ಕೊವಿಡ್ 19: ಮಾರ್ಚ್ 13ರಂದು ಯಾವ ದೇಶದಲ್ಲಿ ಎಷ್ಟು ಮಂದಿ ಚೇತರಿಕೆ?

ಬೆಂಗಳೂರು, ಮಾರ್ಚ್ 13: ವಿಶ್ವದಲ್ಲಿರುವ ಒಟ್ಟು ಕೊರೊನಾ ಸೋಂಕಿತರೆಷ್ಟು, ಸೋಂಕಿನಿಂದ ಚೇತರಿಸಿಕೊಂಡವರೆಷ್ಟು, ಸಕ್ರಿಯ ಪ್ರಕರಣಗಳೆಷ್ಟು ಎನ್ನುವ ಮಾಹಿತಿ ಇಲ್ಲಿದೆ.

ವಿಶ್ವಾದ್ಯಂತ ಒಟ್ಟು 119,703,834ಕ್ಕೂ ಅಧಿಕ ಪ್ರಕರಣಗಳಿದ್ದು, 96,329, 219 ಮಂದಿ ಗುಣಮುಖರಾಗಿದ್ದಾರೆ. ಜಾಗತಿಕವಾಗಿ 98,982,753 ಪ್ರಕರಣಗಳು ಮುಕ್ತಾಯಗೊಂಡಿದೆ.
ಭಾರತದಲ್ಲಿ ದಿನಕಳೆದಂತೆ ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದು, ದೇಶದಲ್ಲಿಂದು ಬರೋಬ್ಬರಿ 24,882 ಹೊಸ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

24,882 ಹೊಸ ಪ್ರಕರಣಗಳೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,13,33,728ಕ್ಕೆ ಏರಿಕೆಯಾಗಿದೆ. ಒಂದೇ ದಿನ 140 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,58,446ಕ್ಕೆ ಏರಿಕೆಯಾಗಿದೆ.

ಈ ನಡುವೆ ಒಟ್ಟಾರೆ 1,13,33,728 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 19,957 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,09,73,260ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 2,02,022 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಇನ್ನು ಭಾರತದಲ್ಲಿ ಒಂದೇ ದಿನ 8,40,635 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 22,58,39,273 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ವಿವರ (ಮಾರ್ಚ್ 12ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ವಿಶ್ವಾದ್ಯಂತ ಇರುವ ಕೋವಿಡ್ 19 ಪ್ರಕರಣಗಳ ಸಂಖ್ಯೆ

ವಿಶ್ವಾದ್ಯಂತ ಇರುವ ಕೋವಿಡ್ 19 ಪ್ರಕರಣಗಳ ಸಂಖ್ಯೆ

ಮಾರ್ಚ್ 13ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 119,703,834ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 2,653,534ಕ್ಕೇರಿದೆ. ಒಟ್ಟಾರೆ, 96,329,219 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 20,721,081ಸಕ್ರಿಯ ಪ್ರಕರಣಗಳಿವೆ. 98,982,753ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಯುಎಸ್ಎ: 29,993,423ಪ್ರಕರಣಗಳು
ಭಾರತ: 11,333,728
ಬ್ರೆಜಿಲ್: 11,368,316
ರಷ್ಯಾ: 4,380,525
ಯುಕೆ: 4,248,286
ಫ್ರಾನ್ಸ್: 4,015,560
ಸ್ಪೇನ್: 3,183,704
ಇಟಲಿ: 3,175,807
ಟರ್ಕಿ: 2,850,930
ಜರ್ಮನಿ: 2,559,296

ಈ 10 ದೇಶಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವವರು ಹೆಚ್ಚು

ಈ 10 ದೇಶಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವವರು ಹೆಚ್ಚು

ಯುಎಸ್ಎ: ಮೃತರ ಸಂಖ್ಯೆ 545,544
ಬ್ರೆಜಿಲ್: 275,276
ಮೆಕ್ಸಿಕೋ: 193,851
ಭಾರತ:158,483
ಯುಕೆ: 125,343
ಇಟಲಿ: 101,564
ಫ್ರಾನ್ಸ್: 90,146
ಜರ್ಮನಿ: 73,790
ಸ್ಪೇನ್: 72,258
ಇರಾನ್: 61,069

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಯುಎಸ್ಎ : ಗುಣಮುಖರಾದವರ ಸಂಖ್ಯೆ: 22,031,220
ಭಾರತ: 10,973,260
ಬ್ರೆಜಿಲ್: 10,000,980
ರಷ್ಯಾ: 3,985,897
ಯುಕೆ: 3,424,092
ಸ್ಪೇನ್: 2,857,714
ಟರ್ಕಿ: 2,670,273
ಇಟಲಿ: 2,564,926
ಜರ್ಮನಿ: 2,352,600
ಕೊಲಂಬಿಯಾ: 2,195,569

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+