Infographics: ನ.27ರಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?

ನವದೆಹಲಿ, ನವೆಂಬರ್ 27: ದೇಶದ ಹಲವೆಡೆ ಕೋವಿಡ್ 19 ನಿರ್ಬಂಧ, ಕರ್ಫ್ಯೂ ಸಡಿಲಗೊಂಡಿದೆ. ದೀಪಾವಳಿ ಹಬ್ಬದ ಋತುವಿನಲ್ಲಿ ಚಿನಿವಾರ ಪೇಟೆಯಲ್ಲಿ ಉತ್ತಮ ವಹಿವಾಟು ಕಂಡರೂ ಹಳದಿ ಲೋಹ ನಿರೀಕ್ಷಿತ ಏರಿಕೆ ಕಂಡಿಲ್ಲ. ನವೆಂಬರ್ 27ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ. ದೇಶದ ಪ್ರಮುಖ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.

ಎಂಸಿಎಕ್ಸ್ ನಲ್ಲಿ ನವೆಂಬರ್ 27ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,640.00ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 62119ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ -21ಇಳಿಕೆಯಾಗಿ 1,791 ಯುಎಸ್ ಡಾಲರ್‌ನಷ್ಟಿದೆ. ಇದರ ಮಧ್ಯೆ ದೇಶಾದ್ಯಂತ ಬದಲಾಗುವ ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಚಾರ್ಜ್‌ಗಳಿಂದಾಗಿ ವಿವಿಧ ಮೆಟ್ರೋ ನಗರಗಳು ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಳಿತವನ್ನು ಕಂಡಿವೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,050ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,150 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,950ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,950ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,010ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,290ರೂ. ಇದೆ. ಚೆನ್ನೈನಲ್ಲಿ45,240ರೂ. ಹಾಗೂ ಅಪರಂಜಿ49,350ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 47,210ಹಾಗೂ49,910ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಕೊಯಮತ್ತೂರು, ಮಧುರೈ, ವಿಜಯವಾಡ, ಪಾಟ್ನಾ, ನಾಗಪುರ, ಚಂಡೀಗಢ, ನಾಸಿಕ್, ಭುವನೇಶ್ವರ ಮುಂತಾದ ನಗರಗಳಲ್ಲಿ ನವೆಂಬರ್ 27ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏರಿಳಿತ ಪ್ರಮುಖ ಕಾರಣ, ಕಳೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ 47,640ರು ನಂತೆ ವಹಿವಾಟು ಆರಂಭಿಸಿ ಹಳದಿ ಲೋಹ ದಿನದ ಅಂತ್ಯಕ್ಕೆ ಏರಿಕೆ ಕಂಡಿದೆ. ಬೆಳ್ಳಿ ಆರಂಭದಲ್ಲಿ 62,119ರು ನಂತೆ ಆರಂಭವಾಗಿ ದಿನದ ಅಂತ್ಯಕ್ಕೆ ಏರಿಕೆಯಾಗಿದೆ. ಹಬ್ಬದ ಋತುವಿನಲ್ಲಿ ಹೆಚ್ಚಿನ ಹೂಡಿಕೆ, ವ್ಯವಹಾರ ನೀರಿಕ್ಷಿತ ಮಟ್ಟ ಮುಟ್ಟಿಲ್ಲ.

ಬೆಳ್ಳಿ ಮತ್ತು ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವೇನು?

ಬೆಳ್ಳಿ ಮತ್ತು ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವೇನು?

ಜಾಗತಿಕ ರಾಜಕೀಯ ವಿದ್ಯಮಾನ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಕೊರೊನಾ ಲಾಕ್ ಡೌನ್ ತೆರವು, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ, ಯುರೋಪಿಯನ್ ಯೂನಿಯನ್ ಕೊರೊನಾ ನಿರ್ಬಂಧ, ಚೀನಾ-ಭಾರತ ಗಡಿ ವಿವಾದ, ಕೊರೊನಾ ಲಸಿಕೆ ಅಭಿಯಾನ ಪ್ರಗತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿವೆ ಎಂದು ಕೋಟಕ್ ಸೆಕ್ಯುರಿಟೀಸ್ ಉಪಾಧ್ಯಕ್ಷ ರವೀಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?

ಸಿಲಿಕಾನ್ ಸಿಟಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 45.050ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 49,150 ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಕೊಂಚ ಇಳಿಕೆಯಾಗಿ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ 67,200ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 62,200ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಇಲ್ಲಿದೆ.

ಚಿನ್ನದ ಬೆಲೆ ನಿರ್ಧಾರ ಆಗುವುದು ಹೇಗೆ?

ಚಿನ್ನದ ಬೆಲೆ ನಿರ್ಧಾರ ಆಗುವುದು ಹೇಗೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+