ಬಸವಕಲ್ಯಾಣ ಉಪ ಚುನಾವಣೆ; ಅಭ್ಯರ್ಥಿಗಳ ಪಡೆದ ಮತಗಳು
ಬೀದರ್, ಮೇ 03; ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿಯ ಶರಣು ಸಲಗರ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರದಲ್ಲಿ 2021ರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಶರಣು ಸಲಗರ 71,012 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಮಾಲಾ ಬಿ. ನಾರಾಯಣರಾವ್ ಅವರನ್ನು ಸೋಲಿಸಿದ್ದಾರೆ. ಶರಣು ಸಲಗರ 456 ಅಂಚೆ ಮತಗಳು, 70,556 ಇವಿಎಂ ಮತಗಳನ್ನು ಪಡೆದಿದ್ದಾರೆ. ಶೇ 48.17ರಷ್ಟು ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್‌ನ ಮಾಲಾ ಬಿ. ನಾರಾಯಣರಾವ್ 50,108 ಇವಿಎಂ, 275 ಅಂಚೆ ಮತಗಳು ಸೇರಿ ಒಟ್ಟು 50,383 ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಶೇ 34.17ರಷ್ಟು ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ 11,390 ಇವಿಎಂ ಮತಗಳು, 12 ಅಂಚೆ ಮತಗಳು ಸೇರಿ 11,402 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದಾರೆ. ಜೆಡಿಎಸ್ ಪಕ್ಷದ ಮತಗಳಿಕೆ ಶೇ 7.73 ಆಗಿದೆ.
ಬಿಜೆಪಿ ಟಿಕೆಟ್ ಕೈ ತಪ್ಪಿದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ 9,475 ಮತಗಳನ್ನು ಪಡೆದಿದ್ದಾರೆ. ಉಪ ಚುನಾವಣೆಯಲ್ಲಿ 888 ನೋಟಾ ಮತಗಳು ಚಲಾವಣೆಯಾಗಿವೆ.












Click it and Unblock the Notifications