
Infographics: ತುಟ್ಟಿಭತ್ಯೆ ಹೆಚ್ಚಳ ನಂತರ ಸರ್ಕಾರಿ ನೌಕರರಿಗೆ ಯಾರಿಗೆ ಎಷ್ಟು ಸಂಬಳ?
ಬೆಂಗಳೂರು, ಅ.10: ರಾಜ್ಯ ಸರ್ಕಾರಿ ನೌಕರರಿಗೆ ಬಸವರಾಜ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ಕೊಟ್ಟಿರುವ ಸುದ್ದಿ ಓದಿರುತ್ತೀತಿ. ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 3.75ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಮೂಲ ವೇತನದ ಶೇಕಡ 27.25 ರಿಂದ ಶೇಕಡ 31ಕ್ಕೆ ಪರಿಷ್ಕರಿಸಲಾಗಿದೆ.
ಕೊವಿಡ್-19 ಪಿಡುಗಿನ ಅವಧಿಯಲ್ಲಿ ಸರ್ಕಾರವು ತುಟ್ಟಿಭತ್ಯೆ ಮತ್ತು ಬೆಲೆ ಏರಿಕೆ ಪರಿಹಾರವನ್ನು ತಡೆಹಿಡಿದಿತ್ತು. ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021ರ ತುಟ್ಟಿಭತ್ಯೆಗಳನ್ನು ಸರ್ಕಾರ ನೌಕರರಿಗೆ ನೀಡಿರಲಿಲ್ಲ.
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಡಿಎ ಮತ್ತು ಡಿಆರ್‌ನ ಮೂರು ಹೆಚ್ಚುವರಿ ಕಂತುಗಳನ್ನು ಸ್ಥಗಿತಗೊಳಿಸಿತು. ಕೊವಿಡ್-19 ಪಿಡುಗಿನ ಅವಧಿಯಲ್ಲಿ ಸರ್ಕಾರವು ತುಟ್ಟಿಭತ್ಯೆ ಮತ್ತು ಬೆಲೆ ಏರಿಕೆ ಪರಿಹಾರವನ್ನು ತಡೆಹಿಡಿದಿತ್ತು.
ರಾಜ್ಯ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಕೊಟ್ಟ ಬೊಮ್ಮಾಯಿ ಸರ್ಕಾರ
ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.
2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆ
ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ಲೆಕ್ಕಾಚಾರ
ಸರ್ಕಾರಿ ನೌಕರರ ಡಿಎ ಪರ್ಸಂಟೇಜ್:
ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76X100.
ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33X100.

ಬೇಸಿಕ್ ಸಂಬಳ 18,000 ರು ಇದ್ದರೆ
* ಹೊಸ ಡಿಎ (34%) 6120 ರು/ಪ್ರತಿ ತಿಂಗಳು
* ಹಾಲಿ ಡಿಎ (31%) 5580 ರು/ಪ್ರತಿ ತಿಂಗಳು
* ತುಟ್ಟಿಭತ್ಯೆ ಏರಿಕೆ ಎಷ್ಟು: 6120- 5580= 540 ರು/ ಪ್ರತಿ ತಿಂಗಳು
* ವಾರ್ಷಿಕ ಲೆಕ್ಕಾಚಾರದಂತೆ 540 ರು X 12= 6,480 ರು.
ಗರಿಷ್ಠ ಬೇಸಿಕ್ ಸಂಬಳ 56,900 ರು ಇದ್ದರೆ
* ಹೊಸ ಡಿಎ (34%) 19,346 ರು/ಪ್ರತಿ ತಿಂಗಳು
* ಹಾಲಿ ಡಿಎ(31%) 17,639 ರು/ಪ್ರತಿ ತಿಂಗಳು
* ತುಟ್ಟಿಭತ್ಯೆ ಏರಿಕೆ ಎಷ್ಟು: 19346-17639= 1,707 ರು/ ಪ್ರತಿ ತಿಂಗಳು
* ವಾರ್ಷಿಕ ಲೆಕ್ಕಾಚಾರದಂತೆ 1,707 ರು X 12= 20,484 ರು.
ಸೂಚನೆ ಇದೆ ಮಾದರಿ ಬಳಸಿ ಕರ್ನಾಟಕ ಸರ್ಕಾರಿ ನೌಕರರ ಸಂಬಳ ಲೆಕ್ಕಾಚಾರ ಹಾಕಬಹುದು. ಹಾಲಿ ಡಿಎ 27.25% ಹಾಗೂ ಹೆಚ್ಚಳವಾದ ಡಿಎ ಶೇ 31 ನಮೂದಿಸಿ ಲೆಕ್ಕ ಹಾಕಬಹುದು.
ಬೇಸಿಕ್ ಸಂಬಳ 17,000 ರು
* ಹೊಸ ಡಿಎ (31%) 5270 ರು/ಪ್ರತಿ ತಿಂಗಳು
* ಹಾಲಿ ಡಿಎ (27. 25%) 4633 ರು/ಪ್ರತಿ ತಿಂಗಳು
ತುಟ್ಟಿಭತ್ಯೆ ಏರಿಕೆ ಎಷ್ಟು: 5270- 4633= 637 ರು/ ಪ್ರತಿ ತಿಂಗಳು
* ವಾರ್ಷಿಕ ಲೆಕ್ಕಾಚಾರದಂತೆ 637 ರು X 12= 8,184 ರು.
*****
ಗರಿಷ್ಠ ಬೇಸಿಕ್ ಸಂಬಳ 99,600 ರು
* ಹೊಸ ಡಿಎ(31%) 30,876 ರು/ಪ್ರತಿ ತಿಂಗಳು
* ಹಾಲಿ ಡಿಎ (27. 25%) 27,141 ರು/ಪ್ರತಿ ತಿಂಗಳು
* ತುಟ್ಟಿಭತ್ಯೆ ಏರಿಕೆ ಎಷ್ಟು: 19346-17639= 3,735ರು/ ಪ್ರತಿ ತಿಂಗಳು
* ವಾರ್ಷಿಕ ಲೆಕ್ಕಾಚಾರದಂತೆ 3,735 ರು X 12= 44,820 ರು.