ಪ್ರೇಮ ಕತೆಗಳಿಗೆ ಕೊನೆಯುಂಟೆರಾಧಾಮಾಧವರಿರೋ ತನಕಪ್ರೇಮ ಪ್ರವಾಹಕೆ ಯಾವ ತಡೆಆಸ್ತಿ ಅಂತಸ್ತು ಧನಕನಕ...ಹಾಗಂತ ಬಿ. ಆರ್‌. ಲಕ್ಷ್ಮಣ ರಾವ್‌ ಬರೆಯುವ ಹೊತ್ತಿಗಾಗಲೇ ಸಾವಿರಾರು ಪ್ರೇಮಗೀತೆಗಳ ಮಲ್ಲಿಗೆ ಕಂಪು ಎಲ್ಲ ಮನವನಗಳನ್ನು ಹಬ್ಬಿಯಾಗಿತ್ತು. ಇವತ್ತಿಗೂ ಎಲ್ಲರೂ ನೆನಪಿಸಿಕೊಳ್ಳುವ ಪ್ರೇಮಗೀತೆಗಳ ಸಂಖ್ಯೆ ನೂರಕ್ಕೂ ಹೆಚ್ಚಿದೆ. ಬಿ. ಎಂ. ಶ್ರೀಯವರಿಂದ ಮೊದಲುಗೊಂಡು ಜಯಂತ ಕಾಯ್ಕಿಣಿಯವರ ತನಕ ಎಲ್ಲರೂ ಪ್ರೇಮ ಗೀತೆಗಳಿಗೆ ಮನಸೋತವರೇ.ಅಂಥ ಪ್ರೇಮ ಗೀತೆಗಳ ಮಂದಾರ, ಪ್ರಣಯದ ಮಲ್ಲಿಗೆ, ಪ್ರೀತಿಯ ಕನಕಾಂಬರವನ್ನು ಅಚ್ಚ ಕನ್ನಡದ ಅಕ್ಷರ ಮಾಲೆಯಲ್ಲಿ ಕಟ್ಟಿ ನಿಮ್ಮ ಮುಂದಿರಿಸುತ್ತಿದ್ದೇವೆ. ಅಕಾರಣ ಪ್ರೀತಿಗೆ ಜಯವಾಗಲಿ. ನುಡಿಯ ಮುಡಿಯೇರಿದ ಈ ಒಲವ ಪುಷ್ಪ ಮಾಲಿಕೆ ಎಲ್ಲ ಜೀವಗಳ ಕಾಯಲಿ.

ಮುಖಪುಟ --> ಪ್ರೇಮಿಗಳ ದಿನ --> ಪ್ರೇಮ ಕವನ

ಫೆಬ್ರವರಿ 14, 2003
ಈ ಪರಿಯ ಪ್ರೀತಿ

*ಪುರು

ಹೊಳೆಯಾಗಿ ಹರಿಯುತ್ತಾಳೆ ಹೆಣ್ಣು
ಅಣೆಕಟ್ಟೆಯಾಗಿ ತುಂಬಿಕೊಳ್ಳುತ್ತಾನೆ ಗಂಡು

ಹೂವಾಗಿ ಅರಳುತ್ತಾಳೆ ಹೆಣ್ಣು
ದುಂಬಿಯಾಗಿ ಮುತ್ತಿಕ್ಕುತ್ತಾನೆ ಗಂಡು

ಹೆಣ್ಣು ತಾರೆಯಾಗುತ್ತಾಳೆ
ಗಂಡು ದುಂಬಿಯಾಗುತ್ತಾನೆ

ಅವಳು ಬಯಲಾಗುತ್ತಾಳೆ, ಬೆರಗಾಗುತ್ತಾಳೆ
ಅವನು ಬತ್ತಲಾಗುತ್ತಾನೆ, ಬೆಪ್ಪಾಗುತ್ತಾನೆ

ಅವಳು ನಗುತ್ತಾಳೆ
ಅವನು ದನಿಯಾಗುತ್ತಾನೆ
ಅವಳು ಅಳುತ್ತಾಳೆ
ಅವನು ಕಣ್ಣ ಬಿಸಿಯಾಗುತ್ತಾನೆ

ಅವನು ಅವಳನ್ನು ಪ್ರೀತಿಸುತ್ತಾನೆ
ಅವಳು ಅವನ ಪ್ರೀತಿಯನ್ನು ಪ್ರೀತಿಸುತ್ತಾಳೆ.

Click here to go to top
ಮುಖಪುಟ / ಪ್ರೇಮಿಗಳ ದಿನ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+