Infographics: ಜುಲೈ 30ರಂದು ಚಿನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ಧಾರಣೆ

ನವದೆಹಲಿ, ಜುಲೈ 30: ದೇಶದ ಹಲವೆಡೆ ಅನ್ ಲಾಕ್ ಜಾರಿಯಲ್ಲಿದ್ದು, ಹಲವೆಡೆ ಕೋವಿಡ್ 19 ನಿರ್ಬಂಧ ಸಡಿಲಗೊಳಿಸಲಾಗುತ್ತಿದ್ದು, ವಹಿವಾಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಜುಲೈ 30ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಇಳಿಕೆಯಾಗಿದ್ದು, ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 48,066ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಹಿಗ್ಗಿ 67,884ರು ನಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.46ರಷ್ಟು ಏರಿಕೆಯಾಗಿ 1,822.98ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.04ರಷ್ಟು ಏರಿಕೆಯಾಗಿ 25.52 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 350 ರು ಏರಿಕೆಯಾಗಿ 42,250 ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 380 ರು ಇಳಿಕೆಯಾಗಿ 49, 370ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಏರಿಕೆಯಾಗಿ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ 73,200ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 68,200ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.

ಕಳೆದ ತ್ರೈಮಾಸಿಕದ ಬೇಡಿಕೆ ವಿವರ:
ಏಪ್ರಿಲ್ ಮತ್ತು ಜೂನ್ ನಡುವೆ, ಗ್ರಾಹಕರ ಚಿನ್ನದ ಖರೀದಿ ನಿಟ್ಟಿನಲ್ಲಿ ಸಾಂಪ್ರದಾಯಿಕ ಸಂಕೇತಗಳು ಸಕಾರಾತ್ಮಕವಾಗಿವೆಚಿಲ್ಲರೆ ಹೂಡಿಕೆದಾರರು ಅತಿಯಾಗಿ ಖರೀದಿಸಿದ ಭೌತಿಕ ಚಿನ್ನದ ಉತ್ಪನ್ನಗಳಲ್ಲಿ ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳು ಪ್ರಮುಖವಾದವು. ಮೂರು ತಿಂಗಳ ಅವಧಿಯಲ್ಲಿ 243.8 ಟನ್‌ ಚಿನ್ನ ಖರೀದಿಸಲಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಸತತ ನಾಲ್ಕನೇ ತ್ರೈಮಾಸಿಕ ಲಾಭ ಕಂಡಿದೆ. ಈ ನಡುವೆ ಗ್ರಾಹಕರು ಒಟ್ಟು 390.7ಟನ್‌ ತೂಕದ ಚಿನ್ನದ ಆಭರಣಗಳನ್ನು 390 ಖರೀದಿಸಿದ್ದಾರೆ . ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.60ರಷ್ಟು ಹೆಚ್ಚಾಗಿದೆ.

Gold And Silver Rate In Indias Major Cities On July 30, 2021

ಗ್ರಾಹಕರು ಮತ್ತು ಚಿಲ್ಲರೆ ಹೂಡಿಕೆದಾರರು ಮರು ಖರೀದಿ ಮಾಡುತ್ತಿದ್ದರೆ, ಸಾಂಸ್ಥಿಕ ಹೂಡಿಕೆದಾರರು ಕಡಿಮೆ ಸ್ಥಿರತೆ ಪ್ರದರ್ಶಿಸಿದರು. ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ವಿನಿಮಯ ವ್ಯಾಪಾರ ವಹಿವಾಟು ನಿಧಿಗಳು (ಇಟಿಎಫ್‌ಗಳು) ವಲಯದಲ್ಲಿ ಕೇವಲ 40.7 ಟನ್‌ನ ಸಾಧಾರಣ ನಿವ್ವಳ ಒಳಹರಿವು ಇತ್ತು . ಭೌತಿಕ ಚಿನ್ನದ ಬೆಂಬಲದ ಹಣಕಾಸು ವ್ಯವಹಾರಗಳತ್ತ ಸಾಮಾನ್ಯವಾಗಿ ಸಾಂಸ್ಥಿಕ ಖರೀದಿದಾರರು ಆಕರ್ಷಿತರಾಗುತ್ತಾರೆ. 2014 ರ ನಂತರ ಮೊದಲ ಬಾರಿಗೆ 2021ರ ಮೊದಲ ಆರು ತಿಂಗಳಲ್ಲಿ ಅತಿ ಹೆಚ್ಚಿನ ನಿವ್ವಳ ಹೊರಹರಿವು ದಾಖಲಾಗಿದೆ. ಆರ್‌ಬಿಐಗಳು ತ್ರೈಮಾಸಿಕದಲ್ಲಿ ನಿರಂತರವಾಗಿ ಚಿನ್ನ ಖರೀದಿ ನಡೆಸಿದ್ದವು. ಜಾಗತಿಕ ಚಿನ್ನದ ಮೀಸಲು ಎರಡನೇ ತ್ರೈಮಾಸಿಕದಲ್ಲಿ 199.9 ಟನ್‌ಗೆ ಏರಿಕೆಯಾಯಿತು.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಜುಲೈ 30ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.. ಚಿತ್ರ ವಿನ್ಯಾಸ: ಭರತ್ ಎಚ್.ಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+