ಆಟೋ ಚಾಲಕನಿಗೆ ಬಾಡಿಗೆ ಬದಲು 'ಆರ್‌ಸಿಬಿ ಮ್ಯಾಚ್ ಟಿಕೆಟ್' ಕೊಟ್ಟ ಬೆಂಗಳೂರಿನ ಯುವಕ: Video Viral

ಬೆಂಗಳೂರಿನ ಟ್ರಾಫಿಕ್ ಮತ್ತು ದೈನಂದಿನ ಬದುಕಿನ ಜಂಜಾಟಗಳ ನಡುವೆ ಕೆಲವೊಮ್ಮೆ ಮುಖದ ಮೇಲೆ ನಗು ತರಿಸುವ, ಮನಸ್ಸಿಗೆ ಮುದ ನೀಡುವಂತಹ ಕೆಲವು ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬೆಂಗಳೂರಿನ ಯುವಕನೊಬ್ಬ ತಾನು ಪ್ರಯಾಣಿಸಿದ 'ರ್‍ಯಾಪಿಡೋ' ಆಟೋದ ಚಾಲಕನಿಗೆ ಬಾಡಿಗೆ ಹಣ ನೀಡುವ ಬದಲಾಗಿ, ಬಹುಬೇಡಿಕೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯದ ಟಿಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಅಷ್ಟೇ ಅಲ್ಲದೆ, ಆತನನ್ನು ತನ್ನ ಜೊತೆಯಲ್ಲೇ ಕ್ರೀಡಾಂಗಣಕ್ಕೆ ಕರೆದೊಯ್ದು ಪಂದ್ಯ ವೀಕ್ಷಿಸುವ ಮೂಲಕ ಆಟೋ ಚಾಲಕನ ಕನಸೊಂದನ್ನು ನನಸು ಮಾಡಿದ್ದಾನೆ.

ಪ್ರತಿ ಭಾರಿ ತಮ್ಮ ವಿಭಿನ್ನ ಹಾಗೂ ತಮಾಷೆಯ ಕಂಟೆಂಟ್‌ಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ 'ನಿತಿನ್ ಸಿಕ್ವೇರಾ' ಈ ಅದ್ಭುತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ನಿತಿನ್, ತನ್ನ ಆಟೋ ಚಾಲಕನಿಗೆ ವಿಶೇಷ ರೀತಿಯಲ್ಲಿ 'ಹಣ ಪಾವತಿ' ಮಾಡಲಿದ್ದೇನೆ ಎಂದು ವೀಕ್ಷಕರಿಗೆ ತಿಳಿಸುತ್ತಾರೆ. ಅದಕ್ಕಾಗಿ ತಾವು ತಂದಿದ್ದ ಆರ್‌ಸಿಬಿ ಮ್ಯಾಚ್ ಟಿಕೆಟ್‌ಗಳನ್ನು ಕ್ಯಾಮೆರಾಗೆ ತೋರಿಸುತ್ತಾರೆ.

Bengaluru

ನಂತರ ರ್‍ಯಾಪಿಡೋ ಆಟೋ ಹತ್ತಿದ ನಿತಿನ್, ಚಾಲಕನೊಂದಿಗೆ ಸಹಜವಾಗಿ ಮಾತುಕತೆ ಆರಂಭಿಸುತ್ತಾರೆ. "ನೀವು ಆರ್‌ಸಿಬಿ ಅಭಿಮಾನಿಯೇ?" ಎಂದು ಕೇಳಿದಾಗ, ಚಾಲಕ "ಹೌದು" ಎಂದು ಉತ್ತರಿಸುತ್ತಾನೆ. "ನಿಮ್ಮ ನೆಚ್ಚಿನ ಆಟಗಾರ ಯಾರು?" ಎಂಬ ಪ್ರಶ್ನೆಗೆ ಚಾಲಕ ಸ್ವಲ್ಪವೂ ಯೋಚಿಸದೆ "ವಿರಾಟ್ ಕೊಹ್ಲಿ" ಎಂದು ಹೇಳುತ್ತಾನೆ. ಮಾತು ಮುಂದುವರಿಸಿದ ನಿತಿನ್, "ನೀವು ಎಂದಾದರೂ ಸ್ಟೇಡಿಯಂಗೆ ಹೋಗಿ ನೇರವಾಗಿ ಆರ್‌ಸಿಬಿ ಮ್ಯಾಚ್ ನೋಡಿದ್ದೀರಾ?" ಎಂದು ಕೇಳುತ್ತಾರೆ. ಅದಕ್ಕೆ ಆಟೋ ಚಾಲಕ "ಇಲ್ಲ ಸರ್, ಈವರೆಗೂ ನೋಡಿಲ್ಲ" ಎಂದು ಉತ್ತರಿಸುತ್ತಾನೆ. ಆಟೋ ಚಾಲಕನ ಈ ಉತ್ತರವೇ ಮುಂದಿನ ಸರ್ಪ್ರೈಸ್‌ಗೆ ವೇದಿಕೆ ಸೃಷ್ಟಿಸುತ್ತದೆ.

Bengaluru Infrastructure: ಬೆಂಗಳೂರಿನ ಮೂಲಸೌಕರ್ಯಕ್ಕೇ ಪ್ರತಿ ದಿನ 100 ಕೋಟಿ ರೂ. ವೆಚ್ಚ!
Bengaluru Infrastructure: ಬೆಂಗಳೂರಿನ ಮೂಲಸೌಕರ್ಯಕ್ಕೇ ಪ್ರತಿ ದಿನ 100 ಕೋಟಿ ರೂ. ವೆಚ್ಚ!

ಪ್ರಯಾಣದ ಮಧ್ಯೆ ಸ್ವಲ್ಪ ಹೊತ್ತು ಆಟೋ ನಿಲ್ಲಿಸುವ ನಿತಿನ್, ಪ್ರೋಮೋ ಕೋಡ್ ಬಳಸಿರುವುದರಿಂದ ತನಗೆ ಈ ಆಟೋ ಪ್ರಯಾಣ ಸಂಪೂರ್ಣ ಉಚಿತವಾಗಿದೆ ಎಂಬುದನ್ನು ವೀಕ್ಷಕರಿಗೆ ವಿವರಿಸುತ್ತಾರೆ. ಜೊತೆಗೆ, ತಾನು ಬ್ಯಾಗಿನಲ್ಲಿ ತಂದಿದ್ದ ಆರ್‌ಸಿಬಿ ಜೆರ್ಸಿಯೊಂದನ್ನು ತೋರಿಸಿ ಮುಂಬರುವ ಸರ್ಪ್ರೈಸ್ ಬಗ್ಗೆ ಸುಳಿವು ನೀಡುತ್ತಾರೆ.

ಪ್ರಯಾಣದ ಕೊನೆಯಲ್ಲಿ, ನಿತಿನ್ ಆರ್‌ಸಿಬಿ ಜೆರ್ಸಿ ಹಾಗೂ ಮುಂಬರುವ ಪಂದ್ಯದ ಟಿಕೆಟ್‌ಗಳನ್ನು ಆಟೋ ಚಾಲಕನ ಕೈಗಿಡುತ್ತಾರೆ. ಇದನ್ನು ಕಂಡು ಒಮ್ಮೆಲೇ ಅಚ್ಚರಿಗೊಳಗಾಗುವ ಚಾಲಕನ ಮುಖದಲ್ಲಿ ನಗು ಮೂಡುತ್ತದೆ. ಆತನ ಮುಖದಲ್ಲಿನ ಕಲ್ಮಶವಿಲ್ಲದ ಸಂತೋಷವೇ ಈ ವಿಡಿಯೋದ ಹೈಲೈಟ್. ಅನಿರೀಕ್ಷಿತವಾಗಿ ಸಿಕ್ಕ ಈ ಉಡುಗೊರೆಯಿಂದ ಚಾಲಕ ಭಾವುಕನಾಗುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋ ಅಲ್ಲಿಗೇ ಮುಗಿಯುವುದಿಲ್ಲ. ಮುಂದಿನ ಕ್ಲಿಪ್‌ಗಳಲ್ಲಿ, ನಿತಿನ್ ಮತ್ತು ಆಟೋ ಚಾಲಕ ಇಬ್ಬರೂ ಒಟ್ಟಿಗೆ ಆರ್‌ಸಿಬಿ ಜೆರ್ಸಿ ಧರಿಸಿ ಕ್ರೀಡಾಂಗಣದಲ್ಲಿ ಕುಳಿತಿರುವುದು ಕಂಡುಬರುತ್ತದೆ. ಇಬ್ಬರೂ ಒಟ್ಟಿಗೆ ನಗುತ್ತಾ, ಹುರಿದುಂಬಿಸುತ್ತಾ ಪಂದ್ಯದ ವಾತಾವರಣವನ್ನು ಆನಂದಿಸುತ್ತಿರುವ ದೃಶ್ಯಗಳು ನೆಟ್ಟಿಗರ ಮನಗೆದ್ದಿವೆ. ಒಂದು ಸಾಮಾನ್ಯ ಆಟೋ ಪ್ರಯಾಣವನ್ನು ಜೀವನಪರ್ಯಂತ ನೆನಪಿನಲ್ಲಿ ಉಳಿಯುವಂತಹ ಮರೆಯಲಾಗದ ಅನುಭವವಾಗಿ ನಿತಿನ್ ಬದಲಾಯಿಸಿದ್ದಾರೆ.

Bengaluru Rental: ಬೆಂಗಳೂರು ಬಾಡಿಗೆದಾರರಿಗೆ ಹೊಸ ಸಂಕಷ್ಟ; ಈ ಕಾರಣಕ್ಕೆ ಪೂರ್ಣ ಅಡ್ವಾನ್ಸ್‌ ಹಣ ತೆಗೆದುಕೊಂಡ ಮನೆ ಮಾಲೀಕ
Bengaluru Rental: ಬೆಂಗಳೂರು ಬಾಡಿಗೆದಾರರಿಗೆ ಹೊಸ ಸಂಕಷ್ಟ; ಈ ಕಾರಣಕ್ಕೆ ಪೂರ್ಣ ಅಡ್ವಾನ್ಸ್‌ ಹಣ ತೆಗೆದುಕೊಂಡ ಮನೆ ಮಾಲೀಕ

ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ವೀಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟಿಕೆಟ್ ಪಡೆದಾಗ ಆಟೋ ಚಾಲಕನ ಮುಖದಲ್ಲಿ ಮೂಡಿದ ಆ ಮಗುವಿನಂತಹ ನಗು ತಮ್ಮ ಮನಸ್ಸಿಗೆ ಮುದ ನೀಡಿದೆ, ತಮ್ಮ ಮೂಡ್ ಬದಲಾಯಿಸಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರಿಗೆ ಅವರು ಎಂದಿಗೂ ಅನುಭವಿಸದ ಕ್ಷಣವೊಂದನ್ನು ಉಡುಗೊರೆಯಾಗಿ ನೀಡುವ ಈ ಯೋಚನೆ ನಿಜಕ್ಕೂ ಅದ್ಭುತ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ, "ಇಂತಹ ಸರ್ಪ್ರೈಸ್ ಸಿಗುವುದಾದರೆ ನಾವೇ ರ್‍ಯಾಪಿಡೋ ಡ್ರೈವರ್ ಆಗಿಬಿಡುತ್ತೇವೆ" ಎಂದು ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+