Get Updates
Get notified of breaking news, exclusive insights, and must-see stories!

ಜ.5: ಜಗತ್ತಿನ ಯಾವ ರಾಷ್ಟ್ರದಲ್ಲಿ ಎಷ್ಟು ಮಂದಿ ಕೊರೊನಾದಿಂದ ಗುಣಮುಖ?

ಬೆಂಗಳೂರು, ಜನವರಿ 05: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ವೇಗ ಹೆಚ್ಚಾಗುತ್ತಿದೆ. ಇದರ ಮಧ್ಯೆ ಜಗತ್ತಿನಲ್ಲಿ ವರದಿ ಆಗುತ್ತಿರುವ ಕೊವಿಡ್19 ಪ್ರಕರಣಗಳು, ಒಟ್ಟು ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖರಾದವರ ಅಂಕಿ ಅಂಶಗಳ ವಿವರ ಇಲ್ಲಿದೆ.

ವಿಶ್ವದೆಲ್ಲೆಡೆ ಒಟ್ಟು 295,848,584ಕ್ಕೂ ಅಧಿಕ ಸೋಂಕಿತ ಪ್ರಕರಣಗಳು ವರದಿಯಾಗಿದ್ದು 5,476,853 ಮಂದಿ ಸೋಂಕಿತರು ಸಾವಿನ ಮನೆ ಸೇರಿದ್ದಾರೆ. ಜಾಗತಿಕವಾಗಿ ಈವರೆಗೆ 256,291,822 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ ಒಂದೇ ದಿನ 5.67 ಲಕ್ಷ ಸೋಂಕಿತ ಪ್ರಕರಣ ದಾಖಲಾಗಿದ್ದು, ಆತಂಕ ಮೂಡಿಸಿದೆ.

ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆ ಶುರುವಾಗಿದೆ. ದೇಶದಲ್ಲಿ ಈಗಾಗಲೇ ದೈನಂದಿನ ಸೋಂಕಿತ ಪ್ರಕರಣಗಳ ಸಂಖ್ಯೆ 50,000 ಗಡಿ ದಾಟಿದೆ. ಇದರ ಮಧ್ಯೆ 2022ರ ಜನವರಿ 10ರಿಂದ ವೈದ್ಯಕೀಯ ಸಿಬ್ಬಂದಿ ಹಾಗೂ ಮೊದಲ ಶ್ರೇಣಿ ಕಾರ್ಮಿಕರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇದರ ಮಧ್ಯೆ ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಜನವರಿ 05ರ ಪ್ರಕಾರ) ಇಲ್ಲಿದೆ.

ದೇಶದಲ್ಲಿ ಒಂದೇ ದಿನ 58,000ಕ್ಕೂ ಹೆಚ್ಚು ಮಂದಿಗೆ ಕೊವಿಡ್-19

ದೇಶದಲ್ಲಿ ಒಂದೇ ದಿನ 58,000ಕ್ಕೂ ಹೆಚ್ಚು ಮಂದಿಗೆ ಕೊವಿಡ್-19

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ ಭಾರತದಲ್ಲಿ ಒಂದೇ ದಿನ 58,000ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 58,097 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 534 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 15,389 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಈವರೆಗೂ 3,43,21,803 ಸೋಂಕಿತರು ಗುಣಮುಖರಾಗಿದ್ದರೆ, 4,82,551 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 2,14,004 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಲ್ಲಿ ಹೇಗಿದೆ ಕೊವಿಡ್-19 ಲೆಕ್ಕಾಚಾರ?

ವಿಶ್ವದಲ್ಲಿ ಹೇಗಿದೆ ಕೊವಿಡ್-19 ಲೆಕ್ಕಾಚಾರ?

ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 295,848,584 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 5,476,853 ಮಂದಿ ಪ್ರಾಣ ಬಿಟ್ಟಿದ್ದಾರೆ. 256,291,822 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 34,079,909 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಇದರ ಹೊರತಾಗಿ ಅತಿಹೆಚ್ಚು ಕೊವಿಡ್-19 ಬಾಧಿತ, ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ, ಅತಿಹೆಚ್ಚು ಗುಣಮುಖರ ಸಂಖ್ಯೆಯನ್ನು ದಾಖಲಿಸಿರುವ ಟಾಪ್-10 ರಾಷ್ಟ್ರಗಳ ವಿವರವನ್ನು ಮುಂದೆ ನೋಡೋಣ.

ಕೊವಿಡ್-19 ಬಾಧಿತ ಟಾಪ್ 10 ದೇಶಗಳು

ಕೊವಿಡ್-19 ಬಾಧಿತ ಟಾಪ್ 10 ದೇಶಗಳು

ಯುಎಸ್ಎ: 5,80,40,720

ಭಾರತ: 3,50,18,358

ಬ್ರೆಜಿಲ್: 2,23,23,837

ಯುಕೆ: 1,36,41,520

ಫ್ರಾನ್ಸ್: 1,05,89,505

ರಷ್ಯಾ: 1,05,70,212

ಟರ್ಕಿ: 96,52,394

ಜರ್ಮನಿ: 72,79,025

ಸ್ಪೇನ್: 67,85,286

ಇಟಲಿ: 65,66,947

ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ ಟಾಪ್-19 ರಾಷ್ಟ್ರಗಳು

ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ ಟಾಪ್-19 ರಾಷ್ಟ್ರಗಳು

ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:

ಯುಎಸ್ಎ: 8,51,439

ಬ್ರೆಜಿಲ್: 619,426

ಭಾರತ: 4,82,551

ರಷ್ಯಾ: 3,12,187

ಮೆಕ್ಸಿಕೋ: 2,99,711

ಪೆರು: 2,02,867

ಯುಕೆ: 1,48,941

ಇಂಡೋನೇಷಿಯಾ: 1,44,105

ಇರಾನ್: 1,31,736

ಫ್ರಾನ್ಸ್: 1,24,563

ಅತಿಹೆಚ್ಚು ಗುಣಮುಖ ಸಂಖ್ಯೆಯನ್ನು ಹೊಂದಿರುವ ದೇಶಗಳು

ಅತಿಹೆಚ್ಚು ಗುಣಮುಖ ಸಂಖ್ಯೆಯನ್ನು ಹೊಂದಿರುವ ದೇಶಗಳು

ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಗುಣಮುಖರಾದವರನ್ನು ಹೊಂದಿರುವ ಟಾಪ್ 10 ದೇಶ:

ಯುಎಸ್ಎ: 4,19,01,183

ಭಾರತ: 3,43,21,803

ಬ್ರೆಜಿಲ್: 2,15, 67,845

ಯುಕೆ: 1,05,10,621

ರಷ್ಯಾ: 95,75,147

ಟರ್ಕಿ: 91,62,851

ಫ್ರಾನ್ಸ್: 82,75,283

ಜರ್ಮನಿ: 65,31,900

ಇರಾನ್: 60,44,247

ಅರ್ಜೆಂಟೀನಾ: 53,54,436

(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)

Recommended Video

      ಸೂರ್ಯ ಗ್ರಹಣಕ್ಕೆ ರಾಹು-ಕೇತು ಕಾರಣವಾಗಿದ್ದು ಹೇಗೆ? | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+