ಚಿನ್ನದ ಬೆಲೆ ಹೆಚ್ಚಳ; ಪ್ರಮುಖ ನಗರಗಳಲ್ಲಿ ಜೂನ್ 26ರ ದರ...
ನವದೆಹಲಿ, ಜೂನ್ 26: ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಕಾರಣವಾಗಿ ಜೂನ್ ತಿಂಗಳಿನಲ್ಲಿ ಚಿನ್ನದ ವಹಿವಾಟು ತಗ್ಗಿದೆ. ಹೀಗಾಗಿ ಜೂನ್ ಮಧ್ಯ ಭಾಗದ ನಂತರ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆಯಾಗಿತ್ತು. ಶನಿವಾರ ಕೊಂಚ ಚೇತರಿಕೆ ಕಂಡಿದ್ದು, ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.
ಜೂನ್ 26ರಂದು ಚಿನ್ನದ ಬೆಲೆ ಹೆಚ್ಚಳವಾಗಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100 ರೂ ಏರಿಕೆಯಾಗಿ, 46,250 ರೂ ಆಗಿದೆ. ಅಪರಂಜಿ ಚಿನ್ನ 10 ಗ್ರಾಂಗೆ 50 ರೂ ಏರಿಕೆಯಾಗಿ 50,300 ರೂಗೆ ತಲುಪಿದೆ. ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು, ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ 73,400 ರೂ, ಮುಂಬೈ, ದೆಹಲಿ, ಬೆಂಗಳೂರು 67,900 ರೂ ನಷ್ಟಿದೆ. ಕೋಲ್ಕತ್ತಾ; 67,900 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.34%ರಷ್ಟು ಏರಿಕೆಯಾಗಿ 1,781.29 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.65%ರಷ್ಟು ಏರಿಕೆಯಾಗಿ 26.11 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಜೂನ್ 26ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ...
ಚಿತ್ರ ವಿನ್ಯಾಸ: ಭರತ್ ಎಚ್. ಸಿ.












Click it and Unblock the Notifications