ಮೇ 04 ಅಂಕಿ-ಅಂಶ: ವಿಶ್ವದ ಯಾವ ದೇಶದಲ್ಲಿ ಎಷ್ಟು ಕೊವಿಡ್ ಸೋಂಕಿತರು ಗುಣಮುಖ?

ನವದೆಹಲಿ, ಮೇ 04: ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮತ್ತೆ ಶುರುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಜಗತ್ತಿನಲ್ಲಿ ವರದಿ ಆಗುತ್ತಿರುವ ಕೊವಿಡ್-19 ಪ್ರಕರಣಗಳು, ಒಟ್ಟು ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖರಾದವರ ಅಂಕಿ ಅಂಶಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ವಿಶ್ವದೆಲ್ಲೆಡೆ ಒಟ್ಟು 514,760,016ಕ್ಕೂ ಅಧಿಕ ಸೋಂಕಿತ ಪ್ರಕರಣಗಳು ವರದಿಯಾಗಿದ್ದು 6,266,165 ಮಂದಿ ಸೋಂಕಿತರು ಸಾವಿನ ಮನೆ ಸೇರಿದ್ದಾರೆ. ಜಾಗತಿಕವಾಗಿ ಈವರೆಗೆ 469,488,566 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಚಿತ್ರಣ ಬದಲಾಗಿದೆ. ಒಂದು ದಿನದಲ್ಲಿ ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆಯು ಒಂದು ಸಾವಿರದ ಆಸುಪಾಸಿಗೆ ಬಂದು ನಿಂತಿದೆ. ಇದರ ಮಧ್ಯೆ ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಮೇ 04ರ ಪ್ರಕಾರ) ಇಲ್ಲಿದೆ.

ದೇಶದಲ್ಲಿ ಒಂದೇ ದಿನ 3,235 ಮಂದಿಗೆ ಕೋವಿಡ್

ದೇಶದಲ್ಲಿ ಒಂದೇ ದಿನ 3,235 ಮಂದಿಗೆ ಕೋವಿಡ್

ಭಾರತದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಎರಡು ಸಾವಿರದ ಗಡಿ ದಾಟುತ್ತಿದೆ. ಕಳೆದ 24 ಗಂಟೆಗಳಲ್ಲಿ 3,235 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 31 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 2,802 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,088,401ಕ್ಕೆ ಏರಿಕೆಯಾಗಿದೆ. ಈ ಪೈಕಿ 42,544,689 ಸೋಂಕಿತರು ಗುಣಮುಖರಾಗಿದ್ದರೆ, 523,920 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 19,792 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಲ್ಲಿ ಹೇಗಿದೆ ಕೋವಿಡ್-19 ಲೆಕ್ಕಾಚಾರ?

ವಿಶ್ವದಲ್ಲಿ ಹೇಗಿದೆ ಕೋವಿಡ್-19 ಲೆಕ್ಕಾಚಾರ?

ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 514,760,016 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,266,165 ಮಂದಿ ಪ್ರಾಣ ಬಿಟ್ಟಿದ್ದಾರೆ. 469,488,566 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 39,005,285 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಇದರ ಹೊರತಾಗಿ ಅತಿಹೆಚ್ಚು ಕೊವಿಡ್-19 ಬಾಧಿತ, ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ, ಅತಿಹೆಚ್ಚು ಗುಣಮುಖರ ಸಂಖ್ಯೆಯನ್ನು ದಾಖಲಿಸಿರುವ ಟಾಪ್-10 ರಾಷ್ಟ್ರಗಳ ವಿವರವನ್ನು ಮುಂದೆ ನೋಡೋಣ.

ಕೊವಿಡ್-19 ಬಾಧಿತ ಟಾಪ್ 10 ದೇಶಗಳು

ಕೊವಿಡ್-19 ಬಾಧಿತ ಟಾಪ್ 10 ದೇಶಗಳು

ಯುಎಸ್ಎ: 8,32,40,101

ಭಾರತ: 4,30,88,401

ಬ್ರೆಜಿಲ್: 3,04,82,429

ಫ್ರಾನ್ಸ್: 2,87,57,765

ಜರ್ಮನಿ: 2,49,49,403

ಯುಕೆ: 2,20,73,858

ರಷ್ಯಾ: 1,82,06,167

ದಕ್ಷಿಣ ಕೊರಿಯಾ: 1,73,95,791

ಇಟಲಿ: 1,65,86,268

ಟರ್ಕಿ: 1,50,36,110

ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ ಟಾಪ್-19 ರಾಷ್ಟ್ರಗಳು

ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ ಟಾಪ್-19 ರಾಷ್ಟ್ರಗಳು

ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:

ಯುಎಸ್ಎ: 10,21,581

ಬ್ರೆಜಿಲ್: 6,63,765

ಭಾರತ: 5,23,920

ರಷ್ಯಾ: 3,76,421

ಮೆಕ್ಸಿಕೋ: 3,24,350

ಪೆರು: 2,12,877

ಯುಕೆ: 1,75,319

ಇಟಲಿ: 1,63,889

ಇಂಡೋನೇಷಿಯಾ: 1,56,305

ಫ್ರಾನ್ಸ್: 1,46,262

ಅತಿಹೆಚ್ಚು ಗುಣಮುಖ ಸಂಖ್ಯೆಯನ್ನು ಹೊಂದಿರುವ ದೇಶಗಳು

ಅತಿಹೆಚ್ಚು ಗುಣಮುಖ ಸಂಖ್ಯೆಯನ್ನು ಹೊಂದಿರುವ ದೇಶಗಳು

ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಗುಣಮುಖರಾದವರನ್ನು ಹೊಂದಿರುವ ಟಾಪ್ 10 ದೇಶ:

ಯುಎಸ್ಎ: 8,07,95,416

ಭಾರತ: 4,25,44,689

ಬ್ರೆಜಿಲ್: 2,95,85,304

ಫ್ರಾನ್ಸ್: 2,71,63,793

ಜರ್ಮನಿ: 2,28,41,300

ಯುಕೆ: 2,13,57,447

ರಷ್ಯಾ: 1,75,69,936

ಟರ್ಕಿ: 1,49,32,844

ಅರ್ಜೆಂಟೀನಾ: 88,95,999

ಇರಾನ್: 69,92,001

(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+