Infographics: ಫೆ.3ರಂದು ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಏನಿದೆ?

ಬೆಂಗಳೂರು, ಫೆಬ್ರವರಿ 3: ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಫೆಬ್ರವರಿ 3ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಿಲ್ಲ. ಬಹುತೇಕ ಎರಡೂವರೆ ತಿಂಗಳ ಹಿಂದೆ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಆ ಬಳಿಕ ಬೆಲೆಯು ಸ್ಥಿರವಾಗಿದೆ. ಆದರೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಕೊಂಚ ಏರಿಳಿತ ಕಂಡು ಬಂದಿದೆ. ಇಂದು ಬಳ್ಳಾರಿ ಜಿಲ್ಲೆಯಲ್ಲಿ ಪೆಟ್ರೋಲ್‌ ಬೆಲೆ ಗರಿಷ್ಠ 102.79 ರೂಪಾಯಿ ಆಗಿದೆ. ಇದೇ ಜಿಲ್ಲೆಯಲ್ಲಿ ಡೀಸೆಲ್ ದರ ಗರಿಷ್ಠ 86.88 ರೂ. ಇದೆ.

2021ರ ಮೇ 4ರಿಂದ ನವೆಂಬರ್ 4ರವರೆಗೆ ಪೆಟ್ರೋಲ್ ಒಟ್ಟು 65 ಬಾರಿ ಹಾಗೂ ಡೀಸೆಲ್ 55 ಬಾರಿ ಏರಿಕೆಯಾಗಿತ್ತು. ಭಾರತ ಸರ್ಕಾರ ಮೂಲ ಬೆಲೆಯ ಶೇಕಡ 125ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32.98 ರೂ. ಹಾಗೂ ಡೀಸೆಲ್ ಮೇಲೆ 31.80 ರೂ. ನಷ್ಟಿದೆ. ಕಳೆದ ವರ್ಷದ ನವೆಂಬರ್ 4ರಂದು ಕೇಂದ್ರ ಸರ್ಕಾರ ತೆರಿಗೆ ಇಳಿಕೆ ಮಾಡಿದ ಬಳಿಕ ಅನೇಕ ರಾಜ್ಯಗಳು ವ್ಯಾಟ್, ಸೆಸ್ ತಗ್ಗಿಸಿದ್ದರಿಂದ ಇಂಧನ ದರ ಇಳಿಕೆಯಾಗಿವೆ.

Petrol And Diesel Price Unchanged On February 3rd: Check Rate in Your City

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿರುವುದರಿಂದ ಕೆಲವೇ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರತದಲ್ಲಿ ಭಾರೀ ಏರಿಕೆ ಕಾಣುವ ಸಾಧ್ಯತೆ ಇದೆ. ರಾಜ್ಯದ ನಗರಗಳ ಪೆಟ್ರೋಲ್‌ ಡಿಸೇಲ್ ಬೆಲೆ ಈ ಕೆಳಗಿದೆ. ಮುಂದೆ ಓದಿ..

ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100.58 ರೂ.
ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100.58 ರೂಪಾಯಿಗೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 85.01 ರೂಪಾಯಿಗೆ ಆಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪೆಟ್ರೋಲ್‌ಗೆ ಅತ್ಯಧಿಕ ಬೆಲೆ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಪೆಟ್ರೋಲ್‌ ಬೆಲೆ ಗರಿಷ್ಠ 102.79 ರೂಪಾಯಿ ಇದ್ದು, ಕರ್ನಾಟಕದಲ್ಲೇ ಅತ್ಯಧಿಕ ಬೆಲೆ ಎನಿಸಿಕೊಂಡಿದೆ. ಇನ್ನು ನಿನ್ನೆ ಬಳ್ಳಾರಿಯಲ್ಲಿ 101.57 ರೂ. ಪೆಟ್ರೋಲ್‌ ಬೆಲೆ ಇತ್ತು. ಉಳಿದಂತೆ ಇತರೆ ಜಿಲ್ಲೆಗಳಲ್ಲಿ 99 ರಿಂದ 102 ರೂ. ನಷ್ಟಿದೆ ಎಂದು ಗುಡ್‌ರಿಟರ್ನ್ಸ್.ಇನ್ ವರದಿ ಮಾಡಿದೆ.

Petrol And Diesel Price Unchanged On February 3rd: Check Rate in Your City

ರಾಜ್ಯದಲ್ಲಿ ಡೀಸೆಲ್ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ 30-35 ಪೈಸೆಯಷ್ಟು ಏರಿಕೆಯಾಗಿತ್ತು. ನಂತರ ಸೆಸ್ ತಗ್ಗಿಸಿದ್ದರಿಂದ ಇಂಧನ ದರ ಇಳಿಕೆಯಾಗಿದ್ದು, ಸದ್ಯ ಬೆಂಗಳೂರಲ್ಲಿ ಪ್ರತಿ ಲೀಟರ್‌ಗೆ 85.01 ರೂ ಇದೆ. ಬಳ್ಳಾರಿ ಜಿಲ್ಲೆಯಲ್ಲಿ 86.88 ರೂ. ಪ್ರತಿ ಲೀಟರ್ ನಷ್ಟಿದ್ದು, ರಾಜ್ಯದಲ್ಲೇ ಅತ್ಯಧಿಕ ಬೆಲೆ ಹೊಂದಿದೆ. ನಿನ್ನೆ ಬಳ್ಳಾರಿಯಲ್ಲಿ ಪೆಟ್ರೋಲ್‌ ಬೆಲೆಯು 86.83 ರೂಪಾಯಿ ಇತ್ತು. ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ 86 ರೂ. ಪ್ಲಸ್ ದರ ಇದ್ದರೆ, ಉಳಿದ ಜಿಲ್ಲೆಗಳಲ್ಲಿ ಅತ್ಯಧಿಕ 84 ರಿಂದ 85 ರೂಪಾಯಿಯಷ್ಟಿದೆ.

ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರ ಬದಲಾವಣೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

Petrol And Diesel Price Unchanged On February 3rd: Check Rate in Your City

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರ ಏರಿಳಿತ
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಕಳೆದ ವಾರ ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್​ಗಳಷ್ಟು ಕುಸಿದಿತ್ತು. ಹಾಗೆಯೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಈ ಸಮಯಕ್ಕೆ ಬ್ರೆಂಟ್​ ಕಚ್ಚಾತೈಲದ ದರ ಏರಿಕೆಯಾಗಿ 90.92 ಡಾಲರ್ ಪ್ರತಿ ಬ್ಯಾರೆಲ್ ನಂತಿದೆ (1 USD=74.97 ರುಪಾಯಿ). ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+