ಪ್ರೇಮಿಗಳ ದಿನ: ಒನ್ ಲೈನ್ ಕನವರಿಕೆಗಳು

* ತಂಗಾಳಿಯ ಪಿಸುಮಾತಿಗೆ ಮೈಮನ ಪುಳಕ, ಸಂತಸದ ಕ್ಷಣಕ್ಕೆ ಪ್ರೀತಿಯೇ ಪೂರಕ
* ಭಾವನೆಗಳ ಮೋಡಗಳು ಘರ್ಷಿಸಿದಾಗ ಕವಿ ಹೃದಯದಿ ಕಂಪನ, ಕಂಗಳಲ್ಲಿ ಪ್ರತಿಫಲನ
* ಏಕಾಂತದಿ ನಿನ್ನ ಧ್ಯಾನ, ಎದುರಾದರೆ ಮನಸಲ್ಲಿ ನೂರೆಂಟು ಸವಿಗಾನ, ಪ್ರೀತಿಲಿ ಹೀಗೇನಾ
* ಪ್ರೇಮ ನಿವೇದನೆಗೆ ಮಾತಿ ಹಂಗೇಕೆ, ಹೃದಯದ ಮೇಲೆ ಕೈಯಿರಿಸಿ ಕಂಗಳಲ್ಲೇ ಹೇಳಿಬಿಡು
* ಜೊತೆಯಿರುವಾಗ ನಿನ್ನ ಸಖ, ಕಾಣು ನೀ ಸ್ವರ್ಗಸುಖ, ಪ್ರೀತಿಯಲ್ಲಿರಲಿ ನಂಬಿಕೆ ಕೊನೆತನಕ
* ಪ್ರೀತಿಯ ಮಾಡದೆ, ಕನಸಾ ಕಾಣದೆ, ಸಂತಸವ ಹಂಚದವ ನಂದನವನದಿ ಕಳೆಯಿದ್ದಂತೆ.
* ಜೀವನದ ಕೊನೆ ಕ್ಷಣದಲ್ಲೂ ನಿನ್ನದೇ ಕನವರಿಕೆ, ಯಾಕೆ ಆಗಿಲ್ಲ ನಿನಗಿನ್ನೂ ಮನವರಿಕೆ
ಪ್ರೀತಿಪಾತ್ರರಿಗೆ ವ್ಯಾಲೆಂಟೈನ್ ಡೇ ಗಿಫ್ಟ್ ಕಳಿಸಿ
* ಕದ್ದುಮುಚ್ಚಿ ಪ್ರೀತಿ ಮಾಡಿ, ಸಂಗಮಿಸಿ, ಕಣ್ಣು ಒದ್ದೆಯಾಗಿ ಕಾರಣ ಹುಡುಕೋ ಮೊದಲು ನನ್ನನುಳಿಸು
* ಕೋಟಿ ತಾರೆಗಳು ಬೆಳಗುತ್ತಿದ್ದರೂ, ಚಂದ್ರಮುಖಿ ನಿನ್ನಕಾಣದೆ ನನ್ನ ಕಂಗಳು ಮಂಕಾಗಿ ಹೋಯ್ತು
* ಮುಖವೆಂಬ ಕನ್ನಡಿಯಲ್ಲಿ ಹುದುಗಿಸಿದ ಆ ನಗು, ಮನಸ ಅನುಮತಿಯಿಲ್ಲದೆ ಹೊರಬಂತು
* ಪ್ರೀತಿಯ ಮಾಯೆಯಲ್ಲಿ ಬಂಧಿಯಾದರೂ, ಜಗತ್ತಿನ ಜಂಜಾಟದಿಂದ ಮುಕ್ತ ನಾನು.
* ಕಣ್ಣಂಚಿನ ನೋಟವ ಮನಸಾರೆ ನೋಡಿಬಿಡು. ರೆಪ್ಪೆ ಮುಚ್ಚಿದ ಮೇಲೆ ಆ ಭಾವ ಮರೆಯಾದೀತು.
* ನಿನ್ನ ಪ್ರೀತಿಯಲ್ಲಿ ನಾ ಗಳಿಸಿದ್ದೇನು. ಹೃದಯ ಕೊಟ್ಟೆ ವಿರಹ ಪಡೆದೆ. ನೆನಪು ಪಡೆದು ಮರೆತು ಬಿಟ್ಟೆ
* ಕೋಲ್ಮಿಂಚಿನಂತಹ ನಿನ್ನ ನೋಟವ ಬಣ್ಣಿಸ ಹೊರಟ ನಾನು ಬಾಯಿ ತೆರೆದು ಮೂಕನಾಗಿ ಹೋದೆ.
* ಎಲ್ಲಾ ಕನಸಾ ನನಸು ಮಾಡೋ ಪ್ರೀತಿ. ಜೀವನಾನ ಹಸನು ಮಾಡೋ ಪ್ರೀತಿ. ಹಲವು ರೂಪ ಏಕ ರೀತಿ
* ತಂಗಾಳಿ ಬೀಸಲು ಮಳೆಯೇ ಬರಬೇಕಿಲ್ಲ. ನನ್ನ ಪ್ರೀತಿಯ ಗಂಧ ನಿನ್ನ ತಲುಪಲು ನನ್ನುಸಿರು ಬಿಟ್ಟು ಬೇರೆ ಬೇಕಿಲ್ಲ
* ಪ್ರತಿ ಕ್ಷಣ ಬದಲಾಗೋ ಈ ಭೂಮಿಯಲ್ಲಿ ಎಂದಿಗೂ ಬದಲಾಗದೇ ಉಳಿಯುವುದೇ ನನ್ನ ಪ್ರೀತಿ
* ತನುಮನದಲ್ಲಿ ಒಂದಾಗಿ ಬೆರೆತ ನಿನ್ನ ಹೇಗೆ ಮರೆಯಲಿ ಚಿನ್ನ. ಹಾಕಿರುವೆ ಹೃದಯಕ್ಕೆ ನೀ ಕನ್ನ
ಪ್ರೇಮಿಗಳ ವಿಹಾರಕ್ಕಾಗಿ ನಮ್ಮ ಸಲಹೆ
* ಕಡಲ ಕಿನಾರೆಯ ಉಸುಕಿನ ಹಾದಿಯಲಿ ಮೂಡಿದ ಹೆಜ್ಜೆ ಗುರುತಿನಲ್ಲಿ ನಿನ್ನವೆಷ್ಟು ನನ್ನವೆಷ್ಟು
* ನಿನ್ನ ಕಂಗಳಲ್ಲಿ ತುಂಬಿದ ಹನಿಯು ಹರಿಯುವ ಮುನ್ನ ನನ್ನೊಡಲ ಸೇರಿಕೋ ಬಾ ಚಿನ್ನ
* ನನ್ನ ನಾ ಮರೆತು ನಿನ್ನೊಡನೆ ಬೆರೆತು ಅತಿಮಧುರ ಈ ಅನುರಾಗ ಎನ್ನುವಾಗ ಹೊತ್ತು ಮೀರಿತ್ತು
* ತಾರೆಯರೊಡನೆ ಮಾತಾಡಲು ಕಲಿಸಿಕೊಟ್ಟೆ. ಆದ್ರೆ ನಿನಗೆ ಪ್ರೇಮ ನಿವೇದನೆ ಮಾಡುವುದಾ ಮರೆಸಿಬಿಟ್ಟೆ
* ಯಾರು ಕೂಗಿ ಕೇಳಿದರೂ ಹೇಳುವೇ ನೀ ಇರುವುದೇ ನನಗಾಗಿ ಪ್ರೀತಿ ಇರದ ಜಗ ಇರುವುದು ಏತಕ್ಕಾಗಿ
* ಮೊದಲ ಸ್ಪರ್ಶದ ಪುಳಕ ಮುಂಗಾರು ಮಳೆಯ ಜಳಕ ಇರಲಿ ಸದಾ ಪ್ರೇಮಿ ನೀ ಇರುವ ತನಕ
* ಕವಿಯಲ್ಲ ನಾ ನಿನ್ನ ಸದಾ ಹೊಗಳಲು. ಎಂದೂ ಮುಗಿಯದ ಪ್ರೀತಿಯಿದೆ ಅರಿತಿಕೋ ಮನಸೊಲು
* ಆಷಾಢದ ಗಾಳಿಗೆ ಸಿಕ್ಕ ನಿನ್ನ ಮುಂಗುರಳ ನೃತ್ಯ ಅಹಾ! ಖಂಡಿತವಾಗಿಯೂ ಅದು ರಸಿಕ ವಾಯುವಿನದೇ ಕೃತ್ಯ
* ಚುಂಬನದ ಸವಿಗಿಂತ ಅಂಬರದ ಬೆಳ್ಮುಗಿಲಿಗಿಂತ ನವಿಲಿನ ನೃತ್ಯಕ್ಕಿಂತ ಚೆಂದ ನನ್ನ ಪ್ರೀತಿ
ಸ್ವಲ್ಪ ವಿರಹ, ಹೆಚ್ಚು ಪ್ರೀತಿ:
* ದೂರಾಗು ಮತ್ತೆ ಕಾಡದಿರು ಬೆಳದಿಂಗಳಿನಲ್ಲಿ ಒಂಟಿತನವ ಅಣುಕಿಸದಿರು ಪ್ರೀತಿಗೆ ಬೆಲೆಯುಂಟು
* ನೀ ದೂರಾದರೆ ಕಾಡುತ್ತೆ ನಿನ್ನ ಪ್ರೀತಿಯ ಅಭಾವ. ಪ್ರೀತಿಸುವುದು ನಿನ್ನ ಸ್ವಭಾವ
* ಪ್ರೀತಿ ಮಾಡುವುದು ಸುಲಭ ಆದರೆ ಅದೇ ಪ್ರೀತಿ ಪಡೆಯುವುದು ದುರ್ಲಭ
* ಹೇಗೆ ಹೇಳಲಿ ನೀ ಸಿಗಲಿಲ್ಲವೆಂದು. ಪ್ರತಿದಿನ ನನ್ನ ಕಣ್ಣು ನಿನ್ನ ಸಂಧಿಸಿದರೂ ಮಾತಿಗೆ ಬರ ಬಂದಿತೆಂದು
* ಅದೃಷ್ಟವ ಹಳಿಯದೆ ನಿನ್ನಿಷ್ಟದ ಹಾದಿಯ ನೀ ತುಳಿ. ನಿನಗೆ ಕಷ್ಟವಾದಾಗ ನನ್ನ ನೆನೆ
* ಮರೆತವರನ್ನು ನೆನೆದು ಕೊರಗಬೇಡ. ನಿನ್ನ ಪ್ರೀತಿಯ ಅರಿಯದವರ ಬಗ್ಗೆ ಮರುಕಬೇಡ
* ಕಣ್ಣಿನ ಚಂಚಲತೆ ಮನಸ್ಸಿಗೆ ಬರದಿರಲಿ. ಹೃದಯದಿ ಮೂಡಿರುವ ಚಿತ್ರ ಮರೆಯಾಗದಿರಲಿ
* ನೀರಿಕ್ಷೆಯಿಲ್ಲ...ನೀ ಬರುವೆಯೆಂದು, ನನಗರಿವಿದೆ ನನ್ನೊಡಲಲ್ಲೇ ನೀ ಇರುವಾಗ ಬೇರೆಡೆ ಸಿಗುವುದಿಲ್ಲವೆಂದು
* ಪ್ರೇಮಿ ಜೊತೆಯಿರುವಾಗ ಸಮಯ ಸಾಲದು, ವಿರಹದಿ ಸುರಿವ ಕಂಬನಿಗೆ ಕಡಲು ಸಾಲದು.












Click it and Unblock the Notifications