ಮೇ 19ರಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ?; ಇಲ್ಲಿದೆ ವಿವರ...

ನವದೆಹಲಿ, ಮೇ 19: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಸತತ ಏರಿಳಿತ ಕಾಣುತ್ತಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ 1,867.08 ಡಾಲರ್‌ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 27.89 ಡಾಲರ್‌ ಆಗಿದೆ.

ಮೇ 19ರಂದು ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ಹತ್ತು ಗ್ರಾಂಗೆ 46,820 ತಲುಪಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 50 ಸಾವಿರ ಗಡಿಯನ್ನು ದಾಟಿ 50,720 ರೂ ದಾಖಲಾಗಿದೆ.

ಮೊದಲ ತ್ರೈಮಾಸಿಕದ ಒಟ್ಟು ಜಾಗತಿಕ ಚಿನ್ನದ ಬೇಡಿಕೆ 815.7 ಟನ್‌ಗಳಷ್ಟಿತ್ತು. ನಂತರ ಚಿನ್ನದ ಬೆಂಬಲಿತ ಇಟಿಎಫ್‌ಗಳು 177.9 ಟನ್‌ ಹೊರಹರಿವಿನ ಕಾರಣದಿಂದ ವರ್ಷದಿಂದ ವರ್ಷಕ್ಕೆ ಗಮನಾರ್ಹ ಕುಸಿತ (23%) ಕಂಡಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 45,450 ಇದ್ದು, ಅಪರಂಜಿ 10 ಗ್ರಾಂಗೆ 49, 590 ರು ನಷ್ಟಿದೆ. ಇಂದು ಈ ಬೆಲೆ ಸ್ಥಿರವಾಗಿ ಉಳಿದುಕೊಂಡಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ತಗ್ಗಿದ್ದು, ಕೆ.ಜಿಗೆ 73,000 ರೂ ಆಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,820 ರೂ ಆಗಿದೆ. ಚೆನ್ನೈನಲ್ಲಿ 45,770 ರೂ, ಮುಂಬೈನಲ್ಲಿ 45,650 ರೂಪಾಯಿ ಆಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಮೇ 19ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ...

Infographics: Gold Rates on Major Cities On May 19

ಚಿತ್ರ ವಿನ್ಯಾಸ: ಭರತ್ ಎಚ್. ಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+