Infographics:ಕೊವಿಡ್ 19 ಸಾವು-ನೋವು, ಯಾವ ಜಿಲ್ಲೆ ಡೇಂಜರ್ ಜೋನ್ ನಲ್ಲಿದೆ?
ಬೆಂಗಳೂರು, ಜುಲೈ 20: ಕರ್ನಾಟಕದ 88ಕ್ಕೂ ಅಧಿಕ ಲ್ಯಾಬ್ ಗಳಲ್ಲಿ 10 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ಸಾಧಿಸಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಕಲಬುರಗಿ, ಬಳ್ಳಾರಿ, ಉಡುಪಿ, ಧಾರವಾಡ ಡೇಂಜರ್ ಜೋನ್ ನಲ್ಲಿರುವ ಜಿಲ್ಲೆಗಳೆನಿಸಿವೆ.
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 67,420ಕ್ಕೆ ಏರಿಕೆಯಾಗಿದೆ. ಒಟ್ಟು ಮೃತರ ಸಂಖ್ಯೆ 1,403ಕ್ಕೆ ಏರಿಕೆಯಾಗಿದೆ. ಇಂದು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದವರು 730 ಜನ, ಸಕ್ರಿಯ ಸೋಂಕಿತ ಪ್ರಕರಣಗಳು 42,216. ಒಟ್ಟಾರೆ ಗುಣಮುಖರಾದವರ ಸಂಖ್ಯೆ 23,795 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, 31 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಹೊಂದಿದ್ದರೆ, ದಕ್ಷಿಣ ಕನ್ನಡ 3591 ಟಾಪ್ 2 ಸ್ಥಾನದಲ್ಲಿದ್ದರೆ, ಲಾಕ್ಡೌನ್ ವಿಸ್ತರಣೆ ಮಾಡಿರುವ ಕಲಬುರಗಿ 2743ಕೇಸ್ ಹೊಂದಿದೆ. ಕೊಡಗು 272 ಕೇಸ್,ಚಿತ್ರದುರ್ಗ 217 ಕೇಸ್ ಹೊಂದಿದ್ದು ಕೊನೆ ಎರಡು ಸ್ಥಾನದಲ್ಲಿವೆ.
ವಿವಿಧ ಜಿಲ್ಲೆಗಳಲ್ಲಿನ ಕೊರೊನಾವೈರಸ್ ಪ್ರಕರಣಗಳು, ಸಕ್ರಿಯ ಕೇಸ್, ಗುಣಮುಖರಾದವರು, ಮೃತರ ಸಂಖ್ಯೆಗಳ ಇನ್ಫೋಗ್ರಾಫಿಕ್ಸ್ ಇಲ್ಲಿದೆ: ವಿನ್ಯಾಸ: ಭರತ್ ಎಚ್. ಸಿ













Click it and Unblock the Notifications