ಲಿಂಗನಮಕ್ಕಿ ಭರ್ತಿಗೆ ಕೆಲವೇ ಅಡಿ ಬಾಕಿ; ಡ್ಯಾಂಗಳ ನೀರಿನ ಮಟ್ಟ
ಬೆಂಗಳೂರು, ಆಗಸ್ಟ್ 12; ಶಿವಮೊಗ್ಗದ ಸಾಗರದಲ್ಲಿರುವ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಗುರುವಾರ ಬೆಳಗ್ಗೆ 1812 ಅಡಿಗೆ ತಲುಪಿದೆ. 11,174 ಕ್ಯುಸೆಕ್ ಒಳಹರಿವು ಇದ್ದು, ಜಲಾಶಯದ ಕಳೆದಂಡೆ ಮತ್ತು ನದಿಪಾತ್ರದ ಜನರಿಗೆ ಜಲಾಶಯದಿಂದ ನೀರು ಹೊರಬಿಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಸಾಗರದ ಕಾರ್ಗಲ್‌ನಲ್ಲಿ ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಜಲಾಶಯದ ಗರಿಷ್ಟ ಮಟ್ಟ 1819 ಅಡಿಗಳು. ಪ್ರಸ್ತುತ ಜಲಾಶಯದಲ್ಲಿ 1812 ಅಡಿ ನೀರಿನ ಸಂಗ್ರಹವಿದೆ. ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಒಳಹರಿವು ಸಹ ಹೆಚ್ಚಿದೆ.
ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆ ಇದೆ. ಆದ್ದರಿಂದ ಜನರು ಜಾನುವಾರುಗಳ ಜೊತೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಜಲಾಶಯಕ್ಕೆ ಪೂಜೆ ಸಲ್ಲಿಕೆ ಮಾಡಿ ಸಾಂಪ್ರದಾಯಿಕವಾಗಿ ನೀರನ್ನು ಹೊರಬಿಡಲಾಗಿದೆ. ಈಗ ಒಳಹರಿವು ಹೆಚ್ಚಿದ ಹಿನ್ನಲೆ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, ಯಾವುದೇ ಸಂದರ್ಭದಲ್ಲಿ ನೀರನ್ನು ಹೊರಬಿಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಹಾರಂಗಿ, ಹೇಮಾವತಿ ಡ್ಯಾಂ ನೀರಿನ ಮಟ್ಟ
ಲಿಂಗನಮಕ್ಕಿ ಜಲಾಶಯದ ಗುರುವಾರದ ನೀರಿನ ಮಟ್ಟ 552.27 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 11,174 ಕ್ಯುಸೆಕ್. ಹೊರ ಹರಿವು 5188 ಕ್ಯುಸೆಕ್.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್ ಆಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 870.35 ಮೀಟರ್. ಡ್ಯಾಂಗೆ 3322 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಹೊರ ಹರಿವು 2816 ಕ್ಯುಸೆಕ್ ದಾಖಲಾಗಿದೆ.
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ 890.10 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್ ಆಗಿದೆ. ಡ್ಯಾಂಗೆ ಒಳಹರಿವು 3828 ಕ್ಯುಸೆಕ್, ಗುರುವಾರದ ಹೊರ ಹರಿವು 4105 ಕ್ಯುಸೆಕ್.

ಕೆಆರ್‌ಎಸ್ ಜಲಾಶಯದಲ್ಲಿ ಎಷ್ಟು ನೀರಿದೆ?
ಕಬಿನಿ ಜಲಾಶಯದ ಗುರುವಾರದ ನೀರಿನ ಮಟ್ಟ 695.60 ಮೀಟರ್. ಜಲಾಶಯದ ಪೂರ್ಣ ಮಟ್ಟ 696.13 ಮೀಟರ್ ಆಗಿದೆ. ಕ್ಯುಸೆಕ್ ಒಳಹರಿವು ಇದ್ದು, ಹೊರಹರಿವು ಕ್ಯುಸೆಕ್ ದಾಖಲಾಗಿದೆ.
ಮಂಡ್ಯದ ಕೆಆರ್‌ಎಸ್ ಜಲಾಶಯದ ಗುರುವಾರದ ನೀರಿನ ಮಟ್ಟ 36.87 ಮೀಟರ್. ಡ್ಯಾಂ ಪೂರ್ಣ ಮಟ್ಟ 38.04 ಮೀಟರ್. ಡ್ಯಾಂಗೆ ಒಳಹರಿವು 5991 ಕ್ಯುಸೆಕ್ ಆಗಿದ್ದು, ಹೊರ ಹರಿವು 5503 ಕ್ಯುಸೆಕ್ ದಾಖಲಾಗಿದೆ.
ಭದ್ರಾ ಜಲಾಶಯದ ಗುರುವಾರದ ನೀರಿನ ಮಟ್ಟ 657.28 ಮೀಟರ್. ಜಲಾಶಯದ ಪೂರ್ಣಮಟ್ಟ 657.73 ಮೀಟರ್. ಡ್ಯಾಂ ಒಳಹರಿವು 5909 ಕ್ಯುಸೆಕ್, 5609 ಕ್ಯುಸೆಕ್ ಹೊರಹರಿವು ಇದೆ.

ಒಳಹರಿವಿನ ಮಟ್ಟದಲ್ಲಿ ಇಳಿಕೆ
ತುಂಗಭದ್ರಾ ಜಲಾಶಯದ ಗುರುವಾರದ ನೀರಿನ ಮಟ್ಟ 497.60 ಮೀಟರ್ ಇದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 29,244 ಕ್ಯುಸೆಕ್ ಒಳಹರಿವು ಇದ್ದು, ಹೊರ ಹರಿವು 10988 ಕ್ಯುಸೆಕ್ ಆಗಿದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಗುರುವಾರದ ನೀರಿನ ಮಟ್ಟ 519.30 ಮೀಟರ್. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜಲಾಶಯಕ್ಕೆ ಒಳಹರಿವು ಕಡಿಮೆಯಾಗುತ್ತಿದೆ. 24098 ಕ್ಯುಸೆಕ್ ನೀರು ಬರುತ್ತಿದ್ದು, ಹೊರ ಹರಿವು 2582 ಕ್ಯುಸೆಕ್.
ನಾರಾಯಣಪುರ ಜಲಾಶಯದ ಗುರುವಾರದ ನೀರಿನ ಮಟ್ಟ 491.59 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 741 ಕ್ಯುಸೆಕ್, ಹೊರ ಹರಿವು 9987ಕ್ಯುಸೆಕ್.

ಘಟಪ್ರಭಾ, ಮಲಪ್ರಭಾ ನೀರಿನ ಮಟ್ಟ
ಸೂಪಾ ಜಲಾಶಯದ ಗುರುವಾರದ ನೀರಿನ ಮಟ್ಟ 554.50 ಮೀಟರ್. ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 550 ಕ್ಯುಸೆಕ್ ಇದ್ದು, ಹೊರ ಹರಿವು 3408 ಕ್ಯುಸೆಕ್.
ಘಟಪ್ರಭಾ ಜಲಾಯಶದ ಗುರುವಾರದ ನೀರಿನ ಮಟ್ಟ 662.51 ಮೀಟರ್. ಡ್ಯಾಂ ಪೂರ್ಣ ಮಟ್ಟ 662.91 ಮೀಟರ್. ಜಲಾಶಯದ ಒಳಹರಿವು 4459 ಕ್ಯುಸೆಕ್. ಹೊರ ಹರಿವು 1589 ಕ್ಯುಸೆಕ್.
ಮಲಪ್ರಭಾ ಜಲಾಶಯದ ಇಂದಿನ ನೀರಿನ ಮಟ್ಟ 633.04 ಮೀಟರ್. ಜಲಾಶಯದ ಪೂರ್ಣ ಮಟ್ಟ 633.80 ಮೀಟರ್. ಜಲಾಶಯಕ್ಕೆ 1544 ಕ್ಯುಸೆಕ್ ಒಳಹರಿವು, 1544 ಕ್ಯುಸೆಕ್ ಹೊರಹರಿವು ಇದೆ.












Click it and Unblock the Notifications