Infographics: ಅ.8ರಂದು ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ಬೆಂಗಳೂರು, ಅಕ್ಟೋಬರ್ 08: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತ ನಾಲ್ಕನೇ ದಿನವಾದ ಇಂದು ಕೂಡ ಏರಿಕೆ ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು 30 ಪೈಸೆ ಹೆಚ್ಚಾಗಿ ಪ್ರತಿ ಲೀಟರ್‌ಗೆ 103.24 ರಿಂದ 103.54 ರೂ.ಗೆ ಬಂದು ತಲುಪಿದೆ.

ಪೆಟ್ರೋಲ್ ಬೆಲೆ ಅಧಿಕವಿರುವ ಜಿಲ್ಲೆಗಳು:
ಚಿತ್ರದುರ್ಗ-109 ರೂ.
ಬಳ್ಳಾರಿ-109.17ರೂ.
ಕೊಪ್ಪಳ-108.48 ರೂ.
ದಾವಣಗೆರೆ-108.62ರೂ.
ಕೊಡಗು-108.15ರೂ.
ಶಿವಮೊಗ್ಗ -108.16 ರೂ.
ಚಿಕ್ಕಮಗಳೂರು-108.82ರೂ.
ಬೆಳಗಾವಿ-108.15ರೂ.
ಪೆಟ್ರೋಲ್ ಬೆಲೆ ಕೊಂಚ ಕಡಿಮೆ ಇರುವ ಜಿಲ್ಲೆಗಳು
ಬೆಂಗಳೂರು ಗ್ರಾಮಾಂತರ -106.78 ರೂ.
ದಕ್ಷಿಣ ಕನ್ನಡ-106.29 ರೂ.
ಧಾರವಾಡ-106.87ರೂ.
ಮೈಸೂರು-106.91 ರೂ. ಇದೆ.
ಡೀಸೆಲ್ ದರ ಎಲ್ಲೆಲ್ಲಿ ಕಡಿಮೆ ಇದೆ?
ಬೆಂಗಳೂರು-97.77 ರೂ.
ಬಿಜಾಪುರ-97.73 ರೂ.
ಧಾರವಾಡ-97.55 ರೂ.
ಉಡುಪಿ-97.27 ರೂ. ಇದೆ.
ದಾವಣಗೆರೆಯಲ್ಲಿ 99 ರೂ., ಚಿತ್ರದುರ್ಗ 99.49 ರೂ. ಇದೆ.

ಕಳೆದ ಮಂಗಳವಾರದಿಂದ ಪೆಟ್ರೋಲ್ ಬೆಲೆಯು ಏರಿಕೆಯಾಗುತ್ತಿದೆ. ಬುಧವಾರ ಮತ್ತು ಈ ಸೋಮವಾರ, ಬೆಲೆಗಳು ವಾರದಲ್ಲಿ ಎರಡು ದಿನ ಸ್ಥಿರವಾಗಿತ್ತು. ಇದಲ್ಲದೇ, ಪ್ರತಿ ದಿನ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ 11 ದಿನಗಳಲ್ಲಿ ಪೆಟ್ರೋಲ್ ಬೆಲೆ 2.35 ರೂ. ಏರಿಕೆ ಕಂಡಿದೆ ಮತ್ತೆ ಡೀಸೆಲ್ 3.50 ರೂ. ಏರಿಕೆಯಾಗಿದೆ.

Petrol Price And Diesel Rate Hiked On October 08 2021 Across Karnataka

ದೇಶದ ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಎಚ್‌ಪಿಸಿಎಲ್(HPCL), ಬಿಪಿಸಿಎಲ್ ಮತ್ತು ಐಒಸಿ ಬೆಳಿಗ್ಗೆ 6 ಗಂಟೆಯ ನಂತರ ಹೊಸ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಬಿಡುಗಡೆ ಮಾಡುತ್ತವೆ. ಎಸ್‌ಎಂಎಸ್ ಹೊರತುಪಡಿಸಿ, ನೀವು ಇತ್ತೀಚಿನ ದರಗಳಿಗಾಗಿ ಐಒಸಿಎಲ್‌ನ ಅಧಿಕೃತ ವೆಬ್‌ಸೈಟ್ ಅನ್ನು ಸಹ ಪರಿಶೀಲಿಸಬಹುದು.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, ಪೆಟ್ರೋಲ್ ಬೆಲೆ(Petrol Prices) ಪ್ರತಿ ಲೀಟರ್‌ಗೆ 92.12 ರಿಂದ 91.77 ರೂ.ಗೆ ಅಂದರೆ 35 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಪರಿಷ್ಕೃತ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 109.54 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 99.22 ರೂ. ಆಗಿದೆ. ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ನಿಂದಾಗಿ ಇಂಧನ ದರಗಳು ರಾಜ್ಯದಾದ್ಯಂತ ಬದಲಾಗುತ್ತವೆ.

ಪ್ರಪಂಚದಾದ್ಯಂತ ಕಚ್ಚಾ ತೈಲದ ಬೇಡಿಕೆ ಮತ್ತು ಉತ್ಪಾದನೆಯ ನೇರ ಪರಿಣಾಮವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Diesel Prices)ಯ ಮೇಲೆ ಕಂಡುಬರುತ್ತಿದೆ. ಗುರುವಾರ, ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $ 0.45 ರಷ್ಟು ಏರಿಕೆಯಾಗಿ $ 82.40 ಕ್ಕೆ ತಲುಪಿದೆ. ಇದರ ಹೊರತಾಗಿ, ಡಬ್ಲ್ಯೂಟಿಐ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $ 0.57 ರಷ್ಟು ಏರಿಕೆಯಾಗಿ $ 78.87 ಕ್ಕೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 07ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಇಳಿಕೆ ಕಂಡು 82.88ಯುಎಸ್ ಡಾಲರ್(1 USD=75.02ರೂ) ಪ್ರತಿ ಬ್ಯಾರೆಲ್‌ನಷ್ಟಿದೆ.

Petrol Price And Diesel Rate Hiked On October 08 2021 Across Karnataka

ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ನಂತರ ಸರಾಸರಿ 75 ಪ್ಲಸ್ ಡಾಲರ್ ನಂತೆ ಮುಂದುವರೆದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಖ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ ದಾಟಿದೆ. ನೋಯ್ಡಾದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ 100 ರು ಗಡಿ ದಾಟಿದೆ. ರಾಜಸ್ಥಾನದಲ್ಲಿ ಡೀಸೆಲ್ ಬೆಲೆ ಕೂಡಾ 100 ರು ಪ್ಲಸ್ ಇದೆ. ಚೆನ್ನೈ, ಗುರುಗ್ರಾಮ, ಚಂಡೀಗಢ, ನೋಯ್ಡಾ ಹಾಗೂ ಲಕ್ನೋದಲ್ಲಿ 100ರುಗಿಂತ ಕೆಳಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+