ಇದೇ ಪ್ರೀತಿ ನೀನು ಮಾಡಿ ನೋಡು
ಎಲ್. ಬಸವರಾಜು
ತೋಳಿಗೆ ತೋಳು ಹೆಣೆದು ಕುಣಿ
ಎಡಕ್ಕೆ ಬಲಕ್ಕೆ ಮಣಿ
ನಡು ನಡುವೆ ನುಣುಚಿಕೋ
ಹಿಡಿಯ ಬಂದರೆ ಮರಗಿಡಗಳ ಬಳಸು
ಇದೇ ಪ್ರೀತಿ
ನೀನು ಮಾಡಿನೋಡು-
ತಿಳಿಯದಿದ್ದರೆ
ಸಿನಿಮಾ ಮಂದಿರಗಳಲ್ಲಿ ತಾಲೀಮು ಮಾಡು
ಉಮರ ಖಯ್ಯಾಮ್ (ಅನುವಾದ : ಡಿವಿಜಿ)
ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು
ರೊಟ್ಟಿಯಾಂದಿನಿಸೊಂದು ಕುಡಿಕೆಯಲಿ ಮಧುವು
ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ
ಕಾಡಾದೊಡೇನದುವೆ ಸಗ್ಗ ಸುಖವೆನಗೆ












Click it and Unblock the Notifications