Infographics: ಮಾ.26ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ

ನವದೆಹಲಿ, ಮಾರ್ಚ್ 24: ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 140 ಯುಎಸ್ ಡಾಲರ್ ಗಡಿ ಸಮೀಪಿಸಿತ್ತು. ಪರಿಣಾಮವಾಗಿ ಭಾರತದ ಸರ್ಕಾರಿ ತೈಲ ಕಂಪನಿಗಳು ಇಂಧನ ದರವನ್ನು ಏರಿಕೆ ಮಾಡುತ್ತಿವೆ. ಇಂದು (ಶನಿವಾರ, ಮಾರ್ಚ್ 26) ಕೂಡ ಇಂಧನ ಏರಿಕೆ ಕಂಡಿದೆ. ನಿನ್ನೆ (ಶುಕ್ರವಾರ) ಕೂಡ ಇಂಧನ ದರದಲ್ಲಿ ಏರಿಕೆಯಾಗಿದೆ. ಇದೀಗ ಶನಿವಾರವಾದ ಇಂದು(ಮಾರ್ಚ್​ 26) ಸಹ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯಾಗಿದೆ. ಆ ಮೂಲಕ ಒಂದೇ ವಾರದಲ್ಲಿ ನಾಲ್ಕನೇ ಬಾರಿ ಇಂಧನ ದರ ಏರಿಕೆಯಾಗಿದೆ.

2021ರ ಮೇ 4ರಿಂದ ನವೆಂಬರ್ 4ರವರೆಗೆ ಪೆಟ್ರೋಲ್ ಒಟ್ಟು 60 ಬಾರಿ ಹಾಗೂ ಡೀಸೆಲ್ 55 ಬಾರಿ ಏರಿಕೆ ಕಂಡಿತ್ತು. ಆ ಬಳಿಕ ಕೇಂದ್ರ ಸರ್ಕಾರ ತೆರಿಗೆ ಇಳಿಕೆ ಮಾಡಿದ ಬಳಿಕ ಅನೇಕ ರಾಜ್ಯಗಳು ವ್ಯಾಟ್, ಸೆಸ್ ತಗ್ಗಿಸಿದ್ದರಿಂದ ಇಂಧನ ದರ ಇಳಿಕೆಯಾಗಿತ್ತು. ಆ ನಂತರ ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯು ಏರಿಕೆ ಕಂಡಿರಲಿಲ್ಲ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಹೊರತುಪಡಿಸಿ ಕೆಲ ಜಿಲ್ಲೆಗಳಲ್ಲಿ ಮಾತ್ರ ಪೆಟ್ರೋಲ್‌, ಡೀಸೆಲ್‌ ಬೆಲೆಯು ಏರಿಳಿತ ಕಂಡು ಬಂದಿತ್ತು. ಆ ಬಳಿಕ ಮಾರ್ಚ್ 22ರಂದು ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ.

ಈಗ ಉಕ್ರೇನ್‌ ಹಾಗೂ ರಷ್ಯಾದ ಯುದ್ಧದ ನಡುವೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆಯು ಏರಿಕೆ ಕಾಣುತ್ತಿದೆ. ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಈ ಮಧ್ಯೆ ಭಾರತದಲ್ಲೂ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು. ಇಂದು ಇಂಧನ ದರವು ಸ್ಥಿರವಾಗಿದೆ.

Petrol And Diesel Prices Hike On 26th March 2022 In Karnataka: Check Rate in Your City

ರಾಜ್ಯದ ಕೆಲವು ನಗರಗಳಲ್ಲಿ ಏರಿಳಿತ ಕಂಡು ಬಂದಿದೆ. ಇಂದು ದಾವಣಗೆರಯಲ್ಲಿ ಪೆಟ್ರೋಲ್‌ ಬೆಲೆ 105.73 ರೂಪಾಯಿ ಆಗಿದೆ. ನಿನ್ನೆ ದಾವಣಗೆರಯಲ್ಲಿ ಪೆಟ್ರೋಲ್‌ ಬೆಲೆ 104.77 ರೂ. ಆಗಿತ್ತು. ಇನ್ನು ಚಿತ್ರದುರ್ಗದಲ್ಲಿ ಪೆಟ್ರೋಲ್‌ ದರ 105.71 ಆಗಿದೆ. ನಿನ್ನೆ ಚಿತ್ರದುರ್ಗದಲ್ಲಿ ಪೆಟ್ರೋಲ್‌ ದರ 105.75 ರೂ. ಆಗಿತ್ತು. ರಾಜ್ಯದ ನಗರಗಳ ಪೆಟ್ರೋಲ್‌ ಡಿಸೇಲ್ ಬೆಲೆ ಈ ಕೆಳಗಿದೆ. ಮುಂದೆ ಓದಿ..

ಕರ್ನಾಟಕದಲ್ಲಿ ಪೆಟ್ರೋಲ್ ದರ ಹೇಗಿದೆ?
ಬೆಂಗಳೂರಿನಲ್ಲಿ ಹಲವಾರು ದಿನಗಳಿಂದ ಪೆಟ್ರೋಲ್ ಪ್ರತಿ ಲೀಟರ್‌ಗೆ 100.58 ರೂಪಾಯಿಯಿದ್ದು ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಆದರೆ ಮಾರ್ಚ್ 22ರಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಲಾಗಿದೆ. ಇಂದು ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯು ಏರಿಕೆಯಾಗಿದ್ದು, ಪೆಟ್ರೋಲ್‌ ಬೆಲೆಯು 103.93 ರೂಪಾಯಿ ಆಗಿದೆ. ಬಳ್ಳಾರಿ, ಕೊಡಗು ಜಿಲ್ಲೆಯಲ್ಲಿ ಪೆಟ್ರೋಲ್‌ಗೆ ಅತ್ಯಧಿಕ ಬೆಲೆ ಇದೆ. ದಾವಣಗೆರೆ ಜಿಲ್ಲೆಯಲ್ಲಿ 105.73 ರೂ. ಪ್ರತಿ ಲೀಟರ್ ಪೆಟ್ರೋಲ್‌ಗೆ ಇದ್ದು, ಕರ್ನಾಟಕದಲ್ಲೇ ಅತ್ಯಧಿಕ ಬೆಲೆ ಎನಿಸಿಕೊಂಡಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ 102 ರಿಂದ 104 ರೂ. ನಷ್ಟಿದೆ ಎಂದು ಗುಡ್‌ರಿಟರ್ನ್ಸ್.ಇನ್ ವರದಿ ಮಾಡಿದೆ.

Petrol And Diesel Prices Hike On 26th March 2022 In Karnataka: Check Rate in Your City


ರಾಜ್ಯದಲ್ಲಿ ಡೀಸೆಲ್ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ 30-35 ಪೈಸೆಯಷ್ಟು ಏರಿಕೆಯಾಗಿತ್ತು. ನಂತರ ಸೆಸ್ ತಗ್ಗಿಸಿದ್ದರಿಂದ ಇಂಧನ ದರ ಇಳಿಕೆಯಾಗಿ, ಬೆಂಗಳೂರಲ್ಲಿ ಪ್ರತಿ ಲೀಟರ್‌ಗೆ 85.01 ರೂ ಆಗಿತ್ತು. ಆದರೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಮಾರ್ಚ್ 22ರಂದು ಬೆಲೆ ಏರಿಕೆ ಆಗಿದೆ. ಇಂದು ಡೀಸೆಲ್ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಡೀಸೆಲ್ ಬೆಲೆಯು 88.14 ರೂ ಆಗಿದೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ 89.63 ರೂ. ಪ್ರತಿ ಲೀಟರ್‌ನಷ್ಟಿದ್ದು, ರಾಜ್ಯದಲ್ಲೇ ಅತ್ಯಧಿಕ ಬೆಲೆ ಹೊಂದಿದೆ. ನಿನ್ನೆ ದಾವಣಗೆರೆ ಜಿಲ್ಲೆಯಲ್ಲಿ 88.74 ರೂ. ಪ್ರತಿ ಲೀಟರ್‌ನಷ್ಟಿತ್ತು. ಹಾಗೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ ನಿನ್ನೆ ಪ್ರತಿ ಲೀಟರ್‌ ಡೀಸೆಲ್ ಬೆಲೆ 89.61 ರೂಪಾಯಿ ಆಗಿತ್ತು. ಉಳಿದಂತೆ ಇತರೆ ಜಿಲ್ಲೆಗಳಲ್ಲಿ 86 ರಿಂದ 88 ರೂ. ನಷ್ಟಿದೆ ಎಂದು ಗುಡ್‌ರಿಟರ್ನ್ಸ್.ಇನ್ ವರದಿ ಮಾಡಿದೆ.

ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರ ಬದಲಾವಣೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. ಇಂದು ದೇಶದ ಮೂರು ಪ್ರಮುಖ ತೈಲ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದೆ. ನಿನ್ನೆ ಕೂಡಾ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಲಾಗಿದೆ.

Petrol And Diesel Prices Hike On 26th March 2022 In Karnataka: Check Rate in Your City

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರ ಏರಿಳಿತ
ಪ್ರಸ್ತುತ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಇದರ ಪರಿಣಾಮವಾಗಿ ಭಾರತದಲ್ಲಿಯೂ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಹೆಚ್ಚಳವಾಗಿದೆ. ಈ ಹಿಂದೆ ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್​ಗಳಷ್ಟು ಕುಸಿದಿತ್ತು. ಹಾಗೆಯೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಆದರೆ ಈಗ ಉಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧದ ಪರಿಣಾಮವಾಗಿ ಬ್ರೆಂಟ್​ ಕಚ್ಚಾತೈಲದ ದರ ಏರಿಕೆ ಕಂಡಿದೆ. ಈ ಸಮಯಕ್ಕೆ 121.1 ಡಾಲರ್ ಪ್ರತಿ ಬ್ಯಾರೆಲ್ ನಂತಿದೆ (1 USD=76.39 ರುಪಾಯಿ). ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+