ಸೆ.11ರಂದು ರಾಜ್ಯದ ಎಲ್ಲೆಲ್ಲಿ, ಎಷ್ಟಿದೆ ಪೆಟ್ರೋಲ್- ಡೀಸೆಲ್ ಬೆಲೆ?
ಬೆಂಗಳೂರು, ಸೆಪ್ಟೆಂಬರ್ 11: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಶನಿವಾರ ಇಂಧನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸೆಪ್ಟೆಂಬರ್ 11ರ ಶನಿವಾರ ಪೆಟ್ರೋಲ್, ಡೀಸೆಲ್ ಬೆಲೆ ದೇಶಾದ್ಯಂತ ಸ್ಥಿರವಾಗಿ ಉಳಿದುಕೊಂಡಿದೆ.
ನಿರಂತರವಾಗಿ ಆರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡು ಬಂದಿದೆ. ವಾರದಿಂದಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಭಾರತದಲ್ಲಿ ಕಳೆದ ಬುಧವಾರ ಹಾಗೂ ಭಾನುವಾರದಂದು ಕೊನೆಯದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ಆನಂತರ ಇಂಧನ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.19 ರೂ ಆಗಿದ್ದರೆ, ಡೀಸೆಲ್ ದರ 88.62 ರೂ. ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 104.70 ರೂ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 94.04 ರೂ ಆಗಿದೆ.

ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.
ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲಿ ವಿವಿಧ ದರಗಳ ವಿವರ ಮುಂದಿದೆ...
ಪ್ರತಿ ಲೀಟರ್ ಪೆಟ್ರೋಲ್ 106 ರೂ ತಲುಪಿದ ಜಿಲ್ಲೆಗಳು:
ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 104.70 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 94.04 ರೂಪಾಯಿಗೆ ಮುಟ್ಟಿದೆ. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದರ್ಗ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 106 ರೂ ಪ್ಲಸ್ ಇದೆ. ಬಳ್ಳಾರಿಯಲ್ಲಿ 106.54 ರೂ ಇದ್ದು, ರಾಜ್ಯದಲ್ಲೇ ಅತ್ಯಧಿಕವಾಗಿದೆ. ಮಿಕ್ಕಂತೆ ಇತರೆ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್‌ಗೆ 104 ರಿಂದ 105ರೂ ನಷ್ಟಿದೆ.
ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ 15-19 ಪೈಸೆಯಷ್ಟು ಇಳಿಕೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ ಕನಿಷ್ಠ 93.23 ರೂ ಇದೆ. ಚಿತ್ರದುರ್ಗದಲ್ಲಿ ಗರಿಷ್ಠ, ಅಂದರೆ ಲೀಟರ್‌ಗೆ 95.53 ರೂ ಇದೆ. ಉಳಿದಂತೆ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೀದರ್, ಬೆಳಗಾವಿ, ವಿಜಯಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಧಾರವಾಡ,ಗದಗ, ಕಲಬುರಗಿ, ಹಾಸನ, ಮಂಡ್ಯ, ಮೈಸೂರು ಹಾಗೂ ಉಡುಪಿಯಲ್ಲಿ ಪ್ರತಿ ಲೀಟರ್ 94 ರಿಂದ 95 ರೂ ಆಸುಪಾಸಿನಲ್ಲಿದೆ.

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕೊಂಚ ಏರಿಕೆ ಕಂಡು 71.58 ಯುಎಸ್ ಡಾಲರ್(1 USD=73.56 ರೂ) ಪ್ರತಿ ಬ್ಯಾರೆಲ್‌ನಷ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರೂಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು IOCL ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ SMS ಮೂಲಕ ತಿಳಿದುಕೊಳ್ಳಬಹುದಾಗಿದೆ.
ಬೆಳಗಾವಿಯಿಂದ ಕೋಲಾರ ತನಕ ರಾಜ್ಯದ ವಿವಿಧ ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ (ಸೆಪ್ಟೆಂಬರ್ 11) ಸಚಿತ್ರ ಮಾಹಿತಿ ಇಲ್ಲಿದೆ.
ಚಿತ್ರ ವಿನ್ಯಾಸ: ಭರತ್ ಎಚ್. ಸಿ.












Click it and Unblock the Notifications