ಅಸ್ಸಾಂನಲ್ಲಿ ದಾಖಲೆ ಬರೆದ ಬಿಜೆಪಿ; ಯಾರಿಗೆ, ಎಷ್ಟು ಮತ?
ಗೌಹಾತಿ, ಮೇ 03; ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆ. ರಾಜ್ಯದಲ್ಲಿ ಪುನಃ ಸರ್ಕಾರವನ್ನು ರಚನೆ ಮಾಡಲಾಗಿದೆ. 2ನೇ ಬಾರಿಗೆ ಸರ್ಕಾರ ರಚನೆ ಮಾಡುತ್ತಿರುವ ಬಿಜೆಪಿಯೇತರ ಪಕ್ಷ ಎಂಬ ದಾಖಲೆ ಬರೆದಿದೆ.
Recommended Video
ಅಸ್ಸಾಂನಲ್ಲಿ ಎರಡನೇ ಬಾರಿ ಅಧಿಕಾರ ಹಿಡಿಯುವತ್ತ ಬಿಜೆಪಿ
ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 60, ಕಾಂಗ್ರೆಸ್ 29, ಎಐಯುಡಿಎಫ್ 16, ಎಜಿಪಿ 9, ಬಿಪಿಎಫ್ 4 ಸ್ಥಾನಗಳಲ್ಲಿ ಜಯಗಳಿಸಿವೆ. ಬಿಜೆಪಿ ಶೇ 33.21ರಷ್ಟು ಮತಗಳನ್ನು ಪಡೆದಿದೆ. ಎಜಿಪಿ 7.91ರಷ್ಟು ಮತ ಪಡೆದಿದೆ.
ಬಿಜೆಪಿ ಮತ್ತು ಮೈತ್ರಿಕೂಟದ ಪಕ್ಷಗಳಾದ ಎಜಿಪಿ, ಯುಪಿಪಿಎಲ್ ಸೇರಿ ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳ ಪೈಕಿ 75 ಸ್ಥಾನಗಳಲ್ಲಿ ಜಯಗಳಿಸಿವೆ. 2016ರ ಚುನಾವಣೆಯಲ್ಲಿ ಇದೇ ಮೈತ್ರಿಕೂಟ 86 ಸ್ಥಾನಗಳಲ್ಲಿ ಗೆದ್ದಿತ್ತು.

ಸಿಪಿಐ(ಎಂ) 1, ಪಕ್ಷೇತರ 1, ಯುಪಿಪಿಎಲ್ 6 ಸ್ಥಾನಗಳಲ್ಲಿ ಜಯಸಾಧಿಸಿವೆ. ಸಿಪಿಐ ಶೇ 0.14, ಸಿಪಿಐ(ಎಂ) ಶೇ 0.84 ಮತಗಳನ್ನು ಚುನಾವಣೆಯಲ್ಲಿ ಪಡೆದಿವೆ.












Click it and Unblock the Notifications