Infographics: ಕರ್ನಾಟಕದಲ್ಲಿ ಕೊವಿಡ್ 19 ಯಾವ ಜಿಲ್ಲೆಯಲ್ಲಿ ಹೆಚ್ಚು ಚೇತರಿಕೆ?
ಕರ್ನಾಟಕದಲ್ಲಿ ಶನಿವಾರ(ಸೆ.13) ದಂದು 9140 ಹೊಸ ಕೋವಿಡ್ ಸೋಂಕಿನ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 4,49,551ಕ್ಕೆ ಏರಿಕೆಯಾಗಿದೆ. ಇದುವರೆಗೂ ರಾಜ್ಯದಲ್ಲಿ 7161 ಜನರು ಮೃತಪಟ್ಟಿದ್ದಾರೆ. ಆದರೆ, 9557 ಮಂದಿ ಗುಣಮುಖರಾಗಿದ್ದು, ಒಟ್ಟು ಚೇತರಿಕೆ ಹೊಂದಿದವರ ಸಂಖ್ಯೆ 344, 556ಕ್ಕೇರಿದೆ.
ಬೆಂಗಳೂರು ಸೇರಿದಂತೆ ಬಳ್ಳಾರಿ, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಉಡುಪಿ, ದಾವಣಗೆರೆ, ಶಿವಮೊಗ್ಗ, ಹಾಸನ ಡೇಂಜರ್ ಜೋನ್ ನಲ್ಲಿರುವ ಟಾಪ್ 10 ಜಿಲ್ಲೆಗಳಾಗಿವೆ.
ಸೆಪ್ಟೆಂಬರ್ 13ರಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, 1,67,183ಕ್ಕೂ ಅಧಿಕ ಪ್ರಕರಣಗಳನ್ನು ಹೊಂದಿದ್ದರೆ, ಬಳ್ಳಾರಿ ಎರಡನೇ ಸ್ಥಾನಕ್ಕೆ ಜಿಗಿದಿದ್ದು 26,152 ಪ್ರಕರಣ ಹೊಂದಿದೆ. ಮೈಸೂರು ಮೂರನೇ ಸ್ಥಾನಕ್ಕೇರಿದ್ದು, 25, 086 ಪ್ರಕರಣ ದಾಖಲಾಗಿವೆ. ದಕ್ಷಿಣ ಕನ್ನಡ 16, 959 ಕೇಸ್ ಹೊಂದಿದ್ದು ಟಾಪ್ 4ಸ್ಥಾನದಲ್ಲಿದ್ದರೆ, ಬೆಳಗಾವಿ 16, 051 ಕೇಸ್ ನೊಂದಿಗೆ 5ನೇ ಸ್ಥಾನದಲ್ಲಿದೆ. ಕೊಡಗು 19083, ಚಾಮರಾಜನಗರ 2942,ರಾಮನಗರ 4180 ಕೇಸ್ ಹೊಂದಿದ್ದು ಕೊನೆ ಮೂರು ಸ್ಥಾನದಲ್ಲಿವೆ.
ವಿವಿಧ ಜಿಲ್ಲೆಗಳಲ್ಲಿನ ಕೊರೊನಾವೈರಸ್ ಪ್ರಕರಣಗಳು, ಸಕ್ರಿಯ ಕೇಸ್, ಗುಣಮುಖರಾದವರು, ಮೃತರ ಸಂಖ್ಯೆಗಳ ಇನ್ಫೋಗ್ರಾಫಿಕ್ಸ್ ಇಲ್ಲಿದೆ: ವಿನ್ಯಾಸ: ಭರತ್ ಎಚ್. ಸಿ













Click it and Unblock the Notifications