ಸಾಗಲಿ ನಿಮ್ಮ ಪ್ರೇಮ ನಾವೆ.....
ಒಂದು ಮಾದರಿ ಪ್ರೇಮ ಪತ್ರ..
ಪ್ರಿಯ ನಿಹಾರಿಕಾ,
ಸದ್ಯಕ್ಕಂತೂ ನಾನು ನಿನ್ನ ಸ್ವಯಂಸೇವಕ. ದುಷ್ಯಂತನಿಗೆ ಉಂಗುರದಲ್ಲಿ ಕಂಡ ಸಿದ್ಧಿಯಂತೆ, ಹಾದಿಹೋಕನಿಗೆ ಡಂಗುರದಲ್ಲಿ ಸಿಕ್ಕ ಸುದ್ದಿಯಂತೆ, ಭಕ್ತನಿಗೆ ಸತ್ಸಂಗದಲ್ಲಿ ಮೊಳೆತ ಬುದ್ದಿಯಂತೆ...ನೀನು ನನಗೆ ಸಿಕ್ಕಿದೆ. ನಿಹಾರಿಕಾ.... ಪ್ಲೀಸ್ ಕರಗಿಹೋಗಬೇಡ. ಮಂಜಿನಹಾಗೆ, ರಕ್ತಗತವಾಗಿ ನಂಜಿನ ಹಾಗೆ. ಜಾರಿಹೋಗದಿರು ಮುತ್ತಿನ ಹಾಗೆ, ಇಳಿದು ಹೋಗಬೇಡ ಮತ್ತಿನ ಹಾಗೆ, ಜೀರ್ಣವಾಗುವ ತುತ್ತಿನ ಹಾಗೆ. ಸದಾ ಜತೆಗಿರು , ಮುಗ್ಧೆಯ ಹೆರಳಿನ ಹಾಗೆ, ಬೆಳಕಿನ ನೆರಳಿನ ಹಾಗೆ..
ಮತ್ತೆ ಬರೆಯುತ್ತೇನೆ...
ನಿನ್ನ
ನಿರಂಜನ












Click it and Unblock the Notifications