ಸೂಪರ್ ಬ್ಲೂ ಬ್ಲಡ್ ಮೂನ್: ಚಿತ್ರದಲ್ಲಿ ಸಮಗ್ರ ಮಾಹಿತಿ
ಜನವರಿ 31 ಯಾವಾಗ ಬರುತ್ತೋ ಎಂದು ಉಸಿರು ಬಿಗಿ ಹಿಡಿದು ಕಾಯುತ್ತಿರುವವರು ಅದೆಷ್ಟೋ ಜನ. ನಮ್ಮೆಲ್ಲರ ನೆಚ್ಚಿನ ಚಂದಮಾಮ ಆವತ್ತು ಸೂಪರ್ ಬ್ಲೂ ಬ್ಲಡ್ ಮೂನ್ ಆಗಿ ಕಾಣಿಸಿಕೊಳ್ಳುತ್ತಾನಂತೆ!
ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ ಸಾಮಾನ್ಯವಾಗಿ ಇಳೆಯಿಂದ ಅಂದಾಜು 3.84 ಲಕ್ಷ ಕಿ.ಮೀ. ದೂರದಲ್ಲಿರುತ್ತಾರೆ. ಅಂಡಾಕೃತ ಕಕ್ಷೆಯಲ್ಲಿ ಸುತ್ತುವುದರಿಂದ ಒಮ್ಮೊಮ್ಮೆ ಚಂದ್ರ ಭೂಮಿಗೆ ತೀರಾ ಸಮೀಪ ಅಂದರೆ 3.5 ಲಕ್ಷ ಕಿ.ಮೀ. ದೂರದಲ್ಲಿ ಕಾಣಿಸುತ್ತಾನೆ. ಆಗ ಸೂಪರ್ ಮೂನ್ ಆಗಿ ಆತ ಗೋಚರಿಸುತ್ತಾನೆ. ಅಂದರೆ ಯಾವಾಗಲೂ ಕಾಣುವುದಕ್ಕಿಂತ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ.
ಆದರೆ ಈ ಬಾರಿ ಅಂದರೆ ಜ.31 ರ ಹುಣ್ಣಿಮೆಯಂದು ಚಂದ್ರ ಗ್ರಹಣವೂ ಇದೆ. ಯಾವಾಗಲೂ ಗ್ರಹಣದಂದು ಚಂದ್ರನ ಮೇಲ್ಮೈ ಕಪ್ಪಾಗಿ ಕಾಣುವುದು ರೂಢಿ. ಆದರೆ ಈ ಬಾರಿ ಆತ ರಕ್ತವರ್ಣದಲ್ಲಿ ಕಾಣಿಸುತ್ತಾನೆ ಎಂಬ ಕಾರಣಕ್ಕೆ 'ಸೂಪರ್ ಬ್ಲೂ ಬ್ಲಡ್ ಮೂನ್' ನೋಡುವ ಯೋಗ ನಮಗಿದೆ.

ಈ ಬಾರಿಯ ಚಂದ್ರ ಗ್ರಹಣಕ್ಕೆ ಸಂಬಂಧಿಸಿದಂತಗೆ ಮಹತ್ವದ ಮಾಹಿತಿಗಳನ್ನೊಳಗೊಂಡ ಇಫೋಗ್ರಾಫಿಕ್ ನಿಮಗಾಗಿ ಇಲ್ಲಿದೆ. ಚಂದ್ರಗ್ರಹಣದ ಕುರಿತ ಸಮಗ್ರ ಮಾಹಿತಿಯನ್ನು ಈ ಚಿತ್ರದಲ್ಲಿ ನೋಡಿ.












Click it and Unblock the Notifications