ಕೋವಿಡ್ ಟಾಪ್ 10: ಸೋಂಕು, ಚೇತರಿಕೆ, ಸಾವು ನೋವು ಅಂಕಿ ಅಂಶ

ಬೆಂಗಳೂರು, ಆಗಸ್ಟ್ 09: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 203,678,201ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 4,311,989ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 182,993,877 ಪ್ರಕರಣಗಳು ಮುಕ್ತಾಯಗೊಂಡಿವೆ.

ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ದೇಶಾದ್ಯಂತ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ ಖಾತ್ರಿಪಡಿಸುವ ಮೂಲಕ, ಅವುಗಳು ಆಂದೋಲನವನ್ನು ಸಮರ್ಪಕವಾಗಿ ಆಯೋಜಿಸಲು ಪೂರಕವಾಗಿ ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಖಚಿತಪಡಿಸುವ ಮೂಲಕ ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಅಭಿಯಾನಕ್ಕೆ ವೇಗ ನೀಡಿದೆ.

ಭಾರತದಲ್ಲಿ ಕೋವಿಡ್ - 19 ಲಸಿಕೆ ಪ್ರಮಾಣ 50.86 ಕೋಟಿ ದಾಟಿದ್ದು, ತಾತ್ಕಾಲಿಕ ವರದಿ ಪ್ರಕಾರ 58,79,068 ಅವಧಿಗಳಲ್ಲಿ 50,86,64,759 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 16,11,590 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ.

ಒಂದು ಕಡೆ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದ್ದು, ಮತ್ತೊಂದೆಡೆ ವಾರದ ಪಾಸಿಟಿವಿಟಿ ದರ ಪ್ರಸ್ತುತ 2.35% ರಷ್ಟಿದೆ ಮತ್ತು ದೈನಂದಿನ ಪಾಸಿಟಿವಿಟಿ ದರ ಸತತ 14 ದಿನಗಳಿಂದ 3% ಕ್ಕೂ ಕಡಿಮೆ ಇದೆ ಮತ್ತು 63 ದಿನಗಳಿಂದ 5% ಕ್ಕೂ ಕಡಿಮೆ ದಾಖಲಾಗುತ್ತಿದೆ.

ದೇಶದ ಪರೀಕ್ಷೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 13,71,871 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಈ ವರೆಗೆ 48 ಕೋಟಿಗೂ ಹೆಚ್ಚು (48,17,67,232) ಪರೀಕ್ಷೆಗಳನ್ನು ನಡೆಸಲಾಗಿದೆ.

ಭಾರತದಲ್ಲಿ ಪ್ರಸ್ತುತ 4,02,188 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಮತ್ತು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು 1.26% ರಷ್ಟಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಆಗಸ್ಟ್ 09ರಂತೆ) ಇಲ್ಲಿದೆ.

ಭಾರತದಲ್ಲಿ 24 ಗಂಟೆಗಳಲ್ಲಿ 39,825 ರೋಗಿಗಳು ಚೇತರಿಕೆ

ಭಾರತದಲ್ಲಿ 24 ಗಂಟೆಗಳಲ್ಲಿ 39,825 ರೋಗಿಗಳು ಚೇತರಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 36,035ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 31,981,869ಕ್ಕೇರಿದೆ. ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 428,577ಕ್ಕೆ ಏರಿಕೆಯಾಗಿದೆ, 31,148,536ಮಂದಿ ಚೇತರಿಕೆ ಹೊಂದಿದ್ದಾರೆ, ಕಳೆದ 24 ತಾಸುಗಳಲ್ಲೇ 39,825ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರ ಒಟ್ಟಾರೆ 97.36%ಗೆ ಸುಧಾರಣೆ ಕಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ವಿಶ್ವದೆಲ್ಲೆಡೆ ಕೊವಿಡ್19 ಪ್ರಕರಣಗಳು

ವಿಶ್ವದೆಲ್ಲೆಡೆ ಕೊವಿಡ್19 ಪ್ರಕರಣಗಳು

ಆಗಸ್ಟ್ 09ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 203,678,201ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 4,311,989ಕ್ಕೇರಿದೆ. ಒಟ್ಟಾರೆ, 182,993,877ಮಂದಿ ಗುಣಮುಖರಾಗಿದ್ದಾರೆ. ಒಟ್ಟು 16,372,335 ಸಕ್ರಿಯ ಪಾಸಿಟಿವ್ 98,685 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 187,305,866 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಯುಎಸ್ಎ: 36,543,924ಪ್ರಕರಣಗಳು
ಭಾರತ: 31,976,785
ಬ್ರೆಜಿಲ್: 20,165,672
ರಷ್ಯಾ: 6,469,910
ಫ್ರಾನ್ಸ್: 6,094,243
ಯುಕೆ: 6,014,023
ಟರ್ಕಿ: 5,918,540
ಅರ್ಜೆಂಟೀನಾ: 5,018,895
ಕೊಲಂಬಿಯಾ: 4,838,984
ಸ್ಪೇನ್ : 4,588,132

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 633,120
ಬ್ರೆಜಿಲ್: 563,470
ಭಾರತ: 428,504
ಮೆಕ್ಸಿಕೋ: 244,420
ರಷ್ಯಾ: 165,650
ಯುಕೆ: 130,357
ಇಟಲಿ: 128,220
ಕೊಲಂಬಿಯಾ: 122,458
ಫ್ರಾನ್ಸ್: 112,220
ಅರ್ಜೆಂಟೀನಾ: 107,459

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಭಾರತ: ಗುಣಮುಖರಾದವರ ಸಂಖ್ಯೆ: 31,140,246
ಯುಎಸ್ಎ: 29,859,073
ಬ್ರೆಜಿಲ್: 18,907,243
ರಷ್ಯಾ: 5,769,981
ಫ್ರಾನ್ಸ್: 5,759,661
ಟರ್ಕಿ: 5,504,355
ಅರ್ಜೆಂಟೀನಾ: 4,669,761
ಯುಕೆ: 4,667,785
ಕೊಲಂಬಿಯಾ: 4,649,453
ಇಟಲಿ: 4,155,931
(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+