ಕಲಬುರಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿರುವ ಮತದಾರರ ಸಂಪೂರ್ಣ ವಿವರ
ಕಲಬುರಗಿ, ಮೇ 11: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಬಾಕಿ ಉಳಿದಿರುವುದು ಕೆಲವೇ ಗಂಟೆಗಳು ಮಾತ್ರ. ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮುಗಿಸಿರುವ ಚುನಾವಣಾ ಆಯೋಗ ಮತದಾರರ ಅಂತಿಮ ಪಟ್ಟಿಯನ್ನೂ ಈಗಾಗಲೇ ಬಿಡುಗಡೆ ಮಾಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ 21,17,248 ಮತದಾರರಿದ್ದಾರೆ. ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಇವರಲ್ಲಿ 10,73,499 ಪುರುಷ ಮತದಾರರು ಮತ್ತು 10,43,391 ಮಹಿಳಾ ಮತದಾರರಿದ್ದಾರೆ. 358 ತೃತೀಯ ಲಿಂಗಿಗರೂ ಕಲಬುರಗಿಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
ಇಲ್ಲಿನ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಗರಿಷ್ಠ ಅಂದರೆ 2,74,281 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಇನ್ನು ಚಿಂಚೋಳಿಯಲ್ಲಿ ಕನಿಷ್ಠ 1,93,590 ಮತದಾರರಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುತ್ತಿರುವ ಚಿತ್ತಾಪುರದಲ್ಲಿ 2,31,920 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಇಲ್ಲಿನ ಸೇಡಂ ಮತ್ತು ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.













Click it and Unblock the Notifications