.
ತುಮಕೂರು - 101.28 ರೂ.
ಉಡುಪಿ - 100.23ರೂ.
ಉತ್ತರಕನ್ನಡ - 100.62 ರೂ
ಯಾದಗಿರಿ - 101.03ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+