Infographics: ನ.06ರಂದು ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ಬೆಂಗಳೂರು, ನವೆಂಬರ್ 06: ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ರಾಜ್ಯ ಸರ್ಕಾರಗಳು ಕೂಡ ಇಳಿಕೆ ಮಾಡಿವೆ. ದೀಪಾವಳಿ ಮರುದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಕೇಂದ್ರ ಸರಕಾರ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 5 ರೂ., ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 10 ರೂ. ಇಳಿಕೆ ಮಾಡಿದ್ರೆ, ಇದರ ಬೆನ್ನಿಗೆ ರಾಜ್ಯ ಸರ್ಕಾರವೂ ಡೀಸೆಲ್‌ ಮತ್ತು ಪೆಟ್ರೋಲ್ ದರವನ್ನು ತಲಾ 7 ರೂ. ಕಡಿತಗೊಳಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ಟೀಟ್ ಮೂಲಕ ತಿಳಿಸಿದ್ದರು.

ಸುಂಕ ಕಡಿತ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ, ಕರ್ನಾಟಕ, ಪುದುಚೇರಿ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ತ್ರಿಪುರಾ, ಅಸ್ಸಾಂ, ಸಿಕ್ಕಿಂ, ಬಿಹಾರ, ಮಧ್ಯಪ್ರದೇಶ, ಗೋವಾ, ಗುಜರಾತ್, ದಾದ್ರಾ ಮತ್ತು ಇತರ ರಾಜ್ಯಗಳಿವೆ. ಇದರೊಂದಿಗೆ ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ, ನಗರ ಹವೇಲಿ, ದಮನ್ ಮತ್ತು ದಿಯು, ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಲಡಾಖ್​ನಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ದರ ಕಡಿತವಾಗಿದೆ.

Petrol Rates Stable On November 06 Across Karnataka

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ.

ಸುಂಕ ಕಡಿತದ ನಂತರ, ಈಗ ರಾಜಸ್ಥಾನದ ಜೈಪುರದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್​ಗೆ ರೂ 111.10 ಆಗಿದೆ. ಮುಂಬೈನಲ್ಲಿ 109.98 ರೂ. ಮತ್ತು ಆಂಧ್ರಪ್ರದೇಶ 109.05 ರೂ. ದರವಿದೆ. ಮತ್ತೊಂದೆಡೆ, ಬಿಜೆಪಿ ಆಡಳಿತವಿರುವ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗಿಂತ ಕಡಿಮೆಯಾಗಿದೆ. ಆದರೆ, ಮಧ್ಯಪ್ರದೇಶದಲ್ಲಿ 107.23 ರೂ., ಬಿಹಾರದಲ್ಲಿ 105.90 ರೂ ದರ ನಿಗದಿಯಾಗಿದೆ. ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 100.58 ರೂಗಳಿದೆ.

ಡೀಸೆಲ್ ಬೆಲೆಯ ವಿಚಾರಕ್ಕೆ ಬರುವುದಾದರೆ, ರಾಜಸ್ಥಾನದ ಜೈಪುರದಲ್ಲಿ ಲೀಟರ್‌ಗೆ 95.71 ರೂ, ಆಂಧ್ರಪ್ರದೇಶದಲ್ಲಿ 95.18 ರೂ., ಮುಂಬೈನಲ್ಲಿ ಲೀಟರ್‌ಗೆ 94.14 ರೂ ಇದೆ. ಮಿಜೋರಾಂನಲ್ಲಿ ಡೀಸೆಲ್​ಗೆ ಕಡಿಮೆ ದರವಿದ್ದು, ಪ್ರತಿ ಲೀಟರ್‌ಗೆ 79.55 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 85.01 ರೂ ಇದೆ.

Petrol Rates Stable On November 06 Across Karnataka

ನವದೆಹಲಿ: ಪೆಟ್ರೋಲ್: 103.97 ರೂ, ಡೀಸೆಲ್: 86.67 ರೂ

ಕೋಲ್ಕತ್ತಾ: ಪೆಟ್ರೋಲ್ : 104.67 ರೂ, ಡೀಸೆಲ್ : 89.79 ರೂ

ಮುಂಬೈ: ಪೆಟ್ರೋಲ್ : 109.98 ರೂ, ಡೀಸೆಲ್ : 94.14 ರೂ
ಚೆನ್ನೈ: ಪೆಟ್ರೋಲ್ : 101.40 ರೂ, ಡೀಸೆಲ್ : 91.43 ರೂ

ಬೆಂಗಳೂರು: ಪೆಟ್ರೋಲ್: 100.58 ರೂ, ಡೀಸೆಲ್: 85.01 ರೂ

ಮಂಗಳೂರು ಪೆಟ್ರೋಲ್: 99.76 ರೂ, ಡೀಸೆಲ್: 84.24 ರೂ

ಮೈಸೂರು: ಪೆಟ್ರೋಲ್: 100.67ರೂ, ಡೀಸೆಲ್: 85.10 ರೂ

ಎಲ್ಲಿ ಪೆಟ್ರೋಲ್ ದರ ಹೆಚ್ಚು, ಎಲ್ಲಿ ಕಡಿಮೆ ಇದೆ?
ದಕ್ಷಿಣ ಕನ್ನಡದಲ್ಲಿ 99.76 ರೂ, ಬೆಂಗಳೂರು, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಹಾಸನ, ಕೋಲಾರ, ರಾಯಚೂರು, ಮಂಡ್ಯ, ರಾಮನಗರ, ಉಡುಪಿಯಲ್ಲಿ 100 ರೂ ಆಸುಪಾಸಿನಲ್ಲಿದೆ.
ಶಿವಮೊಗ್ಗದಲ್ಲಿ 102.10 ರೂ, ದಾವಣಗೆರೆಯಲ್ಲಿ 102.07 ರೂ. ಚಿಕ್ಕಮಗಳೂರಿನಲ್ಲಿ 102.51 ರೂ., ಚಿತ್ರದುರ್ಗದಲ್ಲಿ 102.18 ರೂ., ಬಳ್ಳಾರಿ 102.57 ರೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+