ಪ್ರೇಮ ಕತೆಗಳಿಗೆ ಕೊನೆಯುಂಟೆರಾಧಾಮಾಧವರಿರೋ ತನಕಪ್ರೇಮ ಪ್ರವಾಹಕೆ ಯಾವ ತಡೆಆಸ್ತಿ ಅಂತಸ್ತು ಧನಕನಕ...ಹಾಗಂತ ಬಿ. ಆರ್‌. ಲಕ್ಷ್ಮಣ ರಾವ್‌ ಬರೆಯುವ ಹೊತ್ತಿಗಾಗಲೇ ಸಾವಿರಾರು ಪ್ರೇಮಗೀತೆಗಳ ಮಲ್ಲಿಗೆ ಕಂಪು ಎಲ್ಲ ಮನವನಗಳನ್ನು ಹಬ್ಬಿಯಾಗಿತ್ತು. ಇವತ್ತಿಗೂ ಎಲ್ಲರೂ ನೆನಪಿಸಿಕೊಳ್ಳುವ ಪ್ರೇಮಗೀತೆಗಳ ಸಂಖ್ಯೆ ನೂರಕ್ಕೂ ಹೆಚ್ಚಿದೆ. ಬಿ. ಎಂ. ಶ್ರೀಯವರಿಂದ ಮೊದಲುಗೊಂಡು ಜಯಂತ ಕಾಯ್ಕಿಣಿಯವರ ತನಕ ಎಲ್ಲರೂ ಪ್ರೇಮ ಗೀತೆಗಳಿಗೆ ಮನಸೋತವರೇ.ಅಂಥ ಪ್ರೇಮ ಗೀತೆಗಳ ಮಂದಾರ, ಪ್ರಣಯದ ಮಲ್ಲಿಗೆ, ಪ್ರೀತಿಯ ಕನಕಾಂಬರವನ್ನು ಅಚ್ಚ ಕನ್ನಡದ ಅಕ್ಷರ ಮಾಲೆಯಲ್ಲಿ ಕಟ್ಟಿ ನಿಮ್ಮ ಮುಂದಿರಿಸುತ್ತಿದ್ದೇವೆ. ಅಕಾರಣ ಪ್ರೀತಿಗೆ ಜಯವಾಗಲಿ. ನುಡಿಯ ಮುಡಿಯೇರಿದ ಈ ಒಲವ ಪುಷ್ಪ ಮಾಲಿಕೆ ಎಲ್ಲ ಜೀವಗಳ ಕಾಯಲಿ.

ಮುಖಪುಟ --> ಪ್ರೇಮಿಗಳ ದಿನ --> ಪ್ರೇಮ ಕವನ

ಫೆಬ್ರವರಿ 14, 2003
ಕೆಲವರಿಗೆ ಮೆಚ್ಚು , ಹಲವರಿಗೆ ಬೆಚ್ಚು !

ಬೆಂಗಳೂರಿನ ಗ್ರೀಟಿಂಗು ದುಕಾನುಗಳಲ್ಲಿ ಹೃದಯದ ಸಿಂಬಲ್ಲಿನ ಮೇಲೆ ಸ್ವರ್ಣಾಕ್ಷರ ಇರುವ ಚೆಂದದ ಕಾರ್ಡಿಗೆ ಹುಡುಕಾಡುವ ವಿದ್ಯಾರ್ಥಿಗಳ ದಂಡು. ‘ರಾತ್ರಿ ಎಲ್ಲಿ ಸಿಸ್ಯಾ ಪಾರ್ಟಿ ’ ಅಂತ ಉಡಾಫೆ ಧಾಟಿಯ ಮಾತಲ್ಲಿ ಪ್ರೋಗ್ರಾಮಿನ ಸಿದ್ಧತೆ. ‘ಅವಳು ಒಪ್ಪದಿದ್ದರೆ ಇವತ್ತು ಸುಮ್ನೆ ಬಿಡಲ್ಲ ಮಚ್ಚಿ’ ಎಂಬ ಹುಚ್ಚು ಮೊಂಡುತನ. ಸುಂದರವಾಗಿರುವ ತಮ್ಮ ಮಗಳ ಮೇಲೆ ಯಾವ ಗಿಡಗನಂಥಾ ಹುಡುಗ ಎರಗುವನೋ ಎಂಬ ಆತಂಕದಿಂದ ‘ಇವತ್ತು ಕಾಲೇಜಿಗೇ ಹೋಗಬೇಡಮ್ಮ’ ಅಂದ ಅಪ್ಪ- ಅಮ್ಮ. ‘ಹುಡುಗ ಮುಂಡೇವಕ್ಕೆ ಹೆಂಡ ಕುಡಿಸಿದಂಗಾತು’ ಎಂಬ ತಾತನ ಶಾಪ... ಹೀಗಿದೆ ನೋಡಿ ಬೆಂಗಳೂರು ವ್ಯಾಲಂಟೈನ್ಸ್‌ ಡೇ.

ಬನ್ನಿ, ಒಂದಷ್ಟು ಜನರನ್ನ ‘ವ್ಯಾಲಂಟೈನ್ಸ್‌ ಡೇ’ ವಿಷಯ ಇಟ್ಟುಕೊಂಡೇ ಮಾತಾಡಿಸೋಣ...

ಲಲಿತಾ, ಗೃಹಿಣಿ, ಮಲ್ಲೇಶ್ವರಂ : ಈ ಪ್ರೇಮಿಗಳ ದಿನ ಅನ್ನೋದು ನಮ್ಮಂಥವರಿಗಲ್ಲ ಸ್ವಾಮಿ. ಪಾಶ್ಚಿಮಾತ್ಯ ದೇಶಗಳಿಗೇ ಇದು ಸರಿ. ಯಾಕೆಂದರೆ, ಆ ದೇಶಗಳ ಫಾರ್ಮಾಲಿಟಿಗೆ ಇಂಥಾ ದಿನಗಳು ಹೇಳಿ ಮಾಡಿಸಿದ ಹಾಗಿವೆ. ನಡು ಬೀದಿಯಲ್ಲೇ ತುಟಿಗೆ ತುಟಿ ಕೊಟ್ಟು ಚುಂಬಿಸುವ ಜಾಯಮಾನದ ಆ ಜನರೆಲ್ಲಿ, ನಾಚಿ ನೀರಾಗುವ ನಮ್ಮ ಜನರೆಲ್ಲಿ ? ಸೇಂಟ್‌ ವ್ಯಾಲಂಟೈನ್‌ ಹೆಸರಲ್ಲಿ ಈ ದಿನ ಆಚರಿಸುತ್ತಾರೆ. ಸೇಂಟ್‌ ಅಂದರೆ ಸಂತ ಅಂತ ಅರ್ಥ ಅಲ್ಲವೇ? ಒಬ್ಬ ಸಂತ ಹೋಗಿ ಯಾರದೋ ಮಗಳಿಗೋ, ಹೆಂಡತಿಗೋ ಸೆಕ್ಸಿ ಸಂದೇಶ ಹಾಗೂ ಉಡುಗೊರೆ ಕೊಟ್ಟರೆ, literally ಚಪ್ಪಲಿ ತಗೊಂಡು ಹೊಡೀತಾರೆ.

ಈ ವ್ಯಾಲಂಟೈನ್ಸ್‌ ಡೇ ನೆಪದಲ್ಲಿ ಪೋಕರಿ ಪಡ್ಡೆಗಳು ಬೆದೆ ಹತ್ತಿದ ಪ್ರಾಣಿಗಳ ಥರ ಆಡೋದನ್ನ ನೋಡಿದರೆ ಕ್ಯಾಕರಿಸಿ ಉಗಿಯೋಣ ಅನಿಸುತ್ತೆ. ಇಂಥಾ ದಿನಗಳು ಹುಚ್ಚು ಕುದುರೆಗೆ ಹೆಂಡ ಕುಡಿಸಿದ ಹಾಗಾಗಿವೆ. ಕೈ ಎತ್ತಿ ಮುಗಿಯಬೇಕಾದ ನಮ್ಮ ಸಂಸ್ಕೃತಿಯಲ್ಲಿ ಇಂಥಾ ಹುಚ್ಚು ದಿನಾಚರಣೆಗಳು ಕಪ್ಪು ಚುಕ್ಕೆಗಳು ಅನ್ನೋದರಲ್ಲಿ ಅನುಮಾನವೇ ಇಲ್ಲ.

ನಟೇಶ, ವಿದ್ಯಾರ್ಥಿ, ಶೇಷಾದ್ರಿಪುರಂ : ವ್ಯಾಲಂಟೈನ್ಸ್‌ ಡೇನಿಂದ ನಮ್ಮ ಸಂಪ್ರದಾಯ ಏನೂ ಹಾಳುಬಿದ್ದು ಹೋಗಲ್ಲ. ಯಾವುದೇ ಆಚರಣೆಯಾಗಲಿ ಮಿತಿಯಾಳಗಿದ್ದರೆ, ಅದಕ್ಕೆ ಸುಂದರವಾದ ಅರ್ಥವಿರುತ್ತದೆ. ಇಷ್ಟ ಪಟ್ಟ ಹುಡುಗಿಗೆ ಮನದಾಸೆ ಹೇಳೋದರಲ್ಲಿ ತಪ್ಪೇನಿಲ್ಲ. ಆದರೆ, ಒಲ್ಲದವಳನ್ನು ಬಲಾತ್ಕಾರ ಮಾಡುವುದು ಪಶು ಧೋರಣೆ. ನನಗಂತೂ ಮೆಚ್ಚಿದ ಹುಡುಗಿಗೆ ಕೆಂಪು ಗುಲಾಬಿ ಕೊಡುವ ಮುಫತ್‌ ಅವಕಾಶ ಇದು. ಅವಳು ಅದನ್ನು ಇಸಿದುಕೊಂಡು, ನನ್ನ ಪ್ರೇಮದ ಕನಕಾಂಗಿ ಆಗುತ್ತಾಳೆಂಬ ವಿಶ್ವಾಸವಿದೆ. ಹಾಗಾಗದಿದ್ದರೆ, ಜನ್ಮದಲ್ಲೇ ವ್ಯಾಲಂಟೈನ್ಸ್‌ ಡೇ ಆಚರಿಸೋಲ್ಲ.

ಶೈನಿ ಅಬ್ರಹಾಂ, ವಿದ್ಯಾರ್ಥಿನಿ, ಇಂದಿರಾನಗರ : ವ್ಯಾಲಂಟೈನ್ಸ್‌ ಡೇನ ಯಾರು oppose ಮಾಡ್ತಿದಾರೋ ಅವರೆಲ್ಲಾ idiots. ಸಂಸ್ಕೃತಿಯ ಬಗ್ಗೆ ಭಾಷಣ ಹೊಡೆಯುವ ಈ ಜನರನ್ನ ಮೊದಲು ಸಿನಿಮಾ ಥಿಯೇಟರಲ್ಲಿ ಕೂರಿಸಿ. ನಮ್ಮ ಸಂಸ್ಕೃತೀನ ಅಲ್ಲಿ ಹೆಂಗೆ ತೋರಿಸ್ತಿದಾರೆ ಅಂತ ಗೊತ್ತಾಗತ್ತೆ.

ಶಂಕರ ನಾರಾಯಣ್‌, ವೈದ್ಯ, ಚಾಮರಾಜ ಪೇಟೆ : ಇವತ್ತಿನ ಹುಡುಗ- ಹುಡುಗಿಯರು ಪ್ರೇಮಕ್ಕೆ ಕೊಡುವ definition ಕೇಳಿದರೆ ಭಯವಾಗುತ್ತೆ. ನನಗೂ ವಯಸ್ಸಿಗೆ ಬಂದ ಒಬ್ಬಳು ಮಗಳಿದ್ದಾಳೆ. ಯಾವನೋ ಹುಡುಗ ಬಂದು ಗುಲಾಬಿ ಕೊಟ್ಟೇಟಿಗೇ ಅವಳು ಅವನ ಪ್ರೇಮಿಯಾದರೆ, ಅದು ಹುಚ್ಚಾಟ ಅಲ್ಲದೆ ಇನ್ನೇನು. ಏನೋ ಪ್ರೇಮದ ನೆವದಲ್ಲಿ ನಾಲ್ಕು ಜನ ಸೇರಿ, ಒಳ್ಳೆಯ ಊಟ ಮಾಡಲಿ. ಒಳ್ಳೆಯ ಸಿನಿಮಾ ನೋಡಲಿ. ಸಭ್ಯತೆಯ ಎಲ್ಲೆ ಮೀರದೆ ಹಾಡಿ, ಕುಣಿಯಲಿ. ಆದರೆ ಸಂಬಂಧಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲು ಇಂಥಾ ದಿನಗಳು license ಕೊಡುತ್ತಿವೆ ಅನಿಸುತ್ತೆ. ಪ್ರೇಮಿಗಳ ದಿನ ಇರುವ ಆರ್ಭಟ ಅಮ್ಮನ ದಿನಕ್ಕೆ ಯಾಕೆ ಇರೋಲ್ಲ ?

Click here to go to top
ಮುಖಪುಟ / ಪ್ರೇಮಿಗಳ ದಿನ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+