ಮುಂಗಾರು ಮಳೆ ಅಬ್ಬರ ಕಡಿಮೆ; ಜಲಾಶಯದ ನೀರಿನ ಮಟ್ಟ
ಬೆಂಗಳೂರು, ಆಗಸ್ಟ್ 03; ಮಲೆನಾಡು, ಕರಾವಳಿ ಮತ್ತು ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ಮಹಾರಾಷ್ಟ್ರ ಕಡೆಯಿಂದ ಬಂದು ಸೇರುತ್ತಿರುವ ನೀರಿನಿಂದಾಗಿ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಯಥಾಸ್ಥಿತಿ ಇದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಮತ್ತು ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆಗಳು ಮುಳುಗಿ ಒಂದು ವಾರ ಕಳೆಯುತ್ತಾ ಬಂದಿದೆ. ಭತ್ತದ ಗದ್ದೆಗಳಲ್ಲಿ ಒಂದು ವಾರದಿಂದ ನೀರು ನಿಂತಿದ್ದು, ಬೆಳೆ ಕೊಳೆತು ಹೋಗಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ನದಿಗೆ ಹರಿದುಬರುತ್ತಿರುವ ನೀರು ಕಡಿಮೆಯಾಗಿಲ್ಲ. ಮಹಾರಾಷ್ಟ್ರ ಕಡೆಯಿಂದ 2.85 ಲಕ್ಷ ಕ್ಯುಸೆಕ್ ನೀರು ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬಂದು ಸೇರುತ್ತಿದೆ.
ಚಿಕ್ಕೋಡಿ, ಕಾಗವಾಡ, ರಾಯಬಾಗ ಮತ್ತು ಅಥಣಿ ತಾಲೂಕುಗಳ ನದಿ ತೀರದ ಗ್ರಾಮಗಳು ಜಲಾವೃತವಾಗಿವೆ. ಚಿಕ್ಕೋಡಿ ತಾಲೂಕಿನಲ್ಲಿ 9 ಸೇತುವೆಗಳು ಮುಳುಗಡೆಯಾಗಿದ್ದು, ಕೆಲವು ಮಂಗಳವಾರ ಸಂಚಾರಕ್ಕೆ ಮುಕ್ತವಾಗಿವೆ. ಕಳೆದ ವಾರ ಕೃಷ್ಣಾ ನದಿಗೆ 3.04 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ನೀರಿನ ಪ್ರಮಾಣ ಕಡಿಮೆಯಾಗಿದೆ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ
ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 554.44 ಮೀಟರ್, ಜಲಾಶಯದ ಇಂದಿನ ಮಟ್ಟ 551.08 ಮೀಟರ್ ಆಗಿದೆ. ಒಳಹರಿವು 15102 ಕ್ಯುಸೆಕ್ ಆಗಿದ್ದು, 5177 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಇಂದಿನ ನೀರಿನ ಮಟ್ಟ 870.37 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 3220 ಕ್ಯುಸೆಕ್ ಆಗಿದೆ. ಹೊರ ಹರಿವು 2440 ಕ್ಯುಸೆಕ್.
ಹೇಮಾವತಿ ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. ಇಂದಿನ ನೀರಿನ ಮಟ್ಟ 889.77 ಮೀಟರ್. ಒಳಹರಿವು 5605 ಕ್ಯುಸೆಕ್, ಜಲಾಶಯದಿಂದ ಹೊರ ಹರಿವು 550 ಕ್ಯುಸೆಕ್ ಆಗಿದೆ.

ಕಬಿನಿ, ಕೆಆರ್‌ಎಸ್, ಭದ್ರಾ ಜಲಾಶಯಗಳು
ಕಬಿನಿ ಜಲಾಶಯದ ಪೂರ್ಣ ಮಟ್ಟ 696.13 ಮೀಟರ್. ಇಂದಿನ ನೀರಿನ ಮಟ್ಟ 694.99 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 4652 ಕ್ಯುಸೆಕ್, ಹೊರಹರಿವು 2500 ಕ್ಯುಸೆಕ್ ದಾಖಲಾಗಿದೆ.
ಕೆಆರ್‌ಎಸ್ ಜಲಾಶಯದ ಪೂರ್ಣ ಮಟ್ಟ 38.04 ಮೀಟರ್. ಇಂದಿನ ನೀರಿನ ಮಟ್ಟ 35.17 ಮೀಟರ್ ಆಗಿದೆ. ಜಲಾಶಯಕ್ಕೆ 7479 ಕ್ಯುಸೆಕ್ ಒಳಹರಿವು ಇದೆ. ಜಲಾಶಯದಿಂದ 5453 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.
ಭದ್ರಾ ಜಲಾಶಯದ ಪೂರ್ಣಮಟ್ಟ 657.73 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 656.78 ಮೀಟರ್ ಆಗಿದೆ. ಜಲಾಶಯಕ್ಕೆ 6083 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಡ್ಯಾಂನಿಂದ 164 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ತುಂಗಭದ್ರಾ, ಆಲಮಟ್ಟಿ ಜಲಾಶಯ
ತುಂಗಭದ್ರಾ ಜಲಾಶಯದ ಪೂರ್ಣಮಟ್ಟ 497.71 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 497.45 ಮೀಟರ್. ಜಲಾಶಯಕ್ಕೆ 29500 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 16286 ಕ್ಯುಸೆಕ್ ಆಗಿದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಇಂದಿನ ನೀರಿನ ಮಟ್ಟ 518.12 ಮೀಟರ್ ಆಗಿದೆ. ಜಲಾಶಯಕ್ಕೆ 309050 ಕ್ಯುಸೆಕ್ ಒಳಹರಿವು ಇದೆ. ಹೊರ ಹರಿವು 200451 ಕ್ಯುಸೆಕ್.
ನಾರಾಯಣಪುರ ಜಲಾಶಯದ ಪೂರ್ಣ ಮಟ್ಟ 492.25 ಮೀಟರ್. ಇಂದಿನ ನೀರಿನ ಮಟ್ಟ 491.18 ಮೀಟರ್ ಆಗಿದೆ. 218533 ಕ್ಯುಸೆಕ್ ಒಳಹರಿವು ಜಲಾಶಯಕ್ಕೆ ಇದೆ. ಹೊರ ಹರಿವು 169889 ಕ್ಯುಸೆಕ್.

ಸೂಪಾ, ಘಟಪ್ರಭಾ, ಮಲಪ್ರಭಾ ಡ್ಯಾಂಗಳು
ಸೂಪಾ ಜಲಾಶಯದ ಪೂರ್ಣ ಮಟ್ಟ 564.00 ಮೀಟರ್. ಇಂದಿನ ನೀರಿನ ಮಟ್ಟ 552.50 ಮೀಟರ್ ಆಗಿದೆ. ಜಲಾಶಯಕ್ಕೆ 12904 ಕ್ಯುಸೆಕ್ ಒಳಹರಿವು ಇದೆ. ಹೊರ ಹರಿವು 4697 ಕ್ಯುಸೆಕ್
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಇಂದಿನ ನೀರಿನ ಮಟ್ಟ 662.09 ಮೀಟರ್. ಒಳಹರಿವು 7715 ಕ್ಯುಸೆಕ್, ಹೊರ ಹರಿವು 7300 ಕ್ಯುಸೆಕ್ ಆಗಿದೆ.
ಮಲಪ್ರಭಾ ಜಲಾಶಯದ ಪೂರ್ಣ ಮಟ್ಟ 633.80 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 632.55 ಮೀಟರ್ ಆಗಿದೆ. ಒಳಹರಿವು 4692 ಕ್ಯುಸೆಕ್, ಹೊರಹರಿವು 194 ಕ್ಯುಸೆಕ್ ಆಗಿದೆ.












Click it and Unblock the Notifications