ಜಾತಿ, ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಟಿಕೆಟ್, ಹೇಗಿದೆ ಲೆಕ್ಕಾಚಾರ?

Posted By:
Subscribe to Oneindia Kannada

ಕಾಂಗ್ರೆಸ್ ನ ಟಿಕೆಟ್ ಘೋಷಣೆ ಆದ ಮೇಲೆ ಸಹಜವಾಗಿಯೇ ಜಾತಿ ಲೆಕ್ಕಾಚಾರಗಳು ಆರಂಭವಾಗಿವೆ. ಯಾವ ಜಾತಿ, ವರ್ಗಕ್ಕೆ ಎಷ್ಟು ಟಿಕೆಟ್ ಗಳನ್ನು ನೀಡಲಾಗಿದೆ ಎಂಬುದು ಅದರ ಹೂರಣ. ಅದಕ್ಕೆ ಕಾರಣವೂ ಸ್ಪಷ್ಟ. ಸಾಮಾಜಿಕ ನ್ಯಾಯದ ಬಗ್ಗೆ ಬಹಳ ಹೆಚ್ಚು ಮಾತನಾಡುವ ಕಾಂಗ್ರೆಸ್ ಏನು ಮಾಡಿದೆ, ಹೇಗೆ ನಡೆದುಕೊಂಡಿದೆ ಎಂಬ ಪ್ರಶ್ನೆ ಸಹಜ.

ಅದಕ್ಕೆ ಈ ವರದಿಯಲ್ಲಿ ಉತ್ತರ ಇದೆ. ಯಾವ ಜಾತಿ, ವರ್ಗ ಹಾಗೂ ಧರ್ಮಕ್ಕೆ ಯಾವ ರೀತಿಯ ಪ್ರಾಶಸ್ತ್ಯವನ್ನು ಕಾಂಗ್ರೆಸ್ ನೀಡಿದೆ ಎಂಬುದರ ವಿವರ ಇಲ್ಲಿದೆ.

ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಮಣೆ, ಆ 15 ಮಂದಿ ಯಾರು?

ಹಿಂದುಳಿದ ವರ್ಗದವರು 50(+ ಅಥವಾ -)

ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದವರು 50

ಲಿಂಗಾಯತ 40

ಒಕ್ಕಲಿಗ 21-23

ಬ್ರಾಹ್ಮಣ 5

ಮುಸ್ಲಿಂ 9

ಕ್ರೈಸ್ತ 2

ಹೀಗಿದೆ ಟಿಕೆಟ್ ಹಂಚಿಕೆಯಲ್ಲಿ ಜಾತಿ-ಧರ್ಮಗಳ ಲೆಕ್ಕಾಚಾರ. ಅಂದಹಾಗೆ ಕರ್ನಾಟಕ ವಿಧಾನಸಭೆ ಮೇ 12ರಂದು ಚುನಾವಣೆ ನಡೆಯಲಿದೆ. ಮೇ 15ನೇ ತಾರೀಕು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ಒಂದೇ ಹಂತದಲ್ಲಿ 218 ಕ್ಷೇತ್ರಗಳಿಗೆ ಕಾಂಗ್ರೆಸ್ ನಿಂದ ಟಿಕೆಟ್ ಘೋಷಣೆ ಮಾಡಲಾಗಿದೆ.

ಟಿಕೆಟ್ ಘೋಷಣೆ ಬೆನ್ನಿಗೆ ವಿವಿಧೆಡೆ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತವಾಗಿದೆ.

Karnataka Elections: Caste and religion wise Congress ticket priority

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Elections 2018: Congress ticket priority on the basis of caste, religion. Here is the info graphics about calculation of ticket distribution of Congress party. Backward class and SC/ST candidates are major contestants from Congress.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ