ಚಿತ್ರಗಳಲ್ಲಿ: ಬಿಗ್ ಬಿಗೆ ಜಾಗತಿಕ ವೈವಿಧ್ಯತೆ ಪುರಸ್ಕಾರ
ಬೆಂಗಳೂರು, ಸೆ.11: ಭಾರತದ ಮೇರು ನಟ ಬಿಗ್ ಬಿ ಅಮಿತಾಬ್ ಅವರಿಗೆ ಬ್ರಿಟನ್ ಸಂಸತ್ತಿನಲ್ಲಿ ಆತ್ಮೀಯ ಸನ್ಮಾನ ಸಿಕ್ಕಿದೆ. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ ಅವರು ಔತಣ ಕೂಟ ಏರ್ಪಡಿಸಿದ್ದಾರೆ.
ಇದರ ಜತೆಗೆ ಅಮಿತಾಬ್ ಅವರಿಗೆ 'ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ' ನೀಡಿ ಬ್ರಿಟಿಷ್ ಸಂಸತ್ತು ಗೌರವಿಸಿದೆ. ಆದರೆ, ಈ ಬಗ್ಗೆ ವರದಿ ಮಾಡಿದ ಐಬಿಎನ್ ಲೈವ್ ಬ್ರಿಟಿಷ್ ಸಂಸತ್ತು ಎನ್ನುವುದರ ಬದಲಿಗೆ ಭಾರತದ ಸಂಸತ್ತು ಎಂದಿದೆ.
ಇದನ್ನು ಗಮಿಸಿದ ಅಮಿತಾಬ್ ನಾನು ಸದ್ಯ ಬ್ರಿಟನ್ ನಲ್ಲಿದ್ದೇನೆ. ಇಲ್ಲಿ ಸನ್ಮಾನ ಚೆನ್ನಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.
T 1152 -IBNLive reporting on net that I am getting Global Diversity Award in Parliament in DELHI ! WRONG ! Its at the British Parliament !
— Amitabh Bachchan (@SrBachchan) September 11, 2013
ಉಳಿದಂತೆ ಇಂದಿನ ಚಿತ್ರಗಳಲ್ಲಿ ಐಫೋನ್ ಹೊಸ ಮಾದರಿಗಳ ಬಿಡುಗಡೆ, ಪುರಿಯಲ್ಲಿ ಅನಾವಾರಣಗೊಂಡ ಸಿರಿಯಾ, ಬಾಲಿವುಡ್ ಜಗತ್ತಿನಲ್ಲಿ ಮುಂದುವರೆದ ಗಣೇಶ ಪೂಜೆ, ಲಾಲೂ ಪ್ರಸಾದ್ ಯಾದವ್ ಕುಟುಂಬ, ಮುಝಾಫರ್ ನಗರದಲ್ಲಿ ನಿರ್ಗತಿಕರ ಬವಣೆ, ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳ ಪರ ವಕೀಲರ ಮೇಲೆ ಜನರ ಆಕ್ರೋಶ, ಮತ್ತೆ ಬಾಗಿಲು ತೆರೆದ ಕೇದಾರನಾಥ ಮಂದಿರ, ಬಿಲ್ಲು ಬಾಣ ಹಿಡಿದು ನಿಂತ ರಾಹುಲ್ ಗಾಂಧಿ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ...

ಬ್ರಿಟಿಷ್ ಪ್ರಧಾನಿ ಜತೆ ಬಿಗ್ ಬಿ
ಲಂಡನ್: ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ ಜತೆ ಅಮಿತಾಬ್ ಬಚ್ಚನ್.
|
ಸನ್ಮಾನದ ಬಗ್ಗೆ ಬಿಗ್ ಬಿ
ಬ್ರಿಟನ್ನಿನಲ್ಲಿ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ' ಪಡೆದ ಬಿಗ್ ಬಿ ಟ್ವೀಟ್ ಮಾಡಿದ್ದು ಹೀಗೆ

ಪ್ರತಿಭಟನೆ ಬಿಸಿ
ದೆಹಲಿ ಅತ್ಯಾಚಾರ ಪ್ರಕರಣದಲ್ಲಿನ ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ಅವರ ವಿರುದ್ಧ ಜನರು ಪ್ರತಿಭಟಿಸಿದರು. ಇನ್ನಷ್ಟು ಚಿತ್ರಗಳು ವರದಿ ಇಲ್ಲಿದೆ ನೋಡಿ

ಕೇದಾರನಾಥ ಮಂದಿರ
ಉತ್ತರಾಖಂಡದಲ್ಲಿ ಮಹಾ ಪ್ರವಾಹದಿಂದಾಗಿ ಸುಮಾರು 86 ದಿನಗಳ ಕಾಲ ಭಕ್ತಾದಿಗಳ ಪಾಲಿಗೆ ಮುಚ್ಚಲ್ಪಟ್ಟಿದ್ದ ಕೇದಾರಾನಾಥ ಮಂದಿರ ಬುಧವಾರ (ಸೆ.11) ಬಾಗಿಲು ತೆರೆದಿದೆ.

ಉದಯಪುರದಲ್ಲಿ ರಾಹುಲ್
ಉದಯಪುರ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಆದಿವಾಸಿ ಹಾಗೂ ರೈತರ ಮೆರವಣಿಗೆ ಉದ್ಟಾಟಿಸಿದ ಮೇಲೆ ಅವರಿಗೆ ಬಿಲ್ಲು ಬಾಣ ಕತ್ತಿ ನೀಡಿ ಸನ್ಮಾನಿಸಲಾಯಿತು. PTI Photo by Subhav Shukla












Click it and Unblock the Notifications