ಮುಂಗಾರು ಮಳೆ ಕಡಿಮೆ; ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಆಗಸ್ಟ್ 16; ನೈಋತ್ಯ ಮುಂಗಾರಿನ ಅಬ್ಬರ ಕಡಿಮೆಯಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಆಗಸ್ಟ್ 17ರ ತನಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಯ ಅಬ್ಬರ ಕಡಿಮೆಯಾಗಿದ್ದು ನದಿಗಳ ನೀರಿನ ಮಟ್ಟ ಇಳಿಕೆಯಾಗಿದೆ. ಇದರಿಂದಾಗಿ ಜಲಾಶಯಗಳ ಒಳಹರಿವು ಸಹ ಕಡಿಮೆಯಾಗಿದೆ. ಆದರೆ ಜುಲೈ ಮತ್ತು ಆಗಸ್ಟ್ ಮೊದಲ ವಾರ ಸುರಿದ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ.
ಬಂಗಾಳಕೊಲ್ಲಿಯಲ್ಲಿ ಪ್ರಬಲ ಮಾರುತಗಳು ಬೀಸುತ್ತಿರುವ ಕಾರಣ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಆಗಸ್ಟ್ 17ರ ತನಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ತಂಪಾದ ಗಾಳಿ ಬೀಸುತ್ತಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕೊಡಗು ಜಿಲ್ಲೆಯಲ್ಲಿ ಈ ಬಾರಿ ದಾಖಲೆಯ ಮಳೆಯಾಗಿದೆ. ಆದರೆ ಮಳೆಯ ಅನಾಹುತಗಳು ಕಡಿಮೆ. ಜಿಲ್ಲೆಯಲ್ಲಿರುವ ಹಾರಂಗಿ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ...

ಹಾರಂಗಿ, ಹೇಮಾವತಿ ಡ್ಯಾಂಗಳಲ್ಲಿ ಎಷ್ಟು ನೀರಿದೆ?
ಲಿಂಗನಮಕ್ಕಿ ಜಲಾಶಯದ ಸೋಮವಾರದ ನೀರಿನ ಮಟ್ಟ 552.36 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 554.44 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 9245 ಕ್ಯುಸೆಕ್ ಆಗಿದ್ದು, ಹೊರ ಹರಿವು 5588 ಕ್ಯುಸೆಕ್ ದಾಖಲಾಗಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಜಲಾಶಯದ ಇಂದಿನ ನೀರಿನ ಮಟ್ಟ 871.02 ಮೀಟರ್. ಜಲಾಶಯಕ್ಕೆ 5387 ಕ್ಯುಸೆಕ್ ಒಳಹರಿವು ಇದೆ. ಜಲಾಶಯದಿಂದ ಹೊರ ಹರಿವು 2100 ಕ್ಯುಸೆಕ್.
ಹೇಮಾವತಿ ಜಲಾಶಯದ ಸೋಮವಾರದ ನೀರಿನ ಮಟ್ಟ 889.97 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. ಡ್ಯಾಂಗೆ ಒಳಹರಿವು 3309 ಕ್ಯುಸೆಕ್ ಮತ್ತು ಹೊರ ಹರಿವು 4705 ಕ್ಯುಸೆಕ್ ಆಗಿದೆ.

ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ
ಕಬಿನಿ ಜಲಾಶಯದ ಸೋಮವಾರದ ನೀರಿನ ಮಟ್ಟ 657.40 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ 5301 ಕ್ಯುಸೆಕ್ ಒಳಹರಿವು ಇದ್ದು, ಹೊರಹರಿವು 3075 ಕ್ಯುಸೆಕ್.
ಮಂಡ್ಯದ ಕೆಆರ್‌ಎಸ್ ಜಲಾಶಯದ ಸೋಮವಾರದ ನೀರಿನ ಮಟ್ಟ 36.71 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 38.04 ಮೀಟರ್. ಜಲಾಶಯಕ್ಕೆ ಒಳಹರಿವು 3690 ಕ್ಯುಸೆಕ್, ಸೋಮವಾರದ ಹೊರ ಹರಿವು 5572 ಕ್ಯುಸೆಕ್ ದಾಖಲಾಗಿದೆ.
ಭದ್ರಾ ಜಲಾಶಯದ ಪೂರ್ಣಮಟ್ಟ 657.73 ಮೀಟರ್ ಆಗಿದೆ. ಜಲಾಶಯದ ಸೋಮವಾರದ ನೀರಿನ ಮಟ್ಟ 657.40 ಮೀಟರ್ ಆಗಿದೆ. ಡ್ಯಾಂಗೆ ಒಳಹರಿವು 5889 ಕ್ಯುಸೆಕ್ ಆಗಿದೆ. ಹೊರಹರಿವು 4396 ಕ್ಯುಸೆಕ್ ಆಗಿದೆ.

ಡ್ಯಾಂ ಒಳಹರಿವಿನ ಮಟ್ಟದಲ್ಲಿ ಇಳಿಕೆ
ತುಂಗಭದ್ರಾ ಜಲಾಶಯದ ನೀರಿನ ಮಟ್ಟ 497.69 ಮೀಟರ್. ಡ್ಯಾಂನ ಪೂರ್ಣಮಟ್ಟ 497.71 ಮೀಟರ್ ಆಗಿದೆ. ಹೊಸಪೇಟೆಯಲ್ಲಿರುವ ಜಲಾಶಯಕ್ಕೆ 15,558 ಕ್ಯುಸೆಕ್ ಒಳಹರಿವು ಇದ್ದು, ಹೊರ ಹರಿವು 15,113 ಕ್ಯುಸೆಕ್.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್ ಆಗಿದೆ. ಸೋಮವಾರದ ನೀರಿನ ಮಟ್ಟ 519.53 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಸೋಮವಾರ 20,380 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವು 28,507 ಕ್ಯುಸೆಕ್.
ನಾರಾಯಣಪುರ ಜಲಾಶಯದ ಸೋಮವಾರದ ನೀರಿನ ಮಟ್ಟ 492.01 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಜಲಾಶಯಕ್ಕೆ 36,948 ಕ್ಯುಸೆಕ್ ಒಳಹರಿವು ಆಗಿದ್ದು, ಹೊರ ಹರಿವು 7,994 ಕ್ಯುಸೆಕ್ ಆಗಿದೆ.

ಘಟಪ್ರಭಾ, ಮಲಪ್ರಭಾ ಡ್ಯಾಂ
ಸೂಪಾ ಜಲಾಶಯದ ಸೋಮವಾರದ ನೀರಿನ ಮಟ್ಟ 554.56 ಮೀಟರ್. ಪೂರ್ಣ ಮಟ್ಟ 564.00 ಮೀಟರ್. ಡ್ಯಾಂಗೆ ಒಳಹರಿವು 4278 ಕ್ಯುಸೆಕ್ ಇದ್ದು, ಹೊರ ಹರಿವು 3849 ಕ್ಯುಸೆಕ್ ದಾಖಲಾಗಿದೆ.
ಘಟಪ್ರಭಾ ಜಲಾಯಶದ ಸೋಮವಾರದ ನೀರಿನ ಮಟ್ಟ 662.91 ಮೀಟರ್. ಡ್ಯಾಂ ಪೂರ್ಣ ಮಟ್ಟ 662.91 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 5123 ಕ್ಯುಸೆಕ್. ಹೊರ ಹರಿವು 5123 ಕ್ಯುಸೆಕ್.
ಮಲಪ್ರಭಾ ಜಲಾಶಯದ ಇಂದಿನ ನೀರಿನ ಮಟ್ಟ 633.16 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 633.80 ಮೀಟರ್ ಆಗಿದೆ. ಡ್ಯಾಂಗೆ 2245 ಕ್ಯುಸೆಕ್ ಒಳಹರಿವು ಇದ್ದು, 694 ಕ್ಯುಸೆಕ್ ಹೊರ ಹರಿವು ಇದೆ.












Click it and Unblock the Notifications