ಶಿವಮೊಗ್ಗ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿರುವ ಮತದಾರರು ಇಷ್ಟು
ಶಿವಮೊಗ್ಗ, ಮೇ 5: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗವು ಸಿದ್ದಪಡಿಸಿದೆ. ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ಒಟ್ಟು 14,26,208 ಮತದಾರರಿದ್ದಾರೆ. ಇವರಲ್ಲಿ 7,11,732 ಪುರುಷ ಮತದಾರರು, 7,14,415 ಮಹಿಳಾ ಮತದಾರರು ಮತ್ತು 61 ತೃತೀಯ ಲಿಂಗಿ ಮತದಾರರಿದ್ದಾರೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ 2,56,361 ಮತದಾರರಿದ್ದರೆ, ತೀರ್ಥಹಳ್ಳಿಯಲ್ಲಿ ಕನಿಷ್ಠ ಅಂದರೆ ಕೇವಲ 1,54,122 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ.
ಶಿರಾರಿಪುರ ಮತ್ತು ಸೊರಬ ಬಿಟ್ಟು ಶಿವಮೊಗ್ಗದ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರ ಸಂಖ್ಯೆಗಿಂತ ಹೆಚ್ಚಿಗೆ ಇದೆ. ಇನ್ನು ಶಿವಮೊಗ್ಗದಲ್ಲಿ ಗರಿಷ್ಠ 20 ತೃತೀಯ ಲಿಂಗಿ ಮತದಾರರನ್ನು ಕಾಣಬಹುದಾಗಿದೆ.













Click it and Unblock the Notifications