ಶ್ರೀಮಂತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಸ್ತಿ ಎಷ್ಟು: ಚಿತ್ರ ವಿವರ
ಹೈದರಾಬಾದ್, ನವೆಂಬರ್ 22: ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಸಾಲಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ಬಾಯ್ಡು ಅವರ ಆಸ್ತಿ ಎಷ್ಟು ಗೊತ್ತಾ?
ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ಆಸ್ತಿಗಿಂತ ಅವರ ಮೂರು ವರ್ಷದ ಮೊಮ್ಮಗನ ಆಸ್ತಿ 6 ಪಟ್ಟು ಜಾಸ್ತಿಯಿದೆ!
ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಬುಧವಾರ ತಮ್ಮ ಕುಟುಂಬದ ಆಸ್ತಿ ವಿವರನ್ನು ಬಿಡುಗಡೆ ಮಾಡಿದರು. ಅದರ ಪ್ರಕಾರ ನಾಯ್ಡು ಕುಟುಂಬದ ಒಟ್ಟು ಆಸ್ತಿ 81.83 ಕೋಟಿ ರೂ.
ಕುಟುಂಬದ ಆಸ್ತಿ ಕಳೆದ ಒಂದು ವರ್ಷಗಳಲ್ಲಿ 12.5 ಕೋಟಿ ರೂ.ನಷ್ಟು ಹೆಚ್ಚಾಗಿದ್ದು, 69.28 ಕೋಟಿ ರೂ.ನಿಂದ 81.83 ಕೋಟಿ ರೂ. ತಲುಪಿದೆ. ಆದರೆ ವೈಯಕ್ತಿಕವಾಗಿ ಚಂದ್ರಬಾಬು ನಾಯ್ಡು ಅವರು ಕೇವಲ 3 ಕೋಟಿ ರೂ.ಆಸ್ತಿಯನ್ನಷ್ಟೇ ಹೊಂದಿದ್ದಾರೆ ಎಂದು ಈ ವಿವರ ತಿಳಿಸಿದೆ. ಕಳೆದ ವರ್ಷ 2.53 ಕೋಟಿ ರೂ. ನಷ್ಟಿದ್ದ ನಾಯ್ಡು ಅವರ ಆಸ್ತಿ ಮೌಲ್ಯ ಈ ವರ್ಷ 3 ಕೋಟಿ ರೂ.ನಷ್ಟು ಹೆಚ್ಚಾಗಿದೆ. ಅವರ ಕುಟುಂಬದ ಆಸ್ತಿ ಮೌಲ್ಯದ ಕುರಿತ ಚಿತ್ರ ವಿವರ ಇಲ್ಲಿದೆ.













Click it and Unblock the Notifications