Infographics: ಜುಲೈ 28ರಂದು ಜಗತ್ತಿನಲ್ಲಿ ಕೊರೊನಾ ವೈರಸ್ ಅಂಕಿ-ಅಂಶ

ನವದೆಹಲಿ, ಜುಲೈ 28: ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಾವಳಿ ಮತ್ತೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಜಗತ್ತಿನಲ್ಲಿ ವರದಿ ಆಗುತ್ತಿರುವ ಕೊವಿಡ್-19 ಪ್ರಕರಣಗಳು, ಒಟ್ಟು ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖರಾದವರ ಅಂಕಿ ಅಂಶಗಳು ಹೀಗಿವೆ.

ವಿಶ್ವದೆಲ್ಲೆಡೆ ಒಟ್ಟು 578,881,925ಕ್ಕೂ ಅಧಿಕ ಸೋಂಕಿತ ಪ್ರಕರಣಗಳು ವರದಿಯಾಗಿದ್ದು 6,412,646 ಮಂದಿ ಸೋಂಕಿತರು ಸಾವಿನ ಮನೆ ಸೇರಿದ್ದಾರೆ. ಜಾಗತಿಕವಾಗಿ ಈವರೆಗೆ 548,840,977 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಾಗತಿಕ ಅಂಕಿ-ಅಂಶಗಳು ತಿಳಿಸಿವೆ.

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಚಿತ್ರಣ ಬದಲಾಗಿದೆ. ಒಂದು ದಿನದಲ್ಲಿ ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆಯು 20 ಸಾವಿರದ ಗಡಿ ದಾಟಿದೆ. ಇದರ ಮಧ್ಯೆ ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾ ವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಜುಲೈ 28ರ ಪ್ರಕಾರ) ಇಲ್ಲಿದೆ.

ದೇಶದಲ್ಲಿ ಒಂದೇ ದಿನ 18,313 ಮಂದಿಗೆ ಕೊವಿಡ್

ದೇಶದಲ್ಲಿ ಒಂದೇ ದಿನ 18,313 ಮಂದಿಗೆ ಕೊವಿಡ್

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20557 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇದೇ ಅವಧಿಯಲ್ಲಿ 44 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 19,216 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 43,959,321ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ, ಇದುವರೆಗೂ 43,286,787 ಸೋಂಕಿತರು ಗುಣಮುಖರಾಗಿದ್ದು, 526,211 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 146,323ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಪಾಸಿಟಿವಿಟಿ ದರದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 3,96,783 ಮಂದಿಗೆ ಕೋವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ. ದೇಶದಲ್ಲಿ ಇದುವರೆಗೂ 87,40,08,037 ಜನರಿಗೆ ಕೊರೊನಾ ವೈರಸ್ ಸೋಂಕಿತ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ

ವಿಶ್ವದಲ್ಲಿ ಹೇಗಿದೆ ಕೊವಿಡ್-19 ಲೆಕ್ಕಾಚಾರ?

ವಿಶ್ವದಲ್ಲಿ ಹೇಗಿದೆ ಕೊವಿಡ್-19 ಲೆಕ್ಕಾಚಾರ?

ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 578,881,925 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,412,646 ಮಂದಿ ಪ್ರಾಣ ಬಿಟ್ಟಿದ್ದಾರೆ. 548,840,977 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 23,628,302 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಇದರ ಹೊರತಾಗಿ ಅತಿಹೆಚ್ಚು ಕೊವಿಡ್-19 ಬಾಧಿತ, ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ, ಅತಿಹೆಚ್ಚು ಗುಣಮುಖರ ಸಂಖ್ಯೆಯನ್ನು ದಾಖಲಿಸಿರುವ ಟಾಪ್-10 ರಾಷ್ಟ್ರಗಳ ವಿವರವನ್ನು ಮುಂದೆ ನೋಡೋಣ.

ಕೊವಿಡ್-19 ಬಾಧಿತ ಟಾಪ್ 10 ದೇಶಗಳು

ಕೊವಿಡ್-19 ಬಾಧಿತ ಟಾಪ್ 10 ದೇಶಗಳು

ಯುಎಸ್ಎ: 9,27,61,865

ಭಾರತ: 4,39,59,321

ಬ್ರೆಜಿಲ್: 3,37,07,069

ಫ್ರಾನ್ಸ್: 3,36,89,657

ಜರ್ಮನಿ: 3,07,02,511

ಯುಕೆ: 2,33,04,479

ಇಟಲಿ: 2,08,37,233

ದಕ್ಷಿಣ ಕೊರಿಯಾ: 1,95,35,242

ರಷ್ಯಾ: 1,85,65,551

ಟರ್ಕಿ: 1,55,24,071

 ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ ಟಾಪ್-10 ರಾಷ್ಟ್ರಗಳು

ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ ಟಾಪ್-10 ರಾಷ್ಟ್ರಗಳು

ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:

ಯುಎಸ್ಎ: 10,53,969

ಬ್ರೆಜಿಲ್: 6,77,871

ಭಾರತ: 5,26,211

ರಷ್ಯಾ: 3,82,313

ಮೆಕ್ಸಿಕೋ: 3,27,412

ಪೆರು: 2,14,120

ಯುಕೆ: 1,83,953

ಇಟಲಿ: 1,71,439

ಇಂಡೋನೇಷಿಯಾ: 1,56,940

ಫ್ರಾನ್ಸ್: 1,51,782

ಅತಿಹೆಚ್ಚು ಗುಣಮುಖ ಸಂಖ್ಯೆಯನ್ನು ಹೊಂದಿರುವ ದೇಶಗಳು

ಅತಿಹೆಚ್ಚು ಗುಣಮುಖ ಸಂಖ್ಯೆಯನ್ನು ಹೊಂದಿರುವ ದೇಶಗಳು

ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಗುಣಮುಖರಾದವರನ್ನು ಹೊಂದಿರುವ ಟಾಪ್ 10 ದೇಶ:

ಯುಎಸ್ಎ: 8,77,72,164

ಭಾರತ: 4,32,86,787

ಬ್ರೆಜಿಲ್: 3,21,90,361

ಫ್ರಾನ್ಸ್: 3,18,22,825

ಜರ್ಮನಿ: 2,87,37,700

ಯುಕೆ: 2,26,13,397

ಇಟಲಿ: 1,92,85,667

ರಷ್ಯಾ: 1,79,58,463

ಟರ್ಕಿ: 1,52,21,506

ಸ್ಪೇನ್: 1,24,90,889

(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+