ಆಗಸ್ಟ್ 26 ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು, ಆಗಸ್ಟ್ 26: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಹಲವು ಜಲಾಶಯಗಳು ಭರ್ತಿಯಾಗಿವೆ.

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 30ರವರೆಗೂ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲೂ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಇಂದೂ ಸಹ ಮಳೆ ಮುಂದುವರಿಯಲಿದೆ.

ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೋಲಾರ ಈ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ.

ಕೆಲವೆಡೆ ಜಿಟಿ ಜಿಟಿ ಮಳೆಯಾದರೆ, ಇನ್ನೂ ಕೆಲವೆಡೆ ಧಾರಾಕಾರ ಮಳೆ ಸುರಿದಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ

ಕೋಲಾರದಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಸುಮಾರು 300 ಹೆಕ್ಟೇರ್‌ ಪ್ರದೇಶದಲ್ಲಿ ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗಿವೆ.

ಜಿಲ್ಲೆಯ 6 ತಾಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಬೆಳಿಗ್ಗೆವರೆಗೆ 24 ತಾಸಿನಲ್ಲಿ ಸರಾಸರಿ 32 ಮಿಲಿ ಮೀಟರ್‌ ಮಳೆ ಸುರಿದಿದೆ. ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಜಮೀನುಗಳು ನೀರಿನಿಂದಾಗಿ ಕೆರೆಯಂತಾಗಿದ್ದವು.

ಮಳೆಯು ಮುಖ್ಯವಾಗಿ ತೋಟಗಾರಿಕೆ ಬೆಳೆಗಳಿಗೆ ದೊಡ್ಡ ಪೆಟ್ಟು ಕೊಟ್ಟಿದ್ದು, ಸೊಪ್ಪು, ತರಕಾರಿ ಮತ್ತು ಹೂವಿನ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಇತ್ತೀಚೆಗೆ ಬಿತ್ತನೆಯಾಗಿದ್ದ ರಾಗಿ, ಜೋಳದ ಬೀಜಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಟೊಮೆಟೊ, ಬೀನ್ಸ್‌, ಕೋಸು, ಚಿಕಡಿಕಾಯಿ, ಕೊತ್ತಂಬರಿ ಬೆಳೆಗಳು ಜಲಾವೃತವಾಗಿವೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಇಂದೂ ಸಹ ಮಳೆ ಮುಂದುವರೆಯಲಿದೆ. ಆ. 28ರಿಂದ 2 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೋಲಾರ ಈ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ. ಆಗಸ್ಟ್ 26ರಂದು ಜಲಾಶಯಗಳ ನೀರಿನ ಮಟ್ಟ ಹೇಗಿದೆ?

 ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ

ಲಿಂಗನ ಮಕ್ಕಿಯಲ್ಲಿ ಪೂರ್ಣಮಟ್ಟ 550.66ಮೀಟರ್ ಇದ್ದು, ಇಂದು552.45ಮೀಟರ್ ಇದೆ. ಹಾರಂಗಿಯಲ್ಲಿ ಪೂರ್ಣಮಟ್ಟ 871.38 ಮೀಟರ್ ಇದ್ದು, ಇಂದು 870.97ರಷ್ಟಿದೆ. ಇನ್ನು ಹೇಮಾವತಿಯಲ್ಲಿ ನೀರಿನ ಮಟ್ಟ 890.58 ಮೀಟರ್ ಇದ್ದು ಇಂದು889.43 ಮೀಟರ್‌ನಷ್ಟಿದೆ.

 ಕಬಿನಿ ಜಲಾಶಯ

ಕಬಿನಿ ಜಲಾಶಯ

ಕಬಿನಿಯಲ್ಲಿ ಪೂರ್ಣ ಮಟ್ಟ 696.13 ಮೀಟರ್‌ನಷ್ಟಿದ್ದು, ಇಂದು695.64ರಷ್ಟಿದೆ, ಕೆಆರ್‌ಎಸ್‌ನಲ್ಲಿ 38.04 ಸಾಮರ್ಥ್ಯವಿದ್ದು ನೀರಿನ ಮ36.43ಮೀಟರ್‌ನಷ್ಟಿದೆ, ಭದ್ರಾದಲ್ಲಿ ನೀರಿನ ಸಾಮರ್ಥ್ಯ 657.73ರಷ್ಟಿದ್ದು, ಇಂದಿನ ಮಟ್ಟ 657.45ಷ್ಟಿದೆ.

 ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ ತುಂಗಭದ್ರದಲ್ಲಿ 497.71 ಮೀಟರ್ ಸಾಮರ್ಥ್ಯವಿದ್ದು, ಇಂದು497.60ಮೀಟರ್‌ನಷ್ಟು ನೀರಿದೆ, ಆಲಮಟ್ಟಿಯಲ್ಲಿ ಸಾಮರ್ಥ್ಯ 519.60ರಷ್ಟಿದ್ದರೂ ಇಂದು519.57ಮೀಟರ್‌ನಷ್ಟಿದೆ. ಇನ್ನು ನಾರಾಯಣಪುರದಲ್ಲಿ 492.25ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದರೂ 492.03ಮೀಟರ್‌ನಷ್ಟು ನೀರಿದೆ.

 ಸೂಪಾ ಜಲಾಶಯ

ಸೂಪಾ ಜಲಾಶಯ

ಸೂಪಾ ಜಲಾಶಯದಲ್ಲಿ 564.00 ನೀರಿನ ಸಾಮರ್ಥ್ಯ ಹೊಂದಿದೆ551.54ಷ್ಟು ನೀರು ಸಂಗ್ರಹವಾಗಿದೆ. ಘಟಪ್ರಭಾದಲ್ಲಿ 554.76 ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದು,662.91ರಷ್ಟು ನೀರಿದೆ, ಮಲಪ್ರಭಾದಲ್ಲಿ 633.80 ಮೀಟರ್‌ ನೀರಿನ ಸಾಮರ್ಥ್ಯವಿದ್ದು, 633.43ನೀ ಸಂಗ್ರಹವಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+