ಚಿತ್ರವರದಿ: ಬ್ರೆಜಿಲ್ 2, ಭಾರತದಲ್ಲಿ 1 ಮಿಲಿಯನ್ ಸೋಂಕಿತರು

ಬೆಂಗಳೂರು, ಜುಲೈ 19: ಜಾಗತಿಕ ಮಹಾಮಾರಿ ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಈ ದಿನ ಮೆಕ್ಸಿಕೋವನ್ನು ರಷ್ಯಾ ಮೀರಿಸಿ ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾದ ದೇಶ ಎನಿಸಿಕೊಂಡಿದೆ.

ಮೆಕ್ಸಿಕೋದಲ್ಲಿ ಒಂದೇ ದಿನ 579ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಸಾವಿನ ಸಂಖ್ಯೆ ಪ್ರಮಾಣ ಈ ದಿನ ಕೊಂಚ ತಗ್ಗಿದೆ. ಆದರೆ, ಹೊಸ ಪ್ರಕರಣಗಳ ಸಂಖ್ಯೆ ಕಳೆದ ವಾರಕ್ಕೆ ಹೋಲಿಸಿದರೆ, ಈ ದಿನ 2 ಸಾವಿರಕ್ಕಿಂತ ಕಡಿಮೆಯಿದೆ.

ಜುಲೈ 19ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 14,447,054ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 605,360ಕ್ಕೇರಿದೆ. ಒಟ್ಟಾರೆ, 8,631,780ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,209,914 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,104 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

ಮೆಕ್ಸಿಕೋದಲ್ಲಿ ಒಂದೇ ದಿನ 7,615 ಪ್ರಕರಣ ಕಾಣಿಸಿಕೊಂಡು ಟಾಪ್ 10 ಸೋಂಕಿತ ದೇಶಗಳ ಪಟ್ಟಿಯಲ್ಲಿ7ನೇ ಸ್ಥಾನದಲ್ಲೇ ಉಳಿದಿದೆ. ಟಾಪ್ 8ರಲ್ಲಿದ್ದ ದಕ್ಷಿಣ ಆಫ್ರಿಕಾವಿದೆ 5ನೇ ಸ್ಥಾನಕ್ಕೇರಿದೆ. ಇಟಲಿ 14ನೇ ಸ್ಥಾನಕ್ಕೆ ಕುಸಿದಿದೆ. ಟಾಪ್ 10ನೇ ಸ್ಥಾನದಲ್ಲಿ ಯುಕೆ ನಂತರ ಸ್ಥಾನದಲ್ಲಿ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾ, ಇಟಲಿ, ಟರ್ಕಿ, ಬಾಂಗ್ಲಾದೇಶ, ಜರ್ಮನಿ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.

ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (12,342), ಬೆಲ್ಜಿಯಂ (9,800), ಜರ್ಮನಿ (9,162), ಕೆನಡಾ (8,848), ಚಿಲಿ (8,445), ಕೊಲಂಬಿಯಾ(6,516), ನೆದರ್ಲೆಂಡ್ಸ್(6,136), ಸ್ವೀಡನ್ (5,619), ಪಾಕಿಸ್ತಾನ(5,568) ಟರ್ಕಿ(5,475), ಈಕ್ವೆಡಾರ್( 5282) ಕಾಣಿಸಿಕೊಂಡಿವೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

COVID-19 Infographics: Countries With Most Number of Infected and Deaths July 19

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 3,833,716ಪ್ರಕರಣಗಳು
ಬ್ರೆಜಿಲ್: 2,075,246
ಭಾರತ: 1,078,782
ರಷ್ಯಾ: 771,546
ದಕ್ಷಿಣ ಆಫ್ರಿಕಾ: 350,879
ಪೆರು: 349,500
ಚಿಲಿ: 328,846
ಮೆಕ್ಸಿಕೋ: 338,913
ಸ್ಪೇನ್: 307,335
ಯುಕೆ: 294,066
***

COVID-19 Infographics: Countries With Most Number of Infected and Deaths July 19
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 142,881
ಬ್ರೆಜಿಲ್: 78,817
ಯುಕೆ: 45,273
ಮೆಕ್ಸಿಕೋ: 38,888
ಇಟಲಿ: 35,042
ಫ್ರಾನ್ಸ್: 30,152
ಸ್ಪೇನ್: 28,420
ಭಾರತ: 26,838
ಇರಾನ್: 13,979
ಪೆರು: 12,998

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+