ನೀನು ಮುಗಿಲು ನಾನು ನೆಲ ನಿನ್ನ ಒಲವೆ ನನ್ನ ಬಲ
ಜಿ.ಎಸ್. ಶಿವರುದ್ರಪ್ಪ
ನೀನು ಮುಗಿಲು ನಾನು ನೆಲ
ನಿನ್ನ ಒಲವೆ ನನ್ನ ಬಲ
ನಮ್ಮಿಬ್ಬರ ಮಿಲನದಿಂದ
ಉಲ್ಲಾಸವೇ ಶ್ಯಾಮಲ
ನಾನು ಎಳೆವೆ ನೀನು ಮಣಿವೆ
ನಾನು ಕರೆವೆ ನೀನು ಸುರಿವೆ
ನಮ್ಮಿಬ್ಬರ ಒಲುಮೆ ನಲುಮೆ
ಜಗಕಾಯಿತು ಹುಣ್ಣಿಮೆ
ನಾನಚಲದ ತುಟಿಯೆತ್ತುವೆ
ನೀ ಮಳೆಯಾಲು ಮುತ್ತನಿಡುವೆ
ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ
ಸೂರ್ಯ ಚಂದ್ರ ಚಿಕ್ಕೆಗಣ್ಣ
ತೆರೆದು ನೀನು ಸುರಿವ ಬಣ್ಣ
ಹಸಿರಾಯಿತು ಹೂವಾಯಿತು
ಚೆಲುವಾಯಿತು ಈ ನೆಲ
ನೀನು ಗಂಡು ನಾನು ಹೆಣ್ಣು
ನೀನು ರೆಪ್ಪೆ ನಾನು ಕಣ್ಣು
ನಮ್ಮಿಬ್ಬರ ಮಿಲನದಿಂದ
ಸಫಲವಾಯ್ತು ಜೀವನ...












Click it and Unblock the Notifications