Infographics: ಆಗಸ್ಟ್ 2ರಂದು ಜಗತ್ತಿನಲ್ಲಿ ಕೊರೊನಾ ವೈರಸ್ ಅಂಕಿ-ಅಂಶ
ನವದೆಹಲಿ, ಆಗಸ್ಟ್ 02: ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಾವಳಿ ಮತ್ತೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಜಗತ್ತಿನಲ್ಲಿ ವರದಿ ಆಗುತ್ತಿರುವ ಕೊವಿಡ್-19 ಪ್ರಕರಣಗಳು, ಒಟ್ಟು ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖರಾದವರ ಅಂಕಿ ಅಂಶಗಳು ಹೀಗಿವೆ.
ವಿಶ್ವದೆಲ್ಲೆಡೆ ಒಟ್ಟು 583,290,194ಕ್ಕೂ ಅಧಿಕ ಸೋಂಕಿತ ಪ್ರಕರಣಗಳು ವರದಿಯಾಗಿದ್ದು 6,422,406 ಮಂದಿ ಸೋಂಕಿತರು ಸಾವಿನ ಮನೆ ಸೇರಿದ್ದಾರೆ. ಜಾಗತಿಕವಾಗಿ ಈವರೆಗೆ 553,851,802 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಾಗತಿಕ ಅಂಕಿ-ಅಂಶಗಳು ತಿಳಿಸಿವೆ.
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಚಿತ್ರಣ ಬದಲಾಗಿದೆ. ಒಂದು ದಿನದಲ್ಲಿ ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆಯು 16 ಸಾವಿರದ ಗಡಿ ಇಳಿದಿದೆ. ಇದರ ಮಧ್ಯೆ ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾ ವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಆಗಸ್ಟ್ 02ರ ಪ್ರಕಾರ) ಇಲ್ಲಿದೆ.

ದೇಶದಲ್ಲಿ ಒಂದೇ ದಿನ 13734 ಮಂದಿಗೆ ಕೊವಿಡ್
ದೇಶದಲ್ಲಿ ಕಳೆದೊಂದು ದಿನದಲ್ಲಿ 13734 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ ಇದೇ ಅವಧಿಯಲ್ಲಿ 17,897 ಸೋಂಕಿತರು ಗುಣಮುಖರಾಗಿದ್ದರೆ, 39 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾರತದಲ್ಲಿ ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 44,050,009ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ, ಇದುವರೆಗೂ 43,383,787 ಸೋಂಕಿತರು ಗುಣಮುಖರಾಗಿದ್ದು, 526,430 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 139,792ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಪಾಸಿಟಿವಿಟಿ ದರದಲ್ಲೂ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 4,11,102 ಮಂದಿಗೆ ಕೋವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ. ದೇಶದಲ್ಲಿ ಇದುವರೆಗೂ 87,58,92,611 ಜನರಿಗೆ ಕೊರೊನಾ ವೈರಸ್ ಸೋಂಕಿತ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ವಿಶ್ವದಲ್ಲಿ ಹೇಗಿದೆ ಕೊವಿಡ್-19 ಲೆಕ್ಕಾಚಾರ?
ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 583,290,194 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,422,406 ಮಂದಿ ಪ್ರಾಣ ಬಿಟ್ಟಿದ್ದಾರೆ. 553,851,802 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 23,015,986 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಇದರ ಹೊರತಾಗಿ ಅತಿಹೆಚ್ಚು ಕೊವಿಡ್-19 ಬಾಧಿತ, ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ, ಅತಿಹೆಚ್ಚು ಗುಣಮುಖರ ಸಂಖ್ಯೆಯನ್ನು ದಾಖಲಿಸಿರುವ ಟಾಪ್-10 ರಾಷ್ಟ್ರಗಳ ವಿವರವನ್ನು ಮುಂದೆ ನೋಡೋಣ.

ಕೊವಿಡ್-19 ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 9,32,25,110
ಭಾರತ: 4,40,50,009
ಫ್ರಾನ್ಸ್: 3,38,66,824
ಬ್ರೆಜಿಲ್: 3,38,56,805
ಜರ್ಮನಿ: 3,09,56,805
ಯುಕೆ: 2,33,04,479
ಇಟಲಿ: 2,10,59,545
ದಕ್ಷಿಣ ಕೊರಿಯಾ: 1,99,32,439
ರಷ್ಯಾ: 1,86,22,103
ಟರ್ಕಿ: 1,58,89,495

ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ ಟಾಪ್-19 ರಾಷ್ಟ್ರಗಳು
ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: 10,55,576
ಬ್ರೆಜಿಲ್: 6,78,792
ಭಾರತ: 5,26,430
ರಷ್ಯಾ: 3,82,517
ಮೆಕ್ಸಿಕೋ: 3,27,750
ಪೆರು: 2,14,364
ಯುಕೆ: 1,83,953
ಇಟಲಿ: 1,72,207
ಇಂಡೋನೇಷಿಯಾ: 1,57,004
ಫ್ರಾನ್ಸ್: 1,52,179

ಅತಿಹೆಚ್ಚು ಗುಣಮುಖ ಸಂಖ್ಯೆಯನ್ನು ಹೊಂದಿರುವ ದೇಶಗಳು
ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಗುಣಮುಖರಾದವರನ್ನು ಹೊಂದಿರುವ ಟಾಪ್ 10 ದೇಶ:
ಯುಎಸ್ಎ: 8,83,23,568
ಭಾರತ: 4,33,83,787
ಬ್ರೆಜಿಲ್: 3,24,21,379
ಫ್ರಾನ್ಸ್: 3,23,96,768
ಜರ್ಮನಿ: 2,91,38,000
ಯುಕೆ: 2,27,28,171
ಇಟಲಿ: 1,96,32,585
ರಷ್ಯಾ: 1,79,90,048
ಟರ್ಕಿ: 1,54,87,468
ಸ್ಪೇನ್: 1,26,10,266
(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)












Click it and Unblock the Notifications