ಕರ್ನಾಟಕ; ಧಾರಾಕಾರ ಮಳೆ, ಡ್ಯಾಂಗಳ ನೀರಿನ ಮಟ್ಟ

ಬೆಂಗಳೂರು, ಅಕ್ಟೋಬರ್ 12; ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅಕ್ಟೋಬರ್ 16ರ ತನಕ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅರಬ್ಬಿ ಸಮುದ್ರದ ಪೂರ್ವ ಮಧ್ಯಭಾಗ ಮತ್ತು ಉತ್ತರ ಅಂಡಮಾನ್ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳು ಸೇರಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ ಅಕ್ಟೋಬರ್ 12 ಮತ್ತು 13ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್ 16ರ ತನಕ ಮಳೆ ಮುಂದುವರೆಯಲಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಜಲಾಶಯಗಳಿಗೆ ಒಳಹರಿವು ಸಹ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಮಂಗಳವಾರವೂ ಸಹ ಮಳೆ ಮುಂದುವರೆದಿದೆ.

ಸೋಮವಾರ ಸುಬ್ರಮಣ್ಯ, ಹೊಸದುರ್ಗ, ಮಡಿಕೇರಿಯಲ್ಲಿ 5 ಸೆಂ. ಮೀ. ಮಳೆಯಾಗಿದೆ. ಮಂಗಳೂರು 4, ರಾಯಚೂರು, ಮಂಡ್ಯ, ಮಳವಳ್ಳಿ, ಪುತ್ತೂರಿನಲ್ಲಿ 3 ಸೆಂ. ಮೀ. ಮಳೆಯಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಸಹ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದ ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಚಿತ್ರದಲ್ಲಿದೆ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ ಡ್ಯಾಂ

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ ಡ್ಯಾಂ

ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 554.44 ಮೀಟರ್ ಆಗಿದೆ. ಮಂಗಳವಾರ ಜಲಾಶಯದಲ್ಲಿ 553.46 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ ಒಳಹರಿವು 3887 ಕ್ಯುಸೆಕ್ ಆಗಿದೆ, ಹೊರ ಹರಿವು 4986 ಕ್ಯುಸೆಕ್.

ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಮಂಗಳವಾರ ಡ್ಯಾಂನಲ್ಲಿ 871.13 ಮೀಟರ್ ನೀರಿನ ಸಂಗ್ರಹವಿದೆ. 1478 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಡ್ಯಾಂನಿಂದ 1250 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.

ಹಾಸನದಲ್ಲಿರುವ ಹೇಮಾವತಿ ಜಲಾಶಯದ ಮಂಗಳವಾರದ ನೀರಿನ ಮಟ್ಟ 887.44 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. 2261 ಕ್ಯುಸೆಕ್ ನೀರು ಡ್ಯಾಂಗೆ ಹರಿದುಬರುತ್ತಿದೆ. ಹೊರ ಹರಿವು 4455 ಕ್ಯುಸೆಕ್ ಆಗಿದೆ.

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ

ಕಬಿನಿ ಜಲಾಶಯದ ಮಂಗಳವಾರದ ನೀರಿನ ಮಟ್ಟ 694.51 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ 4267 ಕ್ಯುಸೆಕ್ ಒಳಹರಿವು ಇದೆ, ಹೊರ ಹರಿವು 4116 ಕ್ಯುಸೆಕ್ ದಾಖಲಾಗಿದೆ.

ಶ್ರೀರಂಗಪಟ್ಟಣದ ಕೆಆರ್‌ಎಸ್ ಜಲಾಶಯ ಭರ್ತಿಯಾಗಿಲ್ಲ. ಮಂಗಳವಾರದ ಮಾಹಿತಿಯಂತೆ ಜಲಾಶಯದಲ್ಲಿ 35.49 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್. ಒಳಹರಿವು 11010 ಕ್ಯುಸೆಕ್ ಆಗಿದೆ, ಹೊರ ಹರಿವು 4303 ಕ್ಯುಸೆಕ್ ಆಗಿದೆ.

ಭದ್ರಾ ಜಲಾಶಯದ ಮಂಗಳವಾರದ ನೀರಿನ ಮಟ್ಟ 657.73 ಮೀಟರ್ ಆಗಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯದ ಒಳಹರಿವು 2941 ಕ್ಯುಸೆಕ್ ಆಗಿದೆ. ಡ್ಯಾಂನಿಂದ ಹೊರ ಹರಿವು 2941 ಕ್ಯುಸೆಕ್ ದಾಖಲಾಗಿದೆ.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಜಲಾಶಯದ ಮಂಗಳವಾರದ ನೀರಿನ ಮಟ್ಟ 497.71 ಮೀಟರ್. ಡ್ಯಾಂನ ಪೂರ್ಣಮಟ್ಟ 497.71 ಮೀಟರ್ ಆಗಿದೆ. ಜಲಾಶಯಕ್ಕೆ 14118 ಕ್ಯುಸೆಕ್ ಒಳಹರಿವು ಇದೆ, ಹೊರ ಹರಿವು 14118 ಕ್ಯುಸೆಕ್ ಆಗಿದೆ.

ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಮಂಗಳವಾರ ಜಲಾಶಯದಲ್ಲಿ 519.36 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ 28505 ಕ್ಯುಸೆಕ್ ಒಳಹರಿವು ಇದ್ದು, ಹೊರ ಹರಿವು 30530 ಕ್ಯುಸೆಕ್ ದಾಖಲಾಗಿದೆ.

ನಾರಾಯಣಪುರ ಜಲಾಶಯದ ಮಂಗಳವಾರದ ನೀರಿನ ಮಟ್ಟ 492.19 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಡ್ಯಾಂಗೆ ಒಳಹರಿವು 36264 ಕ್ಯುಸೆಕ್ ಆಗಿದೆ. 33532 ಕ್ಯುಸೆಕ್ ಹೊರ ಹರಿವು ದಾಖಲಾಗಿದೆ.

ಸೂಪ, ಘಟಪ್ರಭಾ, ಮಲಪ್ರಭಾ

ಸೂಪ, ಘಟಪ್ರಭಾ, ಮಲಪ್ರಭಾ

ಸೂಪಾ ಜಲಾಶಯದ ಮಂಗಳವಾರದ ನೀರಿನ ಮಟ್ಟ 557.10 ಮೀಟರ್. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 4393 ಕ್ಯುಸೆಕ್ ಆಗಿದೆ. ಹೊರ ಹರಿವು 2166 ಕ್ಯುಸೆಕ್ ದಾಖಲಾಗಿದೆ.

ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಮಂಗಳವಾರ ಜಲಾಶಯದಲ್ಲಿ 662.91 ಮೀಟರ್ ಆಗಿದೆ. ಜಲಾಶಯದ ಒಳಹರಿವು 2240 ಕ್ಯುಸೆಕ್ ಇದೆ. ಹೊರ ಹರಿವು 2240 ಕ್ಯುಸೆಕ್

ಮಲಪ್ರಭಾ ಜಲಾಶಯದ ಮಂಗಳವಾರದ ನೀರಿನ ಮಟ್ಟ 633.80 ಮೀಟರ್. ಪೂರ್ಣ ಮಟ್ಟ 633.80 ಮೀಟರ್ ಆಗಿದೆ. ಜಲಾಶಯದ ಒಳಹರಿವು 3704 ಕ್ಯುಸೆಕ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+