ಲೂಟಿ ಮಾಡಾಕ ಬಂದ ಮಾಟಗಾರ
ಚಂದ್ರ ಶೇಖರ ಕಂಬಾರ
ಹಾರಿ ಬಂದವನೇ ಎವ್ವಾ ಏರಿ ಬಂದನೇ
ಹಾರಿ ಬಂದನೇ ಮೈಮ್ಯಾಲೇರಿ ಬಂದನೇ
ಯಾರ್ಯಾರಿಲ್ಲದ ಸಮಯ ಸಾಧಿಸಿ ಬಂದಿದ್ದಾ
ಸದ್ದು ಮಾಡದೇ ಕದ್ದು ಒಳಗೆ ನುಗ್ಗಿದ್ದಾ
ಹುತ್ತದೊಳಗಿನ ಸತ್ಯ ಹೊತ್ತಿಗೆ ಹೊರಗ ಬಂಧಾಂಗ
ಚಿಗುರು ಹುಲ್ಲಿನ ಪುಳಕ ಮೈಗಿ ಧರಿಸಿದ್ದಾ
ನಕ್ಕು ನಗಿಯಾಗ ಮಲ್ಲಿಗೆ ಹೂವ ತುಳುಕಿದ್ದಾ
ಸೂರ್ಯ ಚಂದ್ರಾಮರನ್ನ ಕಣ್ಣಿನಾಗಿಟಗೊಂಡಿದ್ದಾ
ಹರುಷವಾಗುವ ಹಾಗೆ ಸರಸವಾಡಿದ್ದ
ಮಾತು ಮಾತಿಗೆ ನಗಿಸಿ ಮೆಚ್ಚ ಮಾಡಿದ್ದಾ
ತಿಳಿದೂ ತಿಳಿಯೋದರೊಳಗ ಹೃದಯದ ಬೀಗ ತೆರೆದಿದ್ದ
ಭಾಗ್ ಸಿಕ್ಕವರ್ಹಾಂಗ ಹಿಗ್ಗಿ ನಲಿದಿದ್ದ
ಕರಣದ ಕೊಬ್ಬಿನಾಗ ಉಬ್ಬಿ ಹೋಗಿದ್ದಾ
ಹುದುಗಿದ್ದ ಸುಖಗಳ ಕೆಣಕಿ ಹುಚ್ಚು ಹತ್ತಿಸಿ ಕುಣಿದಿದ್ದಾ
ಲೂಟಿ ಮಾಡಾಕ ಬಂದ ಮಾಟಗಾರೇನ
ಸುಖದ ಶಿಖರದ ಮ್ಯಾಲ ಹತ್ತಿ ನಿಂತಾನ
ಇಕ್ಕಟ್ಟೀನ ಬಿಕ್ಕಟ್ಟೆಲ್ಲ ಒಟ್ಟಿಗಿ ದೂರ ಮಾಡಿದ್ದಾ ...












Click it and Unblock the Notifications