ಕರ್ನಾಟಕದ ಜಲಾಶಯಗಳ ಸೋಮವಾರದ ನೀರಿನ ಮಟ್ಟ

ಬೆಂಗಳೂರು, ಆಗಸ್ಟ್ 09; ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆಯಾಗುತ್ತಿದೆ.

ಮೈಸೂರು ಜಿಲ್ಲೆಯ ಪ್ರಮುಖ ಜಲಾಶಯವಾದ ಕಬಿನಿ ಈಗ ಸುಣ್ಣ ಬಣ್ಣಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಮುಖ್ಯಮಂತ್ರಿಗಳು ಆಗಮಿಸಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಬೇಕಿದೆ.

2,284 ಅಡಿಗಳ ಕಬಿನಿ ಜಲಾಶಯದಲ್ಲಿ ಸದ್ಯ 2,280 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಉಳಿದ ನೀರನ್ನು ನದಿಗೆ ಬಿಡಲಾಗುತ್ತಿದೆ. ಕೆಆರ್‌ಎಸ್ ಜಲಾಶಯ ಮತ್ತು ಕಬಿನಿ ಜಲಾಶಯಕ್ಕೆ ಒಂದೇ ದಿನ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ಸಾಧ್ಯತೆ ಇದೆ. ಕೆಆರ್ ಎಸ್ ಜಲಾಶಯ ಭರ್ತಿಯಾಗಲು ಇನ್ನೂ ಕೆಲವು ದಿನ ಕಾಯಬೇಕಿದೆ.

ಮಹಾರಾಷ್ಟ್ರ ಭಾಗದಲ್ಲಿ ಮಳೆ ಕಡಿಮೆಯಾಗಿದ್ದು ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ನಾರಾಯಣಪುರ ಮತ್ತು ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 1 ಲಕ್ಷಕ್ಕಿಂತ ಕಡಿಮೆಯಾಗಿದೆ. ಕರ್ನಾಟಕದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ? ಎಂಬ ಮಾಹಿತಿ ಇಲ್ಲಿದೆ..

ಲಿಂಗನಮಕ್ಕಿ ಜಲಾಶಯದಲ್ಲಿ ನೀರು

ಲಿಂಗನಮಕ್ಕಿ ಜಲಾಶಯದಲ್ಲಿ ನೀರು

ಶಿವಮೊಗ್ಗದ ಸಾಗರದಲ್ಲಿರುವ ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 554.44 ಮೀಟರ್, ಜಲಾಶಯದ ಇಂದಿನ ಮಟ್ಟ 552.12 ಮೀಟರ್ ಆಗಿದೆ. ಒಳಹರಿವು 14,645 ಕ್ಯುಸೆಕ್. 6060 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕೊಡಗಿನಲ್ಲಿರುವ ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಇಂದಿನ ನೀರಿನ ಮಟ್ಟ 870.23 ಮೀಟರ್ ಆಗಿದೆ. ಜಲಾಶಯಕ್ಕೆ 8034 ಒಳಹರಿವು ಕ್ಯುಸೆಕ್ ಆಗಿದೆ. ಹೊರ ಹರಿವು 4743 ಕ್ಯುಸೆಕ್ ಆಗಿದೆ.

ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. ಇಂದಿನ ನೀರಿನ ಮಟ್ಟ 890.08 ಮೀಟರ್. 7516 ಕ್ಯುಸೆಕ್ ಒಳಹರಿವು, 6005 ಕ್ಯುಸೆಕ್ ಹೊರ ಹರಿವು ಇದೆ.

ಕಬಿನಿ, ಕೆಆರ್‌ಎಸ್, ಭದ್ರಾ ಜಲಾಶಯಗಳು

ಕಬಿನಿ, ಕೆಆರ್‌ಎಸ್, ಭದ್ರಾ ಜಲಾಶಯಗಳು

ಕಬಿನಿ ಜಲಾಶಯದ ಪೂರ್ಣ ಮಟ್ಟ 696.13 ಮೀಟರ್. ಇಂದಿನ ನೀರಿನ ಮಟ್ಟ 695.55 ಮೀಟರ್ ಆಗಿದೆ. ಡ್ಯಾಂ ಒಳಹರಿವು 10840 ಕ್ಯುಸೆಕ್, ಹೊರಹರಿವು 11450 ಕ್ಯುಸೆಕ್ ಆಗಿದೆ.

ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯದ ಪೂರ್ಣ ಮಟ್ಟ 38.04 ಮೀಟರ್. ಇಂದಿನ ನೀರಿನ ಮಟ್ಟ 36.63 ಮೀಟರ್ ಆಗಿದೆ. ಜಲಾಶಯಕ್ಕೆ 25066 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಡ್ಯಾಂನಿಂದ 5452 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.

ಭದ್ರಾ ಜಲಾಶಯದ ಪೂರ್ಣಮಟ್ಟ 657.73 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 657.22 ಮೀಟರ್ ಆಗಿದೆ. 12411 ಕ್ಯುಸೆಕ್ ಒಳಹರಿವು. ಡ್ಯಾಂನಿಂದ 13604 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ.

ಆಲಮಟ್ಟಿಗೆ ಒಳಹರಿವು ಇಳಿಕೆ

ಆಲಮಟ್ಟಿಗೆ ಒಳಹರಿವು ಇಳಿಕೆ

ತುಂಗಭದ್ರಾ ಜಲಾಶಯದ ಪೂರ್ಣಮಟ್ಟ 497.71 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 497.40 ಮೀಟರ್. ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಭದ್ರಾ ಜಲಾಶಯದ ಬಾಗಿಲು ಸಹ ತೆರೆಯಲಾಗಿದೆ. ಜಲಾಶಯಕ್ಕೆ 72369 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 69805 ಕ್ಯುಸೆಕ್.

ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಇಂದಿನ ನೀರಿನ ಮಟ್ಟ 519.24 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. 82828 ಕ್ಯುಸೆಕ್ ಒಳಹರಿವು ಇದೆ. ಹೊರ ಹರಿವು 76960 ಕ್ಯುಸೆಕ್ ದಾಖಲಾಗಿದೆ.

ನಾರಾಯಣಪುರ ಜಲಾಶಯದ ಪೂರ್ಣ ಮಟ್ಟ 492.25 ಮೀಟರ್. ಇಂದಿನ ನೀರಿನ ಮಟ್ಟ 491.71 ಮೀಟರ್ ಆಗಿದೆ. ಜಲಾಶಯದ ಒಳಹರಿವಿನಲ್ಲಿ ಇಳಿಕೆ ಉಂಟಾಗಿದೆ. 82518 ಕ್ಯುಸೆಕ್ ಒಳಹರಿವು ಇದೆ. ಹೊರ ಹರಿವು 88236 ಕ್ಯುಸೆಕ್.

ಸೂಪಾ, ಘಟಪ್ರಭಾ, ಮಲಪ್ರಭಾ ಡ್ಯಾಂಗಳು

ಸೂಪಾ, ಘಟಪ್ರಭಾ, ಮಲಪ್ರಭಾ ಡ್ಯಾಂಗಳು

ಸೂಪಾ ಜಲಾಶಯದ ಪೂರ್ಣ ಮಟ್ಟ 564.00 ಮೀಟರ್. ಇಂದಿನ ನೀರಿನ ಮಟ್ಟ 554.33 ಮೀಟರ್ ಆಗಿದೆ. ಜಲಾಶಯಕ್ಕೆ 8272 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವು 2728 ಕ್ಯುಸೆಕ್ ದಾಖಲಾಗಿದೆ.

ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಇಂದಿನ ನೀರಿನ ಮಟ್ಟ 662.30 ಮೀಟರ್ ಆಗಿದೆ. ಡ್ಯಾಂಗೆ 6842 ಕ್ಯುಸೆಕ್ ಒಳಹರಿವು ಮತ್ತು ಹೊರ ಹರಿವು 1799 ಕ್ಯುಸೆಕ್.

ಮಲಪ್ರಭಾ ಜಲಾಶಯದ ಪೂರ್ಣ ಮಟ್ಟ 633.80 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 632.98 ಮೀಟರ್ ಆಗಿದೆ. ಜಲಾಶಯಕ್ಕೆ 4572 ಕ್ಯುಸೆಕ್ ಒಳಹರಿವು, ಹೊರಹರಿವು 1516 ಕ್ಯುಸೆಕ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+