ಕೊವಿಡ್ 19 : ಮೆಕ್ಸಿಕೋ, ರಷ್ಯಾ, ಭಾರತದಲ್ಲಿ ಹೆಚ್ಚು ಆತಂಕಕಾರಿ

ಬೆಂಗಳೂರು, ಜುಲೈ 14: ಜಾಗತಿಕ ಮಹಾಮಾರಿ ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಈ ದಿನ ರಷ್ಯಾವನ್ನು ಮೀರಿಸಿ ಮೆಕ್ಸಿಕೋ ಮತ್ತೊಮ್ಮೆ ಒಂದು ದಿನದಲ್ಲಿ ಸಾವು ಹಾಗೂ ಸೋಂಕಿತ ಪ್ರಕರಣ ದಾಖಲಾದ ದೇಶ ಎನಿಸಿಕೊಂಡಿದೆ.

Recommended Video

      Facebook ತ್ಯಜಿಸಿ ಇಲ್ಲ ಸೇನೆಯಿಂದ ಹೊರನಡೆಯಿರಿ | Oneindia Kannada

      ಮೆಕ್ಸಿಕೋದಲ್ಲಿ ಒಂದೇ ದಿನ 836ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಸಾವಿನ ಸಂಖ್ಯೆ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಆದರೆ, ಹೊಸ ಪ್ರಕರಣಗಳ ಸಂಖ್ಯೆ ಕಳೆದ ವಾರದಲ್ಲಿ ಸರಾಸರಿಯಂತೆ 4 ಸಾವಿರದಷ್ಟು ದಾಖಲಾಗಿದೆ.

      ಜುಲೈ 15ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 13,495,260 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 582,125ಕ್ಕೇರಿದೆ. ಒಟ್ಟಾರೆ, 7,880,411 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,032,724 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 59,572 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

      ಮೆಕ್ಸಿಕೋದಲ್ಲಿ ಒಂದೇ ದಿನ 7,051 ಪ್ರಕರಣ ಕಾಣಿಸಿಕೊಂಡು ಟಾಪ್ 10 ಸೋಂಕಿತ ದೇಶಗಳ ಪಟ್ಟಿಯಲ್ಲಿ7ನೇ ಸ್ಥಾನದಲ್ಲೇ ಉಳಿದಿದೆ. ಟಾಪ್ 10ರಲ್ಲಿದ್ದ ದಕ್ಷಿಣ ಆಫ್ರಿಕಾವಿದೆ 9ನೇ ಸ್ಥಾನಕ್ಕೇರಿದೆ. ಇಟಲಿ 13ನೇ ಸ್ಥಾನಕ್ಕೆ ಕುಸಿದಿದೆ. ಟಾಪ್ 10ನೇ ಸ್ಥಾನದಲ್ಲಿ ಯುಕೆ ನಂತರ ಸ್ಥಾನದಲ್ಲಿ ಇರಾನ್, ಪಾಕಿಸ್ತಾನ, ಇಟಲಿ, ಸೌದಿ ಅರೇಬಿಯಾ, ಟರ್ಕಿ, ಜರ್ಮನಿ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.

      ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (11,770), ಬೆಲ್ಜಿಯಂ (9,788), ಜರ್ಮನಿ (9,144), ಕೆನಡಾ (8,798), ಚಿಲಿ (7,069), ನೆದರ್ಲೆಂಡ್ಸ್(6,135), ಸ್ವೀಡನ್ (5,545), ಟರ್ಕಿ(5,402) ಕಾಣಿಸಿಕೊಂಡಿವೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

      COVID-19 Infographics: Countries With Most Number of Infected and Deaths July 15

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 3,547,413ಪ್ರಕರಣಗಳು
      ಬ್ರೆಜಿಲ್: 1,933,655
      ಭಾರತ: 941,630
      ರಷ್ಯಾ: 746,369
      ಪೆರು: 333,867
      ಚಿಲಿ: 319,493
      ಮೆಕ್ಸಿಕೋ: 311,486
      ಸ್ಪೇನ್: 303,699
      ದಕ್ಷಿಣ ಆಫ್ರಿಕಾ: 298,292
      ಯುಕೆ: 291,373

      COVID-19 Infographics: Countries With Most Number of Infected and Deaths July 15


      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 139,174
      ಬ್ರೆಜಿಲ್: 74,336
      ಯುಕೆ: 44,968
      ಮೆಕ್ಸಿಕೋ: 36,327
      ಇಟಲಿ: 34,984
      ಫ್ರಾನ್ಸ್: 30,029
      ಸ್ಪೇನ್: 28,409
      ಭಾರತ: 24,371
      ಇರಾನ್: 13,410
      ಪೆರು: 12,229

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+