ಸ್ಪೇಸ್ ಎಕ್ಸ್ ನ ಶಕ್ತಿಶಾಲಿ ರಾಕೆಟ್: ಚಿತ್ರಸಮೇತ ಮಾಹಿತಿ
ಫ್ಲೊರಿಡಾ, ಫೆಬ್ರವರಿ 07: ಕೋಟ್ಯಾಧಿಪತಿ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಉಡ್ಡಯನ ಮಾಡಿದ ಫಾಲ್ಕನ್ ಹೆವಿ ರಾಕೆಟ್ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂಬ ಕೀರ್ತಿಗೆ ಪಾತ್ರವಾಗಿದೆ.
ಅಮೆರಿಕದ ಫ್ಲೊರಿಡಾದ ಕೇಪ್ ಕ್ಯಾನವೆರಲ್ ನಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಿನ್ನೆ(ಫೆ.06) ಉಡ್ಡಯನಗೊಂಡ ಈ ಮಾಡಲಾಯಿತು. ಸದಾ ಒಂದಿಲ್ಲೊಂದು ವಿಭಿನ್ನ ಕಾರ್ಯಗಳನ್ನು ಮಾಡುವಲ್ಲಿ, ಸವಾಲುಗಳನ್ನು ಸ್ವೀಕರಿಸುವಲ್ಲಿ ಪ್ರಸಿದ್ಧಿ ಪಡೆದ ಟೆಸ್ಲಾ ಸಂಸ್ಥಾಪಕ, ಪ್ರಖ್ಯಾತ ಉದ್ಯಮಿ ಎಲಾನ್ ಮಸ್ಕ್ ಅವರ ಕನಸಿನ ಕೂಸು ಇದಾಗಿದೆ.

ವಿಶ್ವದ ಅತ್ಯಂತ ಬಲಶಾಲಿ ರಾಕೆಟ್ ಎಂಬ ಹೆಗ್ಗಳಿಕೆಯ ಫಾಲ್ಕನ್ ಹೆವಿ, ಭವಿಷ್ಯದಲ್ಲಿ ಮಂಗಳ ಗ್ರಹ ಮತ್ತು ಚಂದ್ರನಲ್ಲಿಗೆ ಮನುಷ್ಯರನ್ನು ಕಳಿಸಲು ನೆರವಾಗಲಿದೆ. ಈ ರಾಕೆಟ್ ಕುರಿತ ಚಿತ್ರ ಸಮೇತ, ಮಹತ್ವದ ಮಾಹಿತಿಗಳು ನಿಮಗಾಗಿ ಇಲ್ಲಿವೆ.












Click it and Unblock the Notifications