ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ ತೃತೀಯ ದಿನದಂದು ಕೊಂಚ ಡಲ್ ಹೊಡೆದ ಚಿನ್ನದ ಬೆಲೆ

|
Google Oneindia Kannada News

ಮೇ 14ರಂದು ಭಾರತದೆಲ್ಲೆಡೆ ಅಕ್ಷಯ ತದಿಗೆ ಸಂಭ್ರಮ ಮನೆ ಮಾಡಿದೆ. ಕೋವಿಡ್ 19 ನಿಯಮಾವಳಿ ಜಾರಿಯಲ್ಲಿದ್ದು, ಹಲವೆಡೆ ಲಾಕ್ ಡೌನ್ ಇದೆ. ಹೀಗಾಗಿ ಆಭರಣ ಖರೀದಿಗೆ ಮಳಿಗೆಗೆ ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ, ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಇಂದು ಕೊಂಚ ಡಲ್ ಹೊಡೆದಿದೆ.

ಎಂಸಿಎಕ್ಸ್‌ನಲ್ಲಿ 10 ಗ್ರಾಂ ದರ 47,343 ರು ಇದ್ದರೆ ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.3ರಷ್ಟು ಇಳಿಕೆಯಾಗಿ 1,821.89 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.19ರಷ್ಟು ಇಳಿಕೆಯಾಗಿ 27.29ಯುಎಸ್ ಡಾಲರ್ ಆಗಿದೆ.

ಮೊದಲ ತ್ರೈಮಾಸಿಕದ ಒಟ್ಟು ಜಾಗತಿಕ ಚಿನ್ನದ ಬೇಡಿಕೆ 815.7 ಟನ್‌ಗಳಷ್ಟಿತ್ತು. ನಂತರ ಚಿನ್ನದ ಬೆಂಬಲಿತ ಇಟಿಎಫ್‌ಗಳು 177.9 ಟನ್‌ ಹೊರಹರಿವಿನ ಕಾರಣದಿಂದ ವರ್ಷದಿಂದ ವರ್ಷಕ್ಕೆ ಗಮನಾರ್ಹ ಕುಸಿತ (23%) ಕಂಡಿದೆ. ಸತತ 7 ದಿನಗಳ ಕಾಲ ಚಿನ್ನದ ಬೆಲೆ ಕುಸಿತ ಕಂಡಿದ್ದು, ಒಟ್ಟಾರೆ, 10,000ರುಗೂ ಅಧಿಕ ಮೊತ್ತ ಕಳೆದುಕೊಂಡಿದೆ.

ಮೇ 14ರಂದು ಖರೀದಿ ಚಿನ್ನ 0.2% ಕುಸಿತ ಕಂಡು 22 ಕ್ಯಾರೆಟ್ ಚಿನ್ನದ ಬೆಲೆ 46,140 ರು ಪ್ರತಿ 10 ಗ್ರಾಂಗೆ ಹಾಗೂ 24 ಕ್ಯಾರೆಟ್ ಚಿನ್ನ 47,760 ರು ಪ್ರತಿ ಗ್ರಾಂ ಆಗಿದೆ, ಇದೇ ವೇಳೆ ಬೆಳ್ಳಿ ದರ 1 ಕೆ.ಜಿಗೆ 70,948 ರು ಇದೆ ಎಂದು ಆಭರಣ ಮಾರಾಟಗಾರರ ಅಸೋಸಿಯೇಷನ್ (IBJA) ಹೇಳಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 44,650ರು ಬೆಲೆ ಹಾಗೂ ಅಪರಂಜಿ 48,710 ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್ ನಲ್ಲಿ75,300ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 70,500 ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಮೇ 14ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.. ಚಿತ್ರ ವಿನ್ಯಾಸ: ಭರತ್ ಎಚ್. ಸಿ.

Infographics: Gold Rates on Major Cities Today on Akshaya Tritiya
English summary
Infographics: The price of Gold Rates slashed on Major Cities in India on Akshaya Tritiya (May 14).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X