Ganesha Chaturthi 2023: ಗಣೇಶ ಚತುರ್ಥಿಗೆ ಮನೆಯಲ್ಲೇ ಮಾಡಿ ವಿಶೇಷ ಮೋದಕ
ಗಣೇಶನಿಗೆ ಮೋದಕ ಅಂದ್ರೆ ತುಂಬಾ ಇಷ್ಟ. ಬರುವ ವಿನಾಯಕ ಚತುರ್ಥಿಗೆ ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಮೋದಕವನ್ನು ಕೊಡಬೇಕೆ? ಹಾಗಿದ್ದಲ್ಲಿ ನಾವು ನಿಮಗೆ ಮನೆಯಲ್ಲೇ ಮೊದಕ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇವೆ. ಈ ಮೋದಕ ಮಾಡುವುದು ತುಂಬಾ ಸುಲಭ. ಮತ್ತು ಇದನ್ನು ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ.
ಹಾಗಾದರೆ ಮೋದಕ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಇದನ್ನು ನೀವು ಗಣೇಶ ಚತುರ್ಥಿಗೆ ಮನೆಯಲ್ಲಿ ಟ್ರೈ ಮಾಡಿ ಕಾಮೆಂಟ್ ಮಾಡಿ. ಹಾಗಾದರೆ ತಡ ಮಾಡೋದು ಬೇಡ ಈಗಲೇ ಶುರು ಮಾಡೋಣ.

ಮೋದಕ ಮಾಡಲು ಅಗತ್ಯವಿರುವ ವಸ್ತುಗಳು:
*ಕಡಲೆ ಬೇಳೆ- 1/4 ಕಪ್
* ತೆಂಗಿನ ತುರಿ - 1/2 ಕಪ್
* ಬೆಲ್ಲ - 1/2 ಕಪ್
* ಏಲಕ್ಕಿ - 1
ಹಿಟ್ಟಿಗೆ...
* ಮೈದಾ ಹಿಟ್ಟು - 1/2 ಕಪ್
* ಉಪ್ಪು - ರುಚಿಕೆ
* ತುಪ್ಪ - 1 tbsp
* ನೀರು - ಅಗತ್ಯವಿರುವ ಪ್ರಮಾಣ

ಪಾಕವಿಧಾನ:
* ಮೊದಲು ಬೇಳೆಯನ್ನು ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ
* ನಂತರ ಹುರಿದ ಕಡಲೆ ಬೇಳೆಯನ್ನು ಕುಕ್ಕರ್‌ನಲ್ಲಿ ಹಾಕಿ 1 ಕಪ್ ನೀರು ಹಾಕಿ ಒಲೆಯ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ 4 ಸೀಟಿ ಬರಲು ಬಿಡಿ.
* ನಂತರ ಬೇಯಿಸಿದ ಬೇಳೆಯನ್ನು ಮ್ಯಾಶ್ ಮಾಡಿ.
* ಆ ನಂತರ ಒಂದು ಬಾಣಲೆ ಒಳೆಯಮೇಲೆ ಇಟ್ಟು ಸ್ವಲ್ಪ ನೀರು ಹಾಕಿ ಬೆಲ್ಲವನ್ನು ನೀರಿಗೆ ಹಾಕಿ ಚೆನ್ನಾಗಿ ಕರಗಿಸಿ, ಅದು ಕರಗಿದ ನಂತರ ಸ್ವಲ್ಪ ಸ್ವಲ್ಪ ಮತ್ತೆ ಬೆಲ್ಲವನ್ನು ಹಾಕಿ ನೊರೆ ಬರುವವರೆಗೆ ಕುದಿಸಿ.
* ನಂತರ ಅದಕ್ಕೆ ಹಿಸುಕಿದ ಬೇಳೆಯನ್ನು ಹಾಕಿ ಚೆನ್ನಾಗಿ ಕಲಕಿ, ತೆಂಗಿನ ತುರಿ ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಗಟ್ಟಿಯಾಗುವವರೆಗೆ ಕಲಕಿದರೆ ಹೂರಣ ರೆಡಿ.
* ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಕುದಿಯಲು ಬಿಡಿ.
* ಮತ್ತೊಂದು ಪಾತ್ರೆಯಲ್ಲಿ ಮೈದಾ ಹಿಟ್ಟನ್ನು ಹಾಕಿ, ಅದಕ್ಕೆ ತುಪ್ಪ ಮತ್ತು ಉಪ್ಪು ಸೇರಿಸಿ ಬೆರೆಸಿ. ನಂತರ ಅದರಲ್ಲಿ ಸ್ವಲ್ಪ ಬಿಸಿ ನೀರನ್ನು ಸುರಿಯಿರಿ ಸ್ವಲ್ಪ ಸಮಯದವರೆಗೆ ಮುಚ್ಚಿಡಿ.
*ಇದು ತಣ್ಣಗಾದ ನಂತರ ಕೈಯಿಂದ ಚೆನ್ನಾಗಿ ಮ್ಯಾಶ್ ಮಾಡಿ.
* ಚಪಾತಿ ಹದಕ್ಕೆ ಕಲಸಿದ ಹಿಟ್ಟನ್ನು ಚಿಕ್ಕ ಉಂಡೆಗಳಾಗಿ ಮಾಡಿ ಸ್ವಲ್ಪ ಸಮಯದವರೆಗೆ ಮುಚ್ಚಿಡಿ.
* ಸಿದ್ಧಪಡಿಸಿದ ಹೂರಣವನ್ನು ಸಮವಾಗಿ ವಿಂಗಡಿಸಿ ಮತ್ತು ಅದನ್ನು ಉಂಡೆಗಳಾಗಿ ಮಾಡಿ
* ನಂತರ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಅದನ್ನು ಬಟ್ಟಲಿನ ಆಕಾರದಲ್ಲಿ ತಟ್ಟಿ, ಮಧ್ಯದಲ್ಲಿ ಹೂರಣದ ಉಂಡೆಯನ್ನು ಹಾಕಿ ಮೋದಕ ಆಕಾರದಲ್ಲಿ ಚೆನ್ನಾಗಿ ಮುಚ್ಚಿ.
* ಇದೇ ರೀತಿ ಎಲ್ಲಾ ಹಿಟ್ಟನ್ನು ಮೋದಕ ತರಹ ಮಾಡಿ ಇಡ್ಲಿ ತಟ್ಟೆಯಲ್ಲಿ ಹಾಕಿ 5-8 ನಿಮಿಷ ಕುದಿಸಿದರೆ ರುಚಿಯಾದ ಮೋದಕ ಸವಿಯಲು ಸಿದ್ಧ.
ಇದಕ್ಕೆ ಕಡಲೆ ಬೇಳೆ ಬದಲಾಗಿ ಕಾಯಿ ಕೂಡ ಬಳಕೆ ಮಾಡಬಹುದು. ಮನೆಯಲ್ಲಿ ಮೋದಕ ಮಾಡಿ ಹಬ್ಬವನ್ನು ಆರೋಗ್ಯಕರವಾಗಿ ಆಚರಿಸಿ.












Click it and Unblock the Notifications