ಮೇಕ್ ಇನ್ ಇಂಡಿಯಾ ಕರ್ನಾಟಕದ ಒಂದು ಜಿಲ್ಲೆ ಒಂದು ಉತ್ಪನ್ನಗಳು
ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಭಾಗವಾಗಿ 'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟ್ವೀಟ್ ಮಾಡಿ ಈ ಕಾರ್ಯಕ್ರಮದಡಿ 30 ಜಿಲ್ಲೆಗಳ ಸ್ಥಳೀಯ ಉತ್ಪನ್ನಗಳಿಗೆ ಒತ್ತು ನೀಡಲಿದೆ ಎಂದಿದ್ದಾರೆ.
''ಒಂದು ಜಿಲ್ಲೆ- ಒಂದು ಉತ್ಪನ್ನ'' ಯೋಜನೆಯಡಿ ಬಾಗಲಕೋಟೆಯ ಈರುಳ್ಳಿ, ಬೆಳಗಾವಿಯ ಬೆಲ್ಲ, ಬಳ್ಳಾರಿಯ ಹಂದಿ, ಬೆಂಗಳೂರು ಗ್ರಾಮಾಂತರ - ಪೌಲ್ಟ್ರಿ ಉತ್ಪನ್ನ, ಬೆಂಗಳೂರು ನಗರ-ಬೇಕರಿ ಉತ್ಪನ್ನ, ಚಾಮರಾಜನಗರ -ಅರಿಶಿಣ, ಚಿಕ್ಕಬಳ್ಳಾಪುರ-ಟೊಮ್ಯಾಟೋ, ಚಿಕ್ಕಮಗಳೂರಿನ ಸಾಂಬಾರು ಪದಾರ್ಥ, ಚಿತ್ರದುರ್ಗದ ಕಡಲೆಕಾಯಿ ಉತ್ಪನ್ನ, ದಕ್ಷಿಣ ಕನ್ನಡ- ಸಾಗರ ಉತ್ಪನ್ನಗಳು, ದಾವಣೆಗೆರೆ-ಸಿರಿ ಧಾನ್ಯಗಳು, ಧಾರವಾಡದ ಮಾವು, ಗದಗ್ ನ ಬ್ಯಾಡಗಿ ಮೆಣಸಿನಕಾಯಿ, ಹಾಸನದ ತೆಂಗು ಉತ್ಪನ್ನಕ್ಕೆ ಆದ್ಯತೆ ಸಿಗಲಿದೆ
ಕರ್ನಾಟಕದ 30 ಜಿಲ್ಲೆಗಳ ಸ್ಥಳೀಯ, ಸಾಂಪ್ರದಾಯಿಕ ಪ್ರಮುಖ ಉತ್ಪನ್ನಗಳಿಗೆ ವಿಶೇಷ ಪ್ರೋತ್ಸಾಹ, ಆರ್ಥಿಕ ನೆರವು, ಉದ್ಯೋಗಾವಕಾಶ ದೊರೆಯಲಿದೆ. ಮಿಕ್ಕ ಜಿಲ್ಲೆಗಳ ಯಾವ ಉತ್ಪನ್ನಗಳಿಗೆ ಪ್ರಾಧಾನ್ಯತೆ ಸಿಗಲಿದೆ ಎಂಬುದನ್ನು ಸಚಿತ್ರ ವರದಿ ನೋಡಿ, ಚಿತ್ರ ವಿನ್ಯಾಸ: ಭರತ್ ಎಚ್. ಸಿ.














Click it and Unblock the Notifications