ಚಿನ್ನದ ಬೆಲೆ ಇನ್ನಷ್ಟು ಹೆಚ್ಚಿದೆ; ಮೇ 20ರ ಬೆಲೆ ಹೀಗಿದೆ...
ನವದೆಹಲಿ, ಮೇ 20: ಭಾರತೀಯ ಮಾರುಕಟ್ಟೆಯಲ್ಲಿ ನಿರಂತರ ಏರಿಕೆ ಹಾದಿಯಲ್ಲಿರುವ ಚಿನ್ನದ ಬೆಲೆ ಮೇ 20ರಂದು ಕೂಡ ಹೆಚ್ಚಳವಾಗಿದೆ. ಸ್ಪಾಟ್ ಚಿನ್ನವು ಔನ್ಸ್ಗೆ 1,873.41 ಡಾಲರ್ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್ಗೆ 27.83 ಡಾಲರ್ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಮೇ 20ರಂದು ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 46,930 ರೂಗೆ ತಲುಪಿದ್ದರೆ, 24 ಕ್ಯಾರೆಟ್ ಚಿನ್ನ 50,830 ರೂ ದಾಖಲಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 45,600 ರೂ ಇದ್ದು, 150 ರೂ ಏರಿಕೆಯಾಗಿದೆ. ಅಪರಂಜಿ 10 ಗ್ರಾಂಗೆ 49,750 ರೂ ಆಗಿದ್ದು, 160 ರೂ ಏರಿಕೆ ದಾಖಲಾಗಿದೆ. ಬೆಳ್ಳಿ ಬೆಲೆಯಲ್ಲಿ ಕೆ.ಜಿಗೆ 700 ರೂ ಇಳಿಕೆಗೊಂಡು, 72,300 ರೂಪಾಯಿ ಆಗಿದೆ.
ಮೇ 19ರಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ?; ಇಲ್ಲಿದೆ ವಿವರ...
ಮೊದಲ ತ್ರೈಮಾಸಿಕದ ಒಟ್ಟು ಜಾಗತಿಕ ಚಿನ್ನದ ಬೇಡಿಕೆ 815.7 ಟನ್ಗಳಷ್ಟಿತ್ತು. ನಂತರ ಚಿನ್ನದ ಬೆಂಬಲಿತ ಇಟಿಎಫ್ಗಳು 177.9 ಟನ್ ಹೊರಹರಿವಿನ ಕಾರಣದಿಂದ ವರ್ಷದಿಂದ ವರ್ಷಕ್ಕೆ ಗಮನಾರ್ಹ ಕುಸಿತ (23%) ಕಂಡಿದೆ.
ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಮೇ 20ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೇಗಿದೆ? ಇಲ್ಲಿದೆ ಚಿತ್ರ ಸಹಿತ ಮಾಹಿತಿ...
ಚಿತ್ರ ವಿನ್ಯಾಸ: ಭರತ್ ಎಚ್. ಸಿ.